ಕುಮಾರಸ್ವಾಮಿ 8 ತಿಂಗಳ ಆಡಳಿತ ಬಿಚ್ಚಿಟ್ಟ ಬಿಜೆಪಿ ಟ್ವೀಟ್!
Recommended Video

ಬೆಂಗಳೂರು, ಮಾರ್ಚ್ 11 : ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ವಾಕ್ಸಮರಕ್ಕೆ ಚಾಲನೆ ಸಿಕ್ಕಿದೆ. ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಸೋಮವಾರ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಟಾರ್ಗೆಟ್ ಮಾಡಿದೆ. ಅದರಲ್ಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 8 ತಿಂಗಳಿನಲ್ಲಿ ಏನು ಮಾಡಿದರು? ಎಂದು ಲೇವಡಿ ಮಾಡಿದೆ.
ಜೆಡಿಎಸ್ ಸಹ ಬಿಜೆಪಿಯ ಟ್ವೀಟ್‌ಗಳಿಗೆ ತಕ್ಕ ಉತ್ತರವನ್ನು ನೀಡಿದೆ. ಚುನಾವಣೆ ದಿನಾಂಕ ಘೋಷಣೆಯಾದ ಮರುದಿನವೇ ಸಾಮಾಜಿಕ ಜಾಲತಾಣದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಆರಂಭವಾಗಿದೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗಳಿಸಿ ಬಹುದೊಡ್ಡ ಪಕ್ಷವಾದ ಬಿಜೆಪಿಗೆ ಅಧಿಕಾರ ಮಾತ್ರ ಸಿಕ್ಕಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಬೇಕಾಗಿ ಬಂದಿದೆ...
|
ಕುಮಾರಸ್ವಾಮಿ 8 ತಿಂಗಳ ಆಡಳಿತ
1 ರಿಂದ 8ನೇ ತಿಂಗಳ ತನಕ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತ ಹೇಗಿತ್ತು? ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. ಮುಖ್ಯಮಂತ್ರಿ ಸ್ಥಾನ ಅವರ ಕುಟುಂಬದ ಬೇಡಿಕೆಗಳನ್ನು ಈಡೇರಿಸಲು ಮಾತ್ರ ಎಂದು ಲೇವಡಿ ಮಾಡಿದೆ.
|
ತಿರುಗೇಟು ಕೊಟ್ಟ ಜೆಡಿಎಸ್
ಜೆಡಿಎಸ್ ಬಿಜೆಪಿಯ ಟ್ವೀಟ್‌ಗೆ ತಿರುಗೇಟು ನೀಡಿದ್ದ ಕಳೆದ 8 ತಿಂಗಳಿನಲ್ಲಿ ಬಿಜೆಪಿ ಏನು ಮಾಡಿದೆ ಎಂಬ ಪಟ್ಟಿಯನ್ನು ನೀಡಿದ್ದಾರೆ. ಕರ್ನಾಟಕಕ್ಕೆ ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಸ್ಸೀಮಾ ಎಂದು ಜೆಡಿಎಸ್ ಟೀಕಿಸಿದೆ.
|
ಸಿನಿಮಾ ನಿರ್ಮಾಪಕರಿದ್ದಾರೆ
ಟ್ವೀಟ್‌ಗೆ ಉತ್ತರ ಕೊಡಲು ನಮ್ಮನ್ನು ಕಾಪಿ ಮಾಡಿದ್ದೀರಿ. ನಿಮ್ಮಲ್ಲಿ ಸಿನಿಮಾ ನಿರ್ಮಾಪಕರಿದ್ದಾರೆ. ಉತ್ತರ ನಾಟಕ ಕಲಾವಿದರು ಇದ್ದಾರೆ ಎಂದು ಬಿಜೆಪಿ ಛೇಡಿಸಿದೆ.
|
ಭರವಸೆಗಳನ್ನು ಈಡೇರಿಸಿಲ್ಲ
'ಈ ಬಾರಿ ಬಿಜೆಪಿಗೆ ಲೋಕಸಭಾ ಚುನಾವಣೆ ತಯಾರಿ ಸಲೀಸು. ಯಾವುದೇ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಕಷ್ಟವಿಲ್ಲ. 2014ರ ಚುನಾವಣಾ ಪ್ರಣಾಳಿಕೆಯನ್ನೇ ಮತ್ತೊಮ್ಮೆ ಮುದ್ರಿಸಿದರೆ ಆಯ್ತು. #ಈಡೇರದ_ಭರವಸೆಗಳು ಎಂದು ವ್ಯಂಗ್ಯವಾಡಿದೆ.
|
ಜೆಡಿಎಸ್‌ಗೆ ಏಕೆ ವೋಟ್ ಹಾಕುತ್ತಾರೋ
'ಜೆಡಿಎಸ್ ಒಂದು ಅಪಾಯಕಾರಿ ಪಕ್ಷ ಅತಂತ್ರ ಬಂದ್ರೆ ಆಟ ಆಡುತ್ತೆ ಅವಕಾಶ ಸಿಕ್ಕರೆ ಮೋಸ ಮಾಡುತ್ತೆ ಸಾಧ್ಯವಿದ್ದರೆ ಅಳುತ್ತೆ ಇಂತಾ ಪಕ್ಷಕ್ಕೆ ಜನಾ ಯಾಕ ವೋಟ್ ಹಾಕ್ತಾರೋ ಗೊತ್ತಿಲ್ಲ' ಎಂದು ಜನರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications