Next CM of Karnataka: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು? ಇಲ್ಲಿದೆ ಸಂಭಾವ್ಯರ ಪಟ್ಟಿ

ಬೆಂಗಳೂರು,ಮೇ7: ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಚುನಾವಣೆಗೆ ಪಕ್ಷವನ್ನ ಭರ್ಜರಿ ಸಿದ್ದತೆಯನ್ನ ಮಾಡಿಕೊಂಡು ಪಕ್ಷವನ್ನ ಅಧಿಕಾರಕ್ಕೆ ತರಲು ಹಲವು ತಂತ್ರಗಾರಿಕೆಯನ್ನ ನಡೆಸಿವೆ. ಇತ್ತ ಚುನಾವಣಾ ಪ್ರಚಾರದ ವೇಳೆ ಮುಂದಿನ ಮುಖ್ಯಮಂತ್ರಿ ಹಾಗೂ ಲಿಂಗಾಯತ ಮುಖ್ಯಮಂತ್ರಿ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಈಗಾಗಲೇ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಲ್ಲಿ ಮುಖ್ಯಮಂತ್ರಿ ರೇಸ್‌ ನಲ್ಲಿ ಹಲವು ನಾಯಕರು ಸಜ್ಜಾಗಿದ್ದು, ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ, ಮಹಿಳಾ ಹಾಗೂ ಒಕ್ಕಲಿಗರ ಮುಖ್ಯಮಂತ್ರಿ ಎಂಬ ಚರ್ಚೆ ಜೋರಾಗಿದೆ. ಹಲವು ಸಮೀಕ್ಷೆಗಳಿಂದ ಬಿಜೆಪಿಗೆ ಅಘಾತವಾಗಿದ್ದು, ಈ ಬಾರಿಯೂ ಅತಂತ್ರ ವಿಧಾನಸಭಾ ಚುನಾವಣೆ ಆಗಲಿದೆ ಎಂನ ಚರ್ಚೆಗಳು ಶುರುವಾಗಿದದೆ.

karnataka Assembly elections 2023: Who is The Next Chief Minister Of Karnataka?

ಕಮಲ ಪಾಳಯದಲ್ಲಿ ಮುಖ್ಯಮಂತ್ರಿ ರೇಸ್‌ ನಲ್ಲಿ ಹಲವು ಮಂದಿ!

ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ರೇಸ್‌ ನಲ್ಲಿ ಹಲವು ನಾಯಕರ ಹೆಸರುಗಳು ಕೇಳಿ ಬಂದಿದ್ದು, ಕೊನೆಗೂ ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕಿದ್ದು, 2023 ರ ಚುನಾವಣೆಗೆ ಸಿದ್ದತೆಯನ್ನ ನಡೆಸುತ್ತಿರುವ ರಾಜ್ಯ ಬಿಜೆಪಿ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

ಇನ್ನೂ ರಾಜ್ಯ ಬಿಜೆಪಿಯಲ್ಲಿ ಹಲವು ನಾಯಕರು ಮುಖ್ಯಮಂತ್ರಿ ರೇಸ್‌ ನಲ್ಲಿದ್ದು, ಹಲವು ನಾಯಕರು ಸಿಎಂ ಆಗುವ ಆಸೆಯನ್ನ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಯ ಉನ್ನತ ನಾಯಕರ ಜತೆ ನಿಕಟ ಸಂಬಂಧ ಹೊಂದಿರುವ ಪ್ರಹ್ಲಾದ್‌ ಜೋಶಿ ಅವರ ಹೆಸರು ಕೇಳಿ ಬಂದಿದೆ.

karnataka Assembly elections 2023: Who is The Next Chief Minister Of Karnataka?

ಇತ್ತ ಹಾಲಿ ಮುಖ್ಯಮಂತ್ರಿಯಾಗಿರುವ ಬಸವರಾಜ್‌ ಬೊಮ್ಮಾಯಿ ಅವರು ಸಹ ಈಗಾಗಲೇ ನಾನೇ ಮುಂದಿನ ಸಿಎಂ ಎಂದು ಹೇಳಿಕೊಂಡಿದ್ದು, ಸಿಎಂ ರೇಸ್‌ನಲ್ಲಿರುವ ಮತ್ತೋರ್ವ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಅಲ್ಲದೇ ಸಚಿವ ಮುರುಗೇಶ್‌ ನಿರಾಣಿ ಅವರ ಸಹ ಮುಖ್ಯಮಂತ್ರಿ ರೇಸ್‌ ನಲ್ಲಿದ್ದು, ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲೂ ಮುರುಗೇಶ್‌ ನಿರಾಣಿ ಕೇಳಿ ಬಂದಿದ್ದು, ಈ ಬಾರಿ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ ಪಂಚಮಸಾಲಿ ಸಮುದಾಯದ ನಿರಾಣಿ ಬೆನ್ನಿಗೆ ಒಂದಿಷ್ಟು ಮಠಾಧಿಪತಿಗಳ ಬೆಂಬಲ ಹಾಗೂ ದಿಲ್ಲಿಯಲ್ಲಿ ಲಾಬಿ ಮಾಡಲು ಬೇಕಾದ ಸಂಪರ್ಕವೂ ಇದೆ ಎನ್ನಲಾಗಿದೆ.

ಯಡಿಯೂರಪ್ಪ ರಾಜೀನಾಮೆಗ ಬಳಕ ಏಕಾಏಕಿ ಸಿಎಂ ರೇಸ್‌ನಲ್ಲಿ ಕೇಳಿ ಬಂದಿರುವ ಹೆಸರು ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಸಹ ಈ ಬಾರೀ ಕಿರಿಯ ಲಿಂಗಾಯತ ನಾಯಕನೇ ಸಿಎಂ ಆಗುತ್ತಾರೆ ಎಂದು ಹೇಳುವ ಮೂಲಕ ನಾನು ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಸಿಎಂ ರೇಸ್‌ ನಲ್ಲಿ ಇವರ ಹೆಸರು ಸಹ ಕೇಳಿ ಬಂದಿದೆ. ಇನ್ನೊಂದೆಡೆ ಒಕ್ಕಲಿಗ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕಂದಾಯ ಸಚಿವ ಆರ್‌. ಅಶೋಕ್‌ ಹಾಗೂ ಮಹಿಳಾ ಆಕಾಂಕ್ಷಿಯಾಗಿ ಶೋಭಾ ಕರಂದ್ಲಾಜೆ ಹೆಸರು ಸಹ ಕೇಳಿ ಬಂದಿತ್ತು.

ಕಾಂಗ್ರೆಸ್‌ ನಲ್ಲಿ ಸಿದ್ದು, ಡಿಕೆಶಿ ಜೊತೆಗೆ ಇನ್ನೂ ಹಲವರು ಸಿಎಂ ರೇಸ್‌ ನಲ್ಲಿ!

‌ ಕರ್ನಾಟಕ ಕಾಂಗ್ರೆಸ್‌ ನಲ್ಲಿ ಕಳೆದ ಒಂದು ವರ್ಷಗಳಿಂದ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಜಟಾಪಟಿ ನಡೆಯುತ್ತಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಡಿ ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಮಾತ್ರವಲ್ಲದೇ ಲಿಂಗಾಯತ ನಾಯಕ ಎಂ ಬಿ ಪಾಟೀಲ್‌ ಸಹ ನಾನು ಸಿಎಂ ಸ್ಥಾನದ ಆಕಾಂಕ್ಷಿಎಂದು ಹೇಳಿದ್ದಾರೆ.

ಇನ್ನೂ ಸತೀಶ್‌ ಜಾರಕಿಹೊಳಿ, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್‌ ಹಾಗೂ ಇತ್ತಿಚ್ಚಿನ ದಿನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಹೆಸರು ಕೇಳಿ ಬಂದಿದ್ದು, ಮಹಿಳಾ ಮುಖ್ಯಮಂತ್ರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ರೇಸ್‌ ನಲ್ಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ನಲ್ಲಿ ಕುಮಾರಸ್ವಾಮಿ ಒಬ್ಬರೇ ಸಿಎಂ ರೇಸ್‌ ನಲ್ಲಿ!

ಹಲವು ಸಮೀಕ್ಷೆಯಿಂದ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ದೊಡ್ಡ ಅಘಾತವಾಗಿದ್ದು, ಈ ಬಾರೀ ಅತಂತ್ರ ವಿಧಾನಸಭಾ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ. ಇನ್ನೂ ಹಲವು ಸಮೀಕ್ಷೆಗಳಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಅವರೇ ಕಿಂಗ್‌ ಮೇಕರ್‌ ಆಗುತ್ತಾರೆ ಎಂದು ಹೇಳಲಾಗಿದೆ. ಇನ್ನೂ ಸಿಎಂ ಸ್ಥಾನದ ರೇಸ್‌ ಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಹಲವು ನಾಯಕರು ರೇಸ್‌ ನಲ್ಲಿದ್ದಾರೆ. ಜೆಡಿಎಸ್‌ ಪಕ್ಷದಿಂದ ಹೆಚ್‌ ಡಿ ಕುಮಾರಸ್ವಾಮಿ ಒಬ್ಬರೇ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+