ವಿಧಾನಸಭೆ ಚುನಾವಣೆ : ಬಿಜೆಪಿಯಿಂದ 7 ಸಾವಿರ ವಾಟ್ಸಪ್ ಗ್ರೂಪ್

ಬೆಂಗಳೂರು, ನವೆಂಬರ್ 20 : ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರ್ನಾಟಕ ಬಿಜೆಪಿ ಪ್ರಚಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಜನರನ್ನು ಸುಲಭವಾಗಿ ತಲುಪಲು 7 ಸಾವಿರ ವಾಟ್ಸಪ್ ಗ್ರೂಪ್‌ಗಳನ್ನು ರಚನೆ ಮಾಡಿದೆ.

ವಾಟ್ಸಪ್ ಮೂಲಕ ಪ್ರಚಾರ ಮಾಡುವ ತಂತ್ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಫಲ ನೀಡಿತ್ತು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರಚಾರ ನಡೆಸಲಾಗುತ್ತದೆ. ಅದಕ್ಕಾಗಿ ಇದುವರೆಗೂ ಏಳು ಸಾವಿರ ಗ್ರೂಪ್ ಮಾಡಲಾಗಿದೆ.

Karnataka BJP has over 7k Whats App groups

ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಸಿದ್ದರಾಮಯ್ಯ ಸರ್ಕಾರದ ವೈಫಲ್ಯತೆಗಳು, ಬಿಜೆಪಿ ನಾಯಕರ ಭಾಷಣದ ಆಡಿಯೋ ಮುಂತಾದ ಮಾಹಿತಿಗಳನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಶೇರ್‌ ಮಾಡಲಾಗುತ್ತದೆ.

250 ಜನರನ್ನು ಮಾತ್ರ ಒಂದು ಗ್ರೂಪ್‌ನಲ್ಲಿ ಸೇರಿಸಬಹುದಾಗಿದೆ. ಆದ್ದರಿಂದ, ಇಷ್ಟು ಗ್ರೂಪ್‌ಗಳನ್ನು ಮಾಡಲಾಗಿದ್ದು, ಚುನಾವಣೆ ಹತ್ತಿರವಾದಂತೆ 10 ಸಾವಿರ ಗ್ರೂಪ್‌ಗಳನ್ನು ಮಾಡಲು ಬಿಜೆಪಿ ಐಟಿ ಘಟಕ ಚಿಂತನೆ ನಡೆಸಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರ ಹಲವು ಗ್ರೂಪ್‌ಗಳನ್ನು ಮಾಡಲಾಗಿತ್ತು. ಕಾರ್ಯಕರ್ತರು ತಮ್ಮದೇ ಆದ ಮತ್ತಷ್ಟು ಗ್ರೂಪ್‌ಗಳನ್ನು ಮಾಡಿಕೊಂಡಿದ್ದು, ಪ್ರಚಾರ ನಿರಂತರವಾಗಿ ನಡೆಯುತ್ತಿದೆ.

ವಾಟ್ಸಪ್‌ಗಳಲ್ಲಿ ಹೆಚ್ಚು ಪ್ರಚಾರ ಮಾಡುವ ತಂತ್ರ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿತ್ತು. ಇದೇ ತಂತ್ರವನ್ನು ಈಗ ಗುಜರಾತ್ ಚುನಾವಣೆಯಲ್ಲಿಯೂ ಬಳಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+