ಮಂಗಳವಾರಕ್ಕೆ ಕಲಾಪ ಮುಂದೂಡಿಕೆ: ಮುಗಿಯದ ಚರ್ಚೆ, ಪ್ರತಿಭಟಿಸದ ಪ್ರತಿಪಕ್ಷ
Recommended Video
ಬೆಂಗಳೂರು, ಜುಲೈ 22: ಕಳೆದೆರೆಡು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಇಂದಾದರೂ ತೆರೆ ಬೀಳಲಿದೆಯೇ ಎನ್ನುವ ಕುತೂಹಲ ಆರಂಭವಾಗಿದೆ.
ಒಂದು ಗಂಟೆ ತಡವಾಗಿ ಆರಂಭವಾದ ಸದನದಲ್ಲಿ ಮೊದಲು ಸ್ಪೀಕರ್ ರಮೇಶ್ ಕುಮಾರ್ ಅವರು ಕ್ರಿಯಾ ಲೋಪದ ಕುರಿತಾದ ರೂಲಿಂಗ್ ಪ್ರಕಟಿಸಿದರು. ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡುವುದು ಶಾಸಕಾಂಗ ಪಕ್ಷದ ನಾಯಕರ ಹಕ್ಕು ಎಂದು ಹೇಳಿದರು.
ಬಳಿಕ ಸಚಿವ ಕೃಷ್ಣ ಬೈರೇಗೌಡ ಅವರು ಅತೃಪ್ತ ಶಾಸಕರಿಗೂ ಬಿಜೆಪಿಗೂ ಸಂಬಂಧವಿದೆ ಎಂದು ಆರೋಪಿಸಿದರು. ಅದಕ್ಕೆ ಸಂಬಂಧಿಸಿದಂತೆ ಅವರು ವಿವಿಧ ವರದಿಗಳನ್ನು, ಆಡಿಯೋ ಸಂಭಾಷಣೆಗಳ ವಿವರಗಳನ್ನು ಪ್ರಸ್ತಾಪಿಸಿದರು.

ಕೃಷ್ಣ ಬೈರೇಗೌಡರ ಭಾಷಣದ ವೇಳೆ ಅನೇಕ ಬಾರಿ ಗದ್ದಲಗಳು ಉಂಟಾದವು. ಈ ಸಂದರ್ಭದಲ್ಲಿ ಆಪರೇಷನ್ ಕಮಲದ ಕುರಿತು ಸಹ ಚರ್ಚೆ ನಡೆಯಿತು.
ಇಂದು ವಿಶ್ವಾಸಮತ ಯಾಚನೆ ನಡೆಸುವುದು ಬೇಡ. ಎರಡು ದಿನ ಅವಕಾಶ ಕೊಡಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೆಳಿಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ
ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರಿಂದ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಗೊಂದಲ ಬಗೆಹರಿಸಲು ಸ್ಪೀಕರ್ ಮುಂದಾಗಬೇಕು. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಅಥವಾ ಅವರನ್ನು ಅನರ್ಹಗೊಳಿಸುವುದೇ ಎಂದು ನಿರ್ಧರಿಸಬೇಕು ಎಂದು ಕಾಂಗ್ರೆಸ್ ಕೋರಿದೆ.
ಇಂದು ಕೂಡ ಸದನದಲ್ಲಿ ಚರ್ಚೆ ನಡೆಸಿ ವಿಶ್ವಾಸಮತ ಯಾಚನೆಯನ್ನು ಮುಂದೂಡಲು ಮೈತ್ರಿ ನಾಯಕರು ಪ್ರಯತ್ನಿಸುತ್ತಿದ್ದಾರೆ.
ವಿಶ್ವಾಸಮತಕ್ಕೂ ಮುನ್ನ ಬಿಎಸ್‌ಪಿ ನಾಯಕಿ ಮಾಯಾವತಿ, ಕುಮಾರಸ್ವಾಮಿ ಸರ್ಕಾರದ ಪರ ನಿಲ್ಲಲು ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ ಕರ್ನಾಟಕದಲ್ಲಿರುವ ಬಿಎಸ್‌ಪಿ ಶಾಸಕರಿಗೆ ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತದಾನ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications