ಮಹಿಳೆ, ಮಕ್ಕಳು, ವಿಕಲಚೇತನರ ಕಡೆ ಚಿತ್ತ ಹರಿಸಿದ ಸಿದ್ದು ಬಜೆಟ್

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,18: 2016-17 ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣದ ಕಡೆಗೂ ತಮ್ಮ ಚಿತ್ತ ಹರಿಸಿದ್ದಾರೆ.

ಮಕ್ಕಳ ಅಪೌಷ್ಠಿಕತೆ ನಿವಾರಣೆ, ಮಹಿಳೆಯರ ಸ್ವಾವಲಂಬನ ಜೀವನ ನಡೆಸಲು ಅನುವು ಮಾಡಿಕೊಡಲು ಚಿಂತನೆ, ವಿಕಲ ಚೇತನರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಯಾರಿಗೆ ಯಾವ ಯೋಜನೆ, ಎಷ್ಟು ಹಣ ವಿನಿಯೋಗಿಸಲಾಗಿದೆ ಇಲ್ಲಿದೆ ಸಂಪೂರ್ಣ ವಿವರ.[ಬಜೆಟ್ ನಲ್ಲಿ ಕನ್ನಡ ಭಾಷೆಗೆ ಸಿದ್ದರಾಮಯ್ಯ ಕೊಟ್ಟಿದ್ದೇನು?]

Karnataka Budget: Women, Children, disabled and Senior Citizens welfare


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನ ಯಾವ ಯೋಜನೆಗಳಿವೆ?

* 3.6 ಕೋಟಿ ರೂ ಬಾಲ ಯೋಜನೆ ಅಡಿಯಲ್ಲಿ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ 25,000 ಮಕ್ಕಳಿಗೆ 180 ದಿನಗಳ ಅವಧಿಗೆ ಪ್ರತಿದಿನ 2 ಗ್ರಾಂಗಳ ಸ್ಪಿರುಲಿನಾವನ್ನು ಒದಗಿಸಲಾಗುವುದು.

* 42 ಕೋಟಿ ರೂ ಮಾತೃಪುಷ್ಠಿವರ್ಧಿನಿ ಯೋಜನೆಯಡಿ ಹಿಂದುಳಿದ ತಾಲ್ಲೂಕುಗಳ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೈಕ್ರೋನ್ಯೂಟ್ರಿಯಂಟ್ಸ್ ಗಳನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

* 42.50 ಕೋಟಿ ರೂ ಕ್ಷೀರಭಾಗ್ಯ ಯೋಜನೆ ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು ವಿತರಣೆ ಮಾಡಲಾಗುತ್ತದೆ

* 4,000 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.[ಕರೆಂಟ್ ಕೈ ಕೊಟ್ಟರೂ ವಿದ್ಯುತ್ ಕ್ಷೇತ್ರಕ್ಕೆ ಹಲವು ಕೊಡುಗೆ]

* ಬಾಲ ಸ್ನೇಹಿ ಕೇಂದ್ರಗಳ ಯೋಜನೆ ಅಡಿಯಲ್ಲಿ 10,000 ಅಂಗನವಾಡಿ ಕೇಂದ್ರಗಳನ್ನು ಶಿಶು ಸ್ನೇಹಿ ಕೇಂದ್ರಗಳನ್ನಾಗಿ ಪರಿವರ್ತಿಸಲು ಆಲೋಚಿಸಿದ್ದು, ಪ್ರತಿ ಕೇಂದ್ರಕ್ಕೆ 10,000ರೂ ನೀಡಲಾಗುತ್ತದೆ.

* ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಪೌಷ್ಠಿಕಾಂಶ ಮಟ್ಟ ಸುಧಾರಣೆಗೆ ಪಾವತಿಸುವ ಮೊತ್ತವನ್ನು ರೂ.750 ರಿಂದ ರೂ.2000 ಗಳಿಗೆ ಹೆಚ್ಚಳ ಮಾಡಲಾಗುವುದು. ಇದಕ್ಕೆ 3.12 ಕೋಟಿ ರೂ ಹಣವನ್ನು ಮೀಸಲಿಡಲಾಗಿದೆ.

* 30 ಲಕ್ಷ ರೂ ವೆಚ್ಚದ ಸ್ತ್ರೀ ಶಕ್ತಿ ಸಮೃದ್ಧಿ ಯೋಜನೆ ಅಡಿಯಲ್ಲಿ ಕರ್ನಾಟಕ ಸಹಕಾರ ಸಂಘ ಅಧಿನಿಯಮ, 1960 ಅನ್ವಯ ಜಿಲ್ಲಾ ಸ್ತ್ರೀ ಶಕ್ತಿ ಗುಂಪುಗಳ ನೋಂದಣಿಗೆ ಅವಕಾಶ ನೀಡಲಾಗಿದೆ.

* ನಿರಾಶ್ರಿತ ಮಕ್ಕಳ ಕುಠೀರದಲ್ಲಿನ ಮಕ್ಕಳಿಗೆ ನೀಡುವ ಹಣವನ್ನು 400 ರೂ.ಗಳಿಂದ 1000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

* ಮಹಿಳಾ ಸಬಲೀಕರಣ ಕಾರ್ಯನೀತಿ ಜಾರಿ ತರಲಾಗಿದೆ.[ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದರಾಮಯ್ಯ]

* ರಾಜ್ಯ ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಸಂಪನ್ಮೂಲ ಕೋಶದ ಸ್ಥಾಪನೆ

* 1 ಕೋಟಿ ರೂ ವೆಚ್ಚದ ಸ್ಪರ್ಧಾ ಚೇತನ ಯೋಜನೆ ಅಡಿಯಲ್ಲಿ ಭಿನ್ನ ಸಾಮರ್ಥ್ಯದ ವಿದ್ಯಾವಂತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಕ್ರಮ

* 1.50 ಕೋಟಿ ರೂ ಅಂಗವೈಕಲ್ಯ ವ್ಯಕ್ತಿಗಳ ಹಾಗೂ ಅವರ ಹೊಣೆಗಾರಿಕೆ ಕುರಿತು ಅರಿವು ಮೂಡಿಸಲು ಅರಿವಿನ ಸಿಂಚನ ಕಾರ್ಯಕ್ರಮ

* ನಿರಾಶ್ರಿತ ಬುದ್ದಿಮಾಂದ್ಯ ಮತ್ತು ಮಹಿಳೆಯರ ಕಾಳಜಿ ಮತ್ತು ಸಂರಕ್ಷಣೆಗಾಗಿ ಅನುಪಾಲನಾ ಗೃಹ ಸ್ಥಾಪನೆ 4 ಕೋಟಿ ರೂ ಮೀಸಲಿಡಲಾಗಿದೆ.[ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಐಟಿ-ಬಿಟಿಗೆ ಏನು ಗಿಟ್ಟಿಲ್ಲ!]

* ಸಾಧನಾ ಸಲಕರಣಾ ಯೋಜನೆ ಅಡಿಯಲ್ಲಿ ವಿಕಲಚೇತನ ವ್ಯಕ್ತಿಗಳಿಗೆ ಒದಗಿಸುತ್ತಿದ್ದ ಮೊತ್ತವನ್ನು 15,000 ರೂ.ಗಳಿಗೆ ಹೆಚ್ಚಳ ಮತ್ತು ಹೆಚ್ಚುವರಿಯಾಗಿ ತೀವ್ರ ಅಂಗವೈಕಲ್ಯ ಹೊಂದಿದ 2000 ವ್ಯಕ್ತಿಗಳಿಗೆ ಮೋಟರ್ ಚಾಲಿತ ದ್ವಿಚಕ್ರ ವಾಹನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

* 10 ಕೋಟಿ ರೂ ವೆಚ್ಚದ ಕೇಂದ್ರ ಸರ್ಕಾರದ ಸ್ವಾವಲಂಬನ ಛತ್ರವಾಸ್ ಯೋಜನೆ ಅಡಿಯಲ್ಲಿ ವಿಕಲಚೇತನ ವ್ಯಕ್ತಿಗಳ ಶಾಲಾ ಕಟ್ಟಡಗಳ ರಿಪೇರಿ ಮತ್ತು ನಿರ್ಮಾಣ ಮಾಡಲಾಗುತ್ತದೆ.

* ರಸ್ತೆ ಪಕ್ಕದಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ 10,000 ಮಹಿಳೆಯರಿಗೆ 10 ಕೋಟಿ ರೂ ವೆಚ್ಚದಲ್ಲಿ ಸಮೃದ್ಧಿ ಯೋಜನೆ ಅಡಿ ಸಹಾಯ ಧನ ವಿತರಣೆ ಮಾಡಲಾಗುತ್ತದೆ.

* 2.5 ಕೋಟಿ ರೂ ವೆಚ್ಚದಲ್ಲಿ ಸ್ತ್ರೀಶಕ್ತಿ ಕೌಶಲ್ಯ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ.

* 5 ಕೋಟಿ ರೂ ಧನಶ್ರೀ ಯೋಜನೆಯಡಿ ಹೆಚ್.ಐ.ವಿ. ಪೀಡಿತ ಪ್ರತಿ ಫಲಾನುಭವಿಗಳಿಗೆ ರೂ.40,000 ಸಾಲ ಮತ್ತು 10,000 ರೂ ಸಹಾಯಧನ ನೀಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister and Finance Minister Siddaramaiah has tabled Karnataka Budget 2016-17 on Friday, March 18, 2016. Share for Women, Children, disabled and Senior Citizens welfare in budget
Please Wait while comments are loading...