• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಕಾಲೆಳೆಯುವ ಬಿಜೆಪಿಯ 'ತರ್ಲೆ ಟಾಮಿ' ಹಾಸ್ಯ ವಿಡಿಯೋ

|
   ಕಾಂಗ್ರೆಸ್ ಕಾಲೆಳೆಯುವ ಬಿಜೆಪಿಯ 'ತರ್ಲೆ ಟಾಮಿ' ಹಾಸ್ಯ ವಿಡಿಯೋ | Oneindia Kannada

   ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಗರಿಗೆದರುತ್ತಿದ್ದಂತೇ, ಮೂರೂ ಪಕ್ಷಗಳು ಹೊಸಹೊಸ ಪ್ರಯತ್ನಕ್ಕೆ ಕೈಹಾಕುತ್ತಿವೆ. ಬಿಜೆಪಿ 'ತರ್ಲೆ ಟಾಮಿ' ಎನ್ನುವ ಹಾಸ್ಯ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಸದ್ಯ ಸಾಮಾಜಿಕ ತಾಣದಲ್ಲಿ ಅದು ಸುದ್ದಿಯಾಗುತ್ತಿದೆ.

   ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಯವರ ಭಾಷಣದ ತುಣುಕನ್ನು ವಿಷಯಕ್ಕೆ ಸಂಬಂಧಪಟ್ಟಂತೆ ಸೇರಿಸಿ, ರೆಡಿ ಮಾಡಿರುವ ಈ ವಿಡಿಯೋದ ಒಟ್ಟು ಸಂದೇಶ "ಸಿದ್ದರಾಮಯ್ಯನವರಂತಹ ಸರಕಾರ ನಮಗೆ ಬೇಕಾ" ಎನ್ನುವುದು.

   ಮೋದಿಯದ್ದು 90% ಭ್ರಷ್ಟ ಸರ್ಕಾರ: ಸಿದ್ದರಾಮಯ್ಯ ಹೂಂಕಾರ

   'ಕಲುಷಿತವಾಗಿರುವ ರಾಜಕೀಯ ವ್ಯವಸ್ಥೆಯನ್ನು ಬದಲಿಸುವ ಉದ್ದೇಶವಷ್ಟೇ ಈ ಹಾಸ್ಯ ಕಾರ್ಯಕ್ರಮದ ಪ್ರಯತ್ನ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ' ಎನ್ನುವ ಸೂಚನೆಯ ಮೂಲಕ ಆರಂಭವಾಗುವ ಈ ವಿಡಿಯೋದಲ್ಲಿ, ಕಾಂಗ್ರೆಸ್ ಪಕ್ಷದ ಇದುವರೆಗೆ ನಡೆಸಿದ ಆಡಳಿತವನ್ನು ಅವರದೇ ನಾಯಕರ ಭಾಷಣದ ತುಣುಕಿನ ಮೂಲಕ ಬಿಜೆಪಿ ವ್ಯಂಗ್ಯ ಮಾಡಿದೆ.

   ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ದ ಮಾಡಿದ್ದ ಟೀಕಾಪ್ರಹಾರವನ್ನು ಆಯಾಯ ವಿಷಯಕ್ಕೆ ಸಂಬಂಧಿಸಿದಂತೆ ಸೇರಿಸಿ, ಕರ್ನಾಟಕ ಬಿಜೆಪಿ ಘಟಕ ಈ ಹಾಸ್ಯ ವಿಡಿಯೋವನ್ನು ಬಿಡುಗಡೆ ಮಾಡಿದೆ.

   ವಿದ್ವತ್ ಪ್ರಕರಣ : ರಾಜ್ಯಪಾಲರಿಗೆ ಬಿಜೆಪಿ ದೂರು

   ಫೆಬ್ರವರಿ 21ರಂದು ಬಿಜೆಪಿ ಬಿಡುಗಡೆ ಮಾಡಿರುವ ಈ ವಿಡಿಯೋ, ನಿಮ್ಮನ್ನು ನಗಿಸುವ ಉದ್ದೇಶದಿಂದ ಜೊತೆಗೆ, ಸಾಮಾನ್ಯ ಕನ್ನಡಿಗ ಕಾಂಗ್ರೆಸ್ ಸರಕಾರದ ಆಡಳಿತದ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದಾನೆ ಎನ್ನುವ ಸಂದೇಶ ಈ ಹಾಸ್ಯ ವಿಡಿಯೋದಲ್ಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಮುಂದೆ ಓದಿ..

   ಸಿಎಂ ಸಿದ್ದರಾಮಯ್ಯನವರಿಗೆ ಆನೆಬಲ ಬಂದಂತಾಗಿದೆ

   ಸಿಎಂ ಸಿದ್ದರಾಮಯ್ಯನವರಿಗೆ ಆನೆಬಲ ಬಂದಂತಾಗಿದೆ

   ಕರ್ನಾಟಕದಲ್ಲಿ ಎಲ್ಲಂದ್ರಲ್ಲಿ ಈಗ ಚುನಾವಣಾ ಬಿಸಿ, ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಹೋದ್ರು, ಆಗ್ಲಿಂದ ಸಿದ್ದರಾಮಯ್ಯನವರಿಗೆ ಆನೆಬಲ ಬಂದಂತಾಗಿದೆ ಎಂದು ಸಂಭಾಷಣೆ ಆರಂಭವಾಗುತ್ತದೆ. ರಾಹುಲ್ ರಣಕಹಳೆ ಊದಿ ಹೋಗಿದ್ದಾರೆ, ಅವರಿಗೆ ಏನು ಹೇಳೋಕೆ ಇಷ್ಟ ಪಡುತ್ತೀರಾ ಎನ್ನುವ ಪ್ರಶ್ನೆಗೆ, ರಾಹುಲ್ ಗೆ ಅಭಿನಂದನೆ ಸಲ್ಲಿಸುತ್ತೇನೆ ಎನ್ನುವ ಸಿಎಂ ಭಾಷಣದ ವಿಡಿತೋ ತುಣುಕನ್ನು ಹಾಕಲಾಗಿದೆ.

   ಅವನೊಬ್ಬ ನಾಲಾಯಕ್ ರಾಜಕಾರಣಿ

   ಅವನೊಬ್ಬ ನಾಲಾಯಕ್ ರಾಜಕಾರಣಿ

   ಇದಾದ ನಂತರ, ರಾಹುಲ್ ಜೊತೆ ನಾಲ್ಕು ದಿನ ರಾಜ್ಯ ಸುತ್ತಿದ್ದೀರಲ್ಲಾ ಏನನಿಸಿತು ಎನ್ನುವ ಪ್ರಶ್ನೆಗೆ, 'ಅವನೊಬ್ಬ ನಾಲಾಯಕ್ ರಾಜಕಾರಣಿ' ಎನ್ನುವ ಸಿದ್ದರಾಮಯ್ಯ ಭಾಷಣದ ತುಣುಕವನ್ನು ಸೇರಿಸಲಾಗಿದೆ. (ಅನಂತ್ ಕುಮಾರ್ ಹೆಗಡೆ ಅವರನ್ನು ಸಿದ್ದರಾಮಯ್ಯ ಒಬ್ಬ ನಾಲಾಯಕ್, ಗ್ರಾಮ ಪಂಚಾಯತಿ ಸದಸ್ಯನಾಗಲೂ ಯೋಗ್ಯ ಇಲ್ಲದ ವ್ಯಕ್ತಿ ಎಂದು ಟೀಕಿಸಿದ್ದರು)

   ಇಂತಹ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಾರದು

   ಇಂತಹ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಾರದು

   ನಿಮ್ಮ ಪಕ್ಷದ ಗತಿಏನು ಎನ್ನುವ ತರ್ಲೆ ಪ್ರಶ್ನೆಗೆ, ಇಂತಹ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಾರದು. ಕರ್ನಾಟಕದ ಜನ ಸಂಕಲ್ಪ ಮಾಡಬೇಕು ಎಂದು ಹಿಂದಿನ ಭಾಷಣದ ವಿಡಿಯೋವನ್ನು ಹಾಕಲಾಗಿದೆ. ಜನಾಶೀರ್ವಾದ ಸಮಾವೇಶದಲ್ಲಿ ಬಿಜೆಪಿ ವಿರುದ್ದ ಸಿದ್ದರಾಮಯ್ಯ ಹರಿಹಾಯಿದಿದ್ದ ವಿಡಿಯೋವಿದು.

   ಯಾರನ್ನು ಯಾಮಾರಿಸೋಕೆ ಕರ್ನಾಟಕಕ್ಕೆ ಬಂದಿದ್ದೀರಾ

   ಯಾರನ್ನು ಯಾಮಾರಿಸೋಕೆ ಕರ್ನಾಟಕಕ್ಕೆ ಬಂದಿದ್ದೀರಾ

   ರಾಹುಲ್ ಅವರು ಯಾಕೆ ಕರ್ನಾಟಕಕ್ಕೆ ಬಂದಿದ್ರು ಎನ್ನುವ ಪ್ರಶ್ನೆಗೆ, ಯಾರನ್ನು ಯಾಮಾರಿಸೋಕೆ ಕರ್ನಾಟಕಕ್ಕೆ ಬಂದಿದ್ದೀರಾ, ಜನ ತೀರ್ಮಾನ ಮಾಡಬೇಕಾಗುತ್ತದೆ. ಲೂಟಿಕೋರರಿಗೆ ಅಧಿಕಾರ ಕೊಡಬೇಕಾ ಎಂದು ಸಿದ್ದರಾಮಯ್ಯ ಸಮಾವೇಶದಲ್ಲಿ ಜನರನ್ನು ಪ್ರಶ್ನಿಸುವ ವಿಡಿಯೋ ಹಾಕಲಾಗಿದೆ. (ಮೋದಿ ಮತ್ತು ಶಾ ಅವರನ್ನು ಉದ್ದೇಶಿಸಿ ಸಿಎಂ ಮಾಡಿದ ಭಾಷಣದ ವಿಡಿಯೋ ಅದಾಗಿತ್ತು)

   ನಿಮ್ಮ ಸುಳ್ಳು, ನಿಮ್ಮ ಕೋಮುವಾದ, ಕರ್ನಾಟಕದಲ್ಲಿ ನಡೆಯೋಕೆ ಸಾಧ್ಯವಿಲ್ಲ

   ನಿಮ್ಮ ಸುಳ್ಳು, ನಿಮ್ಮ ಕೋಮುವಾದ, ಕರ್ನಾಟಕದಲ್ಲಿ ನಡೆಯೋಕೆ ಸಾಧ್ಯವಿಲ್ಲ

   ಕೊಟ್ಟ ಆಶ್ವಾಸನೆಯನ್ನೆಲ್ಲಾ ಪೂರೈಸಿದ್ದೇವೆ ಎನ್ನುವ ರಾಹುಲ್ ಗಾಂಧಿ ಭಾಷಣದ ತುಣುಕನ್ನು ಹಾಕಿ, ನಿಮ್ಮ ಸುಳ್ಳು, ನಿಮ್ಮ ಕೋಮುವಾದ, ಕರ್ನಾಟಕದಲ್ಲಿ ನಡೆಯೋಕೆ ಸಾಧ್ಯವಿಲ್ಲ. ಸಿದ್ದರಾಮಯ್ಯನವರ ಸರಕಾರ ಏನೂ ಮಾಡಿಲ್ಲ. ದೇಶದ ಅತಿಭ್ರಷ್ಟ ಸರಕಾರ ಯಾವುದು ಎನ್ನುವ ಪ್ರಶ್ನೆಗೆ, ಅದು ನಮ್ಮ ಸರಕಾರ ಎಂದು ಹೆಮ್ಮೆಯಿಂದ ಹೇಳೋಕೆ ಇಷ್ಟಪಡುತ್ತೇನೆ ಎನ್ನುವ ಸಿದ್ದರಾಮಯ್ಯನವರ ಭಾಷಣದ ವಿಡಿಯೋವನ್ನು ಹಾಕಲಾಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Karnataka BJP Unit released Tarle Tommy funny video against Siddaramaiah government. BJP says, Tarle Tommy video is here to not just tickle your funny bone, but to raise awareness of what common Kannadigas think of Congress's misgovernance in Karnataka.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more