ಕರ್ನಾಟಕ ವಿಧಾನಸಭೆ ಅಧಿವೇಶನ: HD ವಿಡಿಯೋ ಬಂದಿದೆ ನೋಡಿದ್ರಾ ? ವೈರಲ್ ಪೋಸ್ಟ್
ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಈ ಬಾರಿ ಚರ್ಚೆಗಿಂತಲೂ ಆರ್ಭಟದ್ದೇ ಹೆಚ್ಚು ಸುದ್ದಿಯಾಗಿದೆ. ಕರ್ನಾಟಕ ವಿಧಾನಸಭೆ ಅಧಿವೇಶನ ಹಾಗೂ ರಾಜಕಾರಣಿಗಳ ವರ್ತನೆಯ ಬಗ್ಗೆ ಹವ್ಯಾಸಿ ಬರಹಗಾರ ಬೆಳಗಾವಿ ಪ್ರಕಾಶ್ ಅವರ ಬರಹ ಇಲ್ಲಿದೆ.
ಹೌದು ನಿನ್ನೆಯಿಂದ ಒಂದು ಸಖತ್ ಆಗಿರುವ HD ವಿಡಿಯೋ ಬಂದಿದೆ. ತುಂಬಾ ಜನ ನೋಡಿರ್ತೀರ ಕೂಡ. ಅದೇ ಅದೇ ಯಾವ್ದು HD ವಿಡಿಯೋ ಅಂದ್ರೆ ನಮ್ಮ ರಾಜ್ಯದ ಮಾನ ಮರ್ಯಾದೆ ಕಳೆಯುವಂತೆ ಮಾಡುತ್ತಿರುವ ನಮ್ಮ ಕೆಲವು ಶಾಸಕರುಗಳ ಸದನದಲ್ಲಿನ ವಿಡಿಯೋ. ಕಾಂಗ್ರೆಸ್ ಶಾಸಕ ಶಿವಲಿಂಗೆಗೌಡ ಅವರ ಆರ್ಭಟ ಏನು, ಇನ್ನು ಅವರಿಗೆ ಉತ್ತರವಾಗಿ ಬಿಜೆಪಿ / ಜೆಡಿಎಸ್ ಶಾಸಕರ ಆರ್ಭಟ ಏನು. ಅಭಿವೃದ್ಧಿ ಮಾಡುವ ವಿಚಾರವಾಗಿ ನಮ್ಮ ಜನಪ್ರತಿನಿಧಿಗಳದ್ದು ಅದೇನು ಚರ್ಚೆ ಅದೇನು ಆಕ್ರೋಶ ಅಬ್ಬಬ್ಬಾ ನಾವೇ ವೋಟ್ ಹಾಕಿದವರು ಧನ್ಯ ಬಿಡಿ.

ಸದನದಲ್ಲಿ ಯಾವೊಬ್ಬ ಶಾಸಕ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಸರಿಯಾಗಿ ಚರ್ಚೆ ಮಾಡ್ತಿದಾರೆ ಹೇಳಿ ?. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಅದೇ ರಾಗ ಅದೇ ಹಾಡು ಆಡ್ತೀವಿ. ಸದನದಲ್ಲಿ ರಾಜ್ಯದ ಮಾನ ಮರ್ಯಾದೆ ಹಾಳು ಮಾಡಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷದ ಶಾಸಕರು ಆಮೇಲೆ ಹೊರಗಡೆ ಏನು ಮಾಡಿರ್ತಾರೆ ಹೇಳಿ ? ನಗು ನಗುತ್ತಾ ಮಾತಾಡುತ್ತ ಒಟ್ಟಿಗೆ ಸೇರಿ ಊಟ ಮಾಡ್ಕೊಂಡು ತಮ್ಮ ಮನೆಗೆ ಹಾಯಾಗಿ ಹೋಗಿರ್ತಾರೆ.. ಆದರೆ ಆಯಾ ಪಕ್ಷದ ಬೆಂಬಲಿಗ ಸಾಮಾನ್ಯ ಜನರು ಮಾತ್ರ ಇಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಜಗಳ ಮಾಡೋದು, ವಾದ ವಿವಾದ ಮಾಡೋದು ಶತ್ರುಗಳ ಹಾಗೇ ನಡೆದುಕೊಳ್ಳೋದು ಮಾಡ್ತಾರೆ..
ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರಿಗೆ ಗೊತ್ತಿಲ್ಲ ಇದೇ ಕಾಂಗ್ರೆಸ್, ಬಿಜೆಪಿಯ ಎಷ್ಟೋ ಜನ ಶಾಸಕರು ಬೀಗತನ ಕೂಡ ಮಾಡಿಕೊಂಡಿದ್ದಾರೆ. ಆದರೆ ಸಾಮಾನ್ಯ ಜನರು ಮಾತ್ರ ಏಳೇಳು ಜನ್ಮದ ಶತ್ರುತ್ವ ಎನ್ನುವ ರೀತಿ ಜಗಳ ಮಾಡಿಕೊಂಡು, ತಮ್ಮ ಪಕ್ಷ ಅನ್ಕೊಂಡು ಜಗಳದಲ್ಲೇ ಮುಳುಗಿದ್ದಾರೆ. (ಹಿಂದೆ ನಾನು ಸಾಕಷ್ಟು ಜನರ ಜೊತೆಗೆ ರಾಜಕಾರಣಿಗಳ ಪರವಾಗಿ ವಾದ ವಿವಾದ ಮಾಡುತ್ತಿದ್ದೆ. ಆದರೆ ಈ ಜೆಸಿಬಿ ಪಕ್ಷಗಳು ಅಭಿವೃದ್ಧಿ ಮಾಡೋದು 25%, ಇನ್ನುಳಿದ 75% ಒಣ ರಾಜಕೀಯ ಮಾಡುತ್ತವೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ಅಲ್ಲ ಕೆಲವು ರಾಜಕೀಯ ಪುಡಾರಿಗಳ ಸಲುವಾಗಿ ಕಚ್ಚಾಡೋದು ಬಿಟ್ಟು ಆರಾಮಾಗಿ ಕಣ್ಮುಚ್ಚಿಕೊಂಡು ಅರ್ಧಗಂಟೆ ಧ್ಯಾನ ಮಾಡೋದು ಒಳ್ಳೆಯದು. ಮನಸ್ಸಿಗೆ ನೆಮ್ಮದಿ ಆದರೂ ಸಿಗುತ್ತೆ. ಈ ಕೆಲವು ರಾಜಕಾರಣಿಗಳ ಒಣ ರಾಜಕೀಯ ಗೊತ್ತಾಗಬೇಕಿತ್ತು ಅಂದ್ರೆ ಸದನದಲ್ಲಿನ ನಿನ್ನೆಯ HD ವಿಡಿಯೋ ನೋಡ್ಕೊಂಡ ಬನ್ನಿ ಅಷ್ಟೇ.












Click it and Unblock the Notifications