ಜನವರಿ 25 ಕರ್ನಾಟಕ ಬಂದ್, ಖಾಸಗಿ ಶಾಲೆಗಳಿಗೆ ರಜಾ
ಬೆಂಗಳೂರು, ಜನವರಿ 24: ಜನವರಿ ಇಪ್ಪತ್ತೈದರ ಗುರುವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಖಾಸಗಿ ಶಾಲೆಗಳಿಗೆ ರಜಾ ನೀಡಲು ತೀರ್ಮಾನಿಸಲಾಗಿದೆ. ಆ ದಿನದ ಪಾಠ-ಪ್ರವಚನ ಪೂರೈಸಲು ಶನಿವಾರ ಇಡೀ ದಿನ ಶಾಲೆ ಅಥವಾ ಮೂರು ದಿನ ಗಳ ಕಾಲ ಒಂದು ಗಂಟೆ ಹೆಚ್ಚುವರಿಯಾಗಿ ಪಾಠ ನಡೆಸಲು ಶಿಫಾರಸು ಮಾಡಲಾಗಿದೆ.
ಈ ಬಗ್ಗೆ 'ಕುಸ್ಮಾ' ಅಧ್ಯಕ್ಷ ವಿ.ಆರ್.ಎನ್.ರೆಡ್ಡಿ ಅವರು ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿ, ಬಂದ್ ನ ಉದ್ದೇಶ ಎಲ್ಲರಿಗೂ ಅಗತ್ಯ ಇರುವ ನೀರಿನ ಬಗ್ಗೆ ಆದ್ದರಿಂದ ಇದಕ್ಕೆ ನಮ್ಮ ಸಂಘಟನೆಯ ಬೆಂಬಲ ಇದೆ. ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಗುರುವಾರ ರಜಾ ಘೋಷಣೆ ಮಾಡಲು ತೀರ್ಮಾನಿಸಿದ್ದೀವಿ ಎಂದರು.
ಇನ್ನು 'ಕ್ಯಾಮ್ಸ್' ನ ಶಶಿಕುಮಾರ್ ಅವರು ಮಾತನಾಡಿ, ನಮ್ಮ ಸಂಘಟನೆಯೊಂದಿಗೆ ಗುರುತಿಸಿಕೊಂಡ ಶಾಲೆಗಳಿಗೆ ರಜಾ ಘೋಷಣೆ ಮಾಡಿದ್ದೀವಿ. ಆದರೆ ಈ ರೀತಿಯ ಬಂದ್ ಗಳಿಗೆ ಕರೆ ನೀಡುವುದಕ್ಕೆ ಮುಂಚೆ ಆಲೋಚನೆ ಮಾಡಬೇಕು. ಆದರೆ ನಾವಂತೂ ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ರಜಾ ನೀಡ್ತೀವಿ ಎಂದು ಕೂಡ ಹೇಳಿದರು.
Recommended Video


ಸರಕಾರಿ ಶಾಲೆಗಳಿಗೆ ಆಯಾ ಜಿಲ್ಲಾಧಿಕಾರಿಗಳ ತೀರ್ಮಾನದ ಮೇಲೆ ರಜಾ ಘೋಷಿಸುವಂತೆ ಸರಕಾರ ಸೂಚನೆ ನೀಡಿದೆ.












Click it and Unblock the Notifications