ಬಜೆಟ್ ನಲ್ಲಿ ತೆರಿಗೆ ಪ್ರಸ್ತಾವನೆಗಳು, ಎಷ್ಟು ಹೊರೆ?

ಬೆಂಗಳೂರು, ಜುಲೈ 06: ರೈತರು ಹಾಗೂ ಸರ್ಕಾರ ನೌಕರರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಒಂದಷ್ಟು ತೆರಿಗೆ ಪ್ರಸ್ತಾವನೆಗಳನ್ನು ಮಂಡಿಸಿದ್ದಾರೆ. ಇದರಲ್ಲಿ ನಿರೀಕ್ಷಿತವಾಗಿ ಅಬಕಾರಿ, ಇಂಧನ, ಸಾರಿಗೆ, ವಿದ್ಯುತ್ ಕ್ಷೇತ್ರಗಳಲ್ಲಿ ಸುಂಕ ಹೆಚ್ಚಳ ಮಾಡಲಾಗಿದೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಕಳೆದ ಫೆಬ್ರವರಿ ತಿಂಗಳಿನಲ್ಲಿ ಮಂಡಿಸಿದ ಚುನಾವಣಾ ಪೂರ್ವ ಬಜೆಟ್ ನ ಮುಂದುವರೆದ ಭಾಗವಾಗಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರದಂದು ಮಂಡಿಸಿದರು.

ರಾಜ್ಯದ ಬೊಕ್ಕಸ ತುಂಬಿಸಲು ಯಾವೆಲ್ಲ ತೆರಿಗೆ ಪ್ರಸ್ತಾವನೆ ಮಾಡಲಾಗುತ್ತದೆ ಎಂಬ ಕುತೂಹಲವಿತ್ತು. ನಿರೀಕ್ಷೆಯಂತೆ ಬೆಲೆ ಹೆಚ್ಚಳ ಕಂಡು ಬಂದರೂ, ಜನ ಸಾಮಾನ್ಯರಿಗೆ ಹೊರೆ ಆಗುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸರ್ಕಾರಿ ಸಾರಿಗೆ ಬಸ್ ಗಳ ಪ್ರಯಾಣ ದರದಲ್ಲಿ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ. ಆದರೆ, ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗಿರುವುದರಿಂದ ಖಾಸಗಿ ಬಸ್ ಗಳ ಪ್ರಯಾಣ ದರದಲ್ಲಿ ಏರಿಕೆ ಕಂಡು ಬಂದಿದೆ.

ವಾಣಿಜ್ಯ ತೆರಿಗೆಗಳು - ಸರಕು ಮತ್ತು ಸೇವಾ ತೆರಿಗೆ

ವಾಣಿಜ್ಯ ತೆರಿಗೆಗಳು - ಸರಕು ಮತ್ತು ಸೇವಾ ತೆರಿಗೆ

* ಎಲ್ಲಾ ವಿಭಾಗೀಯ ಕಛೇರಿಗಳಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಸರಕು ಮತ್ತು ಸೇವಾ ತೆರಿಗೆ ಸಹಾಯ ಪೀಠ ಸ್ಥಾಪನೆ.
* ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನದಲ್ಲಿ ಅನುಭವ ಹೊಂದಿರುವ ಇತರ ದೇಶಗಳಲ್ಲಿ ನಮ್ಮ ಅಧಿಕಾರಿಗಳಿಗೆ ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ.

ಮೌಲ್ಯವರ್ಧಿತ ತೆರಿಗೆ

ಮೌಲ್ಯವರ್ಧಿತ ತೆರಿಗೆ

* ದಿನಾಂಕ 30ನೇ ಅಕ್ಟೋಬರ್ 2018 ರ ಒಳಗಾಗಿ ಪೂರ್ತಿಯಾಗಿ ತೆರಿಗೆ ಮೊತ್ತ ಪಾವತಿಸುವವರಿಗೆ, ಶೇ.100ರಷ್ಟು ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲು ಒಂದು ಕರಸಮಾಧಾನ ಯೋಜನೆ ಜಾರಿ.
* ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣವು ಮೇಲ್ಮನವಿಯ ವಿಲೇವಾರಿ ಮಾಡಲು ಇರುವ ಅವಧಿಯನ್ನು ತಡೆಯಾಜ್ಞೆ ಜಾರಿಗೆ ಬಂದ ದಿನದಿಂದ ಮೂರು ವರ್ಷಗಳಿಗೆ ವಿಸ್ತರಣೆ.

ಮಾರಾಟ ತೆರಿಗೆ/ ಅಬಕಾರಿ ಸುಂಕ

ಮಾರಾಟ ತೆರಿಗೆ/ ಅಬಕಾರಿ ಸುಂಕ

ಮಾರಾಟ ತೆರಿಗೆ

* ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರ ಶೇ. 2ರಷ್ಟು ಹೆಚ್ಚಳ.

ಅಬಕಾರಿ

* ಅಬಕಾರಿ ಇಲಾಖೆಗೆ 2018-19ನೇ ಸಾಲಿಗೆ 18,750 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ; ಪರಿಷ್ಕೃತ ರಾಜಸ್ವ ಸಂಗ್ರಹ ಗುರಿ-19,750 ಕೋಟಿ ರೂ.; ಜೂನ್-2018 ರ ಅಂತ್ಯಕ್ಕೆ 4,674 ಕೋಟಿ ರೂ.ಗಳ ರಾಜಸ್ವ ಸಂಗ್ರಹ.
* ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ಹಾಲಿ ಇರುವ ದರಗಳ ಮೇಲೆ ಶೇಕಡ 4ರಷ್ಟು ಹೆಚ್ಚಳ.

ಸಾರಿಗೆ/ಇಂಧನ

ಸಾರಿಗೆ/ಇಂಧನ

ಸಾರಿಗೆ:
* 2018-19ರ ಸಾಲಿಗೆ ರೂ.6,656 ಕೋಟಿ ಮೋಟಾರು ವಾಹನ ತೆರಿಗೆ ಸಂಗ್ರಹ ಗುರಿ ನಿಗದಿ.
* ಖಾಸಗಿ ಸೇವಾ ವಾಹನ ತೆರಿಗೆ ಪ್ರತಿ ಚದರ ಮೀಟರ್‌ಗೆ ಶೇಕಡ 50 ರಷ್ಟು ಹೆಚ್ಚಳ.

ಇಂಧನ :
* ವಿದ್ಯುತ್ ಬಳಕೆ ಮೇಲಿನ ತೆರಿಗೆ ಶೇಕಡ 9ಕ್ಕೆ ಹೆಚ್ಚಳ. ಸ್ವಂತ ಬಳಕೆಯ ವಿದ್ಯುತ್ ಮೇಲಿನ ತೆರಿಗೆ ದರ ಪ್ರತಿ ಯೂನಿಟ್ ದರ 20 ಪೈಸೆಗೆ ಹೆಚ್ಚಳ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+