Karnataka Budget 2023: 'ಗೃಹಿಣಿ ಶಕ್ತಿ' ಮೂಲಕ ಮಹಿಳೆಯರಿಗೆ ಸಹಾಯಧನ- ಕಾಂಗ್ರೆಸ್‌ನ 'ಗೃಹಲಕ್ಷ್ಮಿ'ಗೆ ಟಕ್ಕರ್?
ಬಸವರಾಜ ಬೊಮ್ಮಾಯಿ ಅವರು ಗೃಹಿಣಿ ಶಕ್ತಿ ಮೂಲಕ ಮಹಿಳೆಯರಿಗೆ ಸಹಾಯಧನವನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ 500 ರೂ ಸಹಾಯಧನವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 17: ಕರ್ನಾಟಕ ಚುನಾವಣೆಗ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಸಾಮಾನ್ಯ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯ ಬಜೆಟ್ ಮಂಡನೆ ಆಗುತ್ತಿದೆ. ರೈತರು, ನಗರವಾಸಿಗಳು, ಕೆಳ ಸಮುದಾಯಗಳಿಗೆ ಸೇರಿದವರನ್ನು ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೆಲ್ಲದರಾಚೆಗೆ, ಬಸವರಾಜ ಬೊಮ್ಮಾಯಿ ಅವರು ಮಹಿಳೆಯರನ್ನು ಕೇಂದ್ರಿಕರಿಸಿ ಬಜೆಟ್ ಮಂಡಿಸುತ್ತಿದ್ದಾರೆ.
'ಗೃಹಿಣಿ ಶಕ್ತಿ' ಮೂಲಕ ಮಹಿಳೆಯರಿಗೆ ಸಹಾಯಧನ
ಬಸವರಾಜ ಬೊಮ್ಮಾಯಿ ಅವರು ಗೃಹಿಣಿ ಶಕ್ತಿ ಮೂಲಕ ಮಹಿಳೆಯರಿಗೆ ಸಹಾಯಧನವನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ 500 ರೂ ಸಹಾಯಧನವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದು ಕೆಳ ಮಧ್ಯಮ ವರ್ಗದ ಮಹಿಳೆಯರನ್ನು ಸೆಳೆಯಲು ಈ ಯೋಜನೆಯನ್ನು ಘೋಷಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ She Toilet ನಿರ್ಮಾಣ ಮಾಡುವುದಾಗಿ ಬೊಮ್ಮಾಯಿ ಘೋಷಿಸಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂ. ನಿಂದ 1500 ರೂ.ಗೆ ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ 'ಗೃಹಲಕ್ಷ್ಮಿ' ಯೋಜನೆಗೆ ಟಕ್ಕರ್?
ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್‌ನಲ್ಲಿ 'ಗೃಹಿಣಿ ಶಕ್ತಿ' ಯೋಜನೆಯು ಸದ್ದು ಮಾಡುತ್ತಿದೆ. ಪ್ರತಿ ತಿಂಗಳಿಗೆ ಮಹಿಳೆಯರಿಗೆ ಐದು ನೂರು ರೂಪಾಯಿ ಕೊಡುವುದಾಗಿ ಬೊಮ್ಮಾಯಿ ಘೋಷಿಸಿದ್ದಾರೆ. ಇದು ಕಾಂಗ್ರೆಸ್‌ನ 'ಗೃಹಲಕ್ಷ್ಮಿ' ಯೋಜನೆಗೆ ಟಕ್ಕರ್ ನೀಡುವ ಸಲುವಾಗಿ ಬೊಮ್ಮಾಯಿ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಮಹಿಳೆಯರ ಮತಗಳನ್ನು ಸೆಳೆಯಲು ಎರಡೂ ಪಕ್ಷಗಳು ಈ ಮೂಲಕ ಪೈಪೋಟಿ ನಡೆಸುತ್ತಿದೆ.

ಏನಿದು 'ಗೃಹಲಕ್ಷ್ಮಿ' ಯೋಜನೆ?
ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ನೀಡಿದ ನಂತರ, ಕಾಂಗ್ರೆಸ್ ಮತ್ತೊಂದು ದೊಡ್ಡ ಚುನಾವಣಾ ಭರವಸೆಯನ್ನು ನೀಡಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮಹಿಳೆಗೆ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ. ನೀಡುವುದಾಗಿ ತಿಳಿಸಿದೆ. ಕಳೆದ ತಿಂಗಳು ನಡೆದ 'ನಾ ನಾಯಕಿ' (ನಾನು ಮಹಿಳಾ ನಾಯಕಿ) ಎಂಬ ಮಹಿಳಾ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ-ವಾದ್ರಾ ಈ ಘೋಷಣೆ ಮಾಡಿದ್ದಾರೆ. ಈ ಯೋಜನೆಯು ರಾಜ್ಯದ 1.5 ಕೋಟಿಗೂ ಹೆಚ್ಚು ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ ಎನ್ನಲಾಗಿದೆ.












Click it and Unblock the Notifications