Karnataka Budget 2023:ಮಹಿಳೆಯರಿಗಾಗಿ 250 ಸುಸಜ್ಜಿತ 'She Toilet' ನಿರ್ಮಾಣಕ್ಕೆ 50 ಕೋಟಿ

ಈ ಸುಸಜ್ಜಿತ ಸಂಕೀರ್ಣದಲ್ಲಿ ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು ಎಸ್‌ಒಎಸ್ ಸೌಲಭ್ಯಗಳು ಇರುತ್ತವೆ.

ಬೆಂಗಳೂರು, ಫೆಬ್ರವರಿ. 17: ಸಿಲಿಕಾನ್ ಸಿಟಿಯ ಜನದಟ್ಟಣೆ ನಡುವೆ ಜನರು ಶೌಚಾಲಯಗಳಿಗಾಗಿ ಪರದಾಡುವುದು ನಡೆಯುತ್ತಲೇ ಇದೆ. ಅದರಲ್ಲೂ ಮಹಿಳೆಯರ ಕಷ್ಟ ಹೇಳತೀರದು, ಶುಚಿತ್ವ ಮತ್ತು ತಾವು ಪ್ರಯಾಣ ಮಾಡುವ ಸ್ಥಗಳ ಹತ್ತಿರದಲ್ಲಿ ಶೌಚಾಲಯವಿಲ್ಲದೇ ಪರದಾಡುತ್ತಾರೆ. ಗಂಡಸರು ಮತ್ತು ಹೆಂಗಸರಿಗೆ ಒಂದೇ ಕಡೆ ಶೌಚಾಲಯಗಳಿರುವುದು ಕೂಡ ಮತ್ತಷ್ಟು ಕಸಿವಿಸಿಗೆ ಕಾರಣವಾಗುತ್ತದೆ.

ಹೀಗಾಗಿ ನಗರದ ಬೃಹತ್ ವಾಣಿಜ್ಯ ಮಳಿಗೆಗಳು, ಮಾರುಕಟ್ಟೆಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ 'She Toilet' ಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

Karnataka Budget 2023 : CM Bommai announced 250 she toilets at the cost of Rs 50 crore

ಈ ಸುಸಜ್ಜಿತ ಸಂಕೀರ್ಣದಲ್ಲಿ ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು ಎಸ್‌ಒಎಸ್ ಸೌಲಭ್ಯಗಳು ಇತ್ಯಾದಿ ಇರುತ್ತವೆ. ಈ ಆಧುನಿಕ ವಿನ್ಯಾಸದ 250 ಸುಸಜ್ಜಿತ 'She Toilet' ನಿರ್ಮಾಣಕ್ಕೆ ಬಜೆಟ್‌ನಲ್ಲಿ 50 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಇನ್ನು, ನರೇಗಾ ಸಂಯೋಜನೆಯೊಂದಿಗೆ 250 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 7,750 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶೌಚಾಲಯದ ಸಂಪೂರ್ಣ ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

Karnataka Budget 2023 : CM Bommai announced 250 she toilets at the cost of Rs 50 crore

ಈ ಯೋಜನೆಯಡಿ ಮಾರ್ಚ್ 2023ರ ಅಂತ್ಯದಲ್ಲಿ 2,169 ಶೌಚಾಲಯಗಳು ಪೂರ್ಣಗೊಳ್ಳಲಿವೆ. ಉಳಿದ 5,581 ಶೌಚಾಲಯಗಳನ್ನು 2023-24ನೇ ಸಾಲಿನಲ್ಲಿ ನಿರ್ಮಿಸಲಾಗುವುದು. ಇದಕ್ಕೆ ಒಟ್ಟು 80 ಕೋಟಿ ರೂ. ಹಂಚಿಕೆ ಮಾಡಿದ್ದು, ಅದರಲ್ಲಿ 50 ಕೋಟಿ ರೂ. ಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+