Cabinet Ministers: ಶನಿವಾರ ಪ್ರಮಾಣ ವಚನ ಸ್ವೀಕರಿಸಲಿರುವ 24 ಸಚಿವರ ಪಟ್ಟಿ ಇಲ್ಲಿದೆ
ಬೆಂಗಳೂರು, ಮೇ. 26: ಕರ್ನಾಟಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, 24 ಸಚಿವರು ಮೇ 27ರಂದು (ಶನಿವಾರ) ಬೆಳಗ್ಗೆ 11.45ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ಕಾರದ ಮನವಿಯಂತೆ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಸದ್ಯ ರಾಜಭವನಕ್ಕೆ ನೂತನ ಸಚಿವರ ಪಟ್ಟಿ ರವಾನೆಯಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್, ಈ ಹಿಂದೆ ಎಂಟು ಮಂದಿ ಸದಸ್ಯರನ್ನು ಸಚಿವರನ್ನಾಗಿಸಿ ಸಂಪುಟಕ್ಕೆ ಸೇರ್ಪಡೆ ಮಾಡಿತ್ತು. ಈಗ ಮತ್ತೆ 24 ಶಾಸಕರು ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪುಟ ವಿಸ್ತರಣೆಗೆ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ಸಂಪುಟಕ್ಕೆ ಸೇರ್ಪಡೆಯಾಗಿರುವ ಸಚಿವರ ಪಟ್ಟಿ ಹೀಗಿದೆ
1. ಎಚ್.ಕೆ.ಪಾಟೀಲ್ (ಗದಗ)
2. ಕೃಷ್ಣ ಭೈರೇಗೌಡ(ಬೆಂಗಳೂರು)
3. ಎನ್.ಚಲುವರಾಯಸ್ವಾಮಿ( ಮಂಡ್ಯ)
4. ಕೆ. ವೆಂಕಟೇಶ್ (ಮೈಸೂರು)
5. ಡಾ. ಎಚ್.ಸಿ.ಮಹದೇವಪ್ಪ
6. ಈಶ್ವರ ಖಂಡ್ರೆ ( ಬೀದರ್)
7. ಕೆ.ಎನ್.ರಾಜಣ್ಣ( ತುಮಕೂರು)
8. ದಿನೇಶ್ ಗುಂಡೂರಾವ್(ಬೆಂಗಳೂರು)

9. ಶರಣಬಸಪ್ಪ ದರ್ಶನಾಪುರ( ಯಾದಗಿರಿ)
10. ಶಿವಾನಂದ ಪಾಟೀಲ( ವಿಜಯಪುರ)
11. ತಮ್ಮಾಪುರ್ ರಾಮಪ್ಪ ಬಾಳಪ್ಪ
12. ಎಸ್.ಎಸ್.ಮಲ್ಲಿಕಾರ್ಜುನ( ದಾವಣಗೆರೆ)
13. ಶಿವರಾಜ ತಂಗಡಗಿ(ಕೊಪ್ಪಳ)
14. ಡಾ.ಶರಣಪ್ರಕಾಶ್ ಪಾಟೀಲ್ (Kalaburagi)
15. ಮಂಕಾಳ ವೈದ್ಯ( ಉತ್ತರ ಕನ್ನಡ)
16. ಲಕ್ಷ್ಮಿ ಹೆಬ್ಬಾಳಕರ್(ಬೆಳಗಾವಿ)
17. ರಹೀಂ ಖಾನ್
18. ಡಿ.ಸುಧಾಕರ್
19. ಸಂತೋಷ್ ಎಸ್. ಲಾಡ್
20. ಎಸ್.ಎನ್.ಬೋಸರಾಜು( ರಾಯಚೂರು)
21. ಸುರೇಶ್ ಬಿಎಸ್
22. ಮಧು ಬಂಗಾರಪ್ಪ(ಶಿವಮೊಗ್ಗ)
23. ಡಾ. ಎಂಸಿ ಸುಧಾಕರ್
24. ಬಿ.ನಾಗೇಂದ್ರ( ಬಳ್ಳಾರಿ)












Click it and Unblock the Notifications