ABP-CVoter Karnataka Opinion Poll : ಎಬಿಪಿ-ಸಿವೋಟರ್ ಸಮೀಕ್ಷೆ, ರಾಷ್ಟ್ರೀಯ ಪಕ್ಷಕ್ಕೆ ಸ್ಪಷ್ಟ ಮುನ್ನಡೆ

ಬೆಂಗಳೂರು, ಮಾರ್ಚ್‌ 29: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ಅಧಿಕೃತ ದಿನಾಂಕ ಬುಧವಾರವಷ್ಟೇ ಪ್ರಕಟಗೊಂಡಿದೆ. ಇದರ ಬೆನ್ನಲ್ಲೆ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಚುನಾವಣಾ ಪೂರ್ವ ಸಮೀಕ್ಷೆಯೊಂದು ಬಹಿರಂಗಗೊಂಡಿದೆ.

ರಾಷ್ಟ್ರೀಯ ಸುದ್ದಿ ವಾಹಿನಿ ಎಬಿಪಿ ನ್ಯೂಸ್‌ ಚುನಾವಣಾ ಫಲಿತಾಂಶದ ಕುರಿತು ತನ್ನ ಸಮೀಕ್ಷೆಯನ್ನು ಬಹಿರಂಗ ಮಾಡಿದೆ. ಈ ಸಮಿಕ್ಷೆಯಲ್ಲಿನ ಅಂಕಿ ಅಂಶಗಳು ಕಾಂಗ್ರೆಸ್‌ ಪಕ್ಷಕ್ಕೆ ಸಿಹಿ ಸುದ್ದಿಯಾಗಲಿದೆ. 2023ರ ಈ ಸಲ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತ್ಯಧಿಕ ಸ್ಥಾನಗಳು ಲಭಿಸಲಿವೆ. ಬಹುಮತ ಮೂಲಕ ಕಾಂಗ್ರೆಸ್‌ ಕರ್ನಾಟಕದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಈ ಕುರಿತು ಅಂಕಿ ಅಂಶಗಳು, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎಂಬ ಮಾಹಿತಿ ಇಲ್ಲಿದೆ.

Karnataka Assembly Elections 2023: Result Of ABP, C-Voter Opinion Poll Result

ರಾಜ್ಯದಲ್ಲಿ ಮಾರ್ಚ್‌ 29ರಿಂದ ಚುನಾವಣೆ ದಿನಾಂಕ ನೀತಿ ಸಂಹಿತೆ ಜಾರಿಯಾಗಿದ್ದು, ಇದರ ಬೆನ್ನಲ್ಲೆ ಎಬಿಪಿ ನ್ಯೂಸ್‌ ಚುನಾವಣಾ ಪೂರ್ವ ತನ್ನ ಅಧ್ಯಯನದ ಸಮೀಕ್ಷೆಯನ್ನು ಪ್ರಕಟಿಸಿದೆ.

ಪ್ರಸ್ತುತ ಈ ಸಮೀಕ್ಷೆ ಪ್ರಕಾರ, ವಿಪಕ್ಷವಾದ ಕಾಂಗ್ರೆಸ್‌ ಚುನಾವಣೆಯಲ್ಲಿ 115-127 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ. ಅದೇ ರೀತಿ ಈಗಿನ ಆಡಳಿತ ಪಕ್ಷವಾಗಿರುವ ಬಿಜೆಪಿಯು ಒಟ್ಟು 68-80 ಸೀಟುಗಳನ್ನು ಗೆಲ್ಲಬಹುದು. ಇನ್ನೂ ಸ್ಥಳಿಯ ಪಕ್ಷವಾದ ಜೆಡಿಎಸ್ 23-35 ಸ್ಥಾನಗಳಲ್ಲಿ ತನ್ನ ಛಾಪು ಮೂಡಿಸಬಹುದು ಎಂದು ತಿಳಿಸಲಾಗಿದೆ.

Karnataka Assembly Elections 2023: Result Of ABP, C-Voter Opinion Poll Result

ಬಿಜೆಪಿ ಸರ್ಕಾರ ಕುರಿತು ಜನರ ಅಭಿಪ್ರಾಯ ಇದು

ಎಬಿಪಿ ಸಿ ವೋಟರ್ ಸಮೀಕ್ಷೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆ. ಅದರ ಪ್ರಕಾರ ನೋಡುವುದಾದರೆ ಅರ್ಧದಷ್ಟು (50%) ಜನರು ಬಿಜೆಪಿ ಸರ್ಕಾರ ಸಾಧನೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಸಾಧನೆ ಕಳಪೆಯಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಿಂದ ಗುಣಮಟ್ಟ ಅಲ್ಲದ ಕಾರ್ಯ ಸಾಧನೆ ಆಗಿದೆ ಎಂದಿದ್ದಾರೆ. ಹೀಗಾಗಿ ಇದು ಆಡಳಿತ ಪಕ್ಷದ ಕುರಿತು ಜನರಿಗೆ ಇರುವ ಅಭಿಪ್ರಾಯವಾಗಿದೆ.

ಗ್ರಾಮೀಣ ಪ್ರದೇಶಗಳನ್ನು ಬಿಟ್ಟು ನೋಡುವುದಾದರೆ ನಗರಗಳಲ್ಲಿ ಬಿಜೆಪಿ 11-15 ಸ್ಥಾನ ಗೆಲ್ಲಬಹುದು. ಆಡಳಿತ ಪಕ್ಷ ಮೀರಿಸಿ ಕಾಂಗ್ರೆಸ್ 15-19 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Karnataka Assembly Elections 2023: Result Of ABP, C-Voter Opinion Poll Result

ವಿಭಾಗವಾರು ಪಕ್ಷಗಳು ಸ್ಥಾನ ಗಳಿಕೆಯ ಮಾಹಿತಿ

ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಉನ್ನತ ಸ್ಥಾನದಲ್ಲಿದೆ. ಹಳೆಯ ಮೈಸೂರು ಪ್ರದೇಶದ ಬಿಜೆಪಿಗೆ ಶೇ.20 ಮತ್ತು ಕಾಂಗ್ರೆಸ್‌ಗೆ ಶೇ. 36 ಮತ ಹಂಚಿಕೆಯಾಗುವ ನಿರೀಕ್ಷೆ ಇದೆ. ಇನ್ನು ಇಲ್ಲಿ ಜೆಡಿಎಸ್‌ಗೆ 26-27 ಸ್ಥಾನ ಮತ್ತು ಕಾಂಗ್ರೆಸ್‌ಗೆ 24-28 ಸ್ಥಾನ ಗಳಿಸಬಹುದು ಎನ್ನಲಾಗಿದೆ.

ಮಧ್ಯ ಕರ್ನಾಟಕ: ಅದೇ ರೀತಿ ರಾಜ್ಯದ ಮಧ್ಯ ಕರ್ನಾಟಕದಲ್ಲಿ ಬಿಜೆಪಿ (ಶೇ.38) 35 ಸ್ಥಾನಗಳಲ್ಲಿ ಬಿಜೆಪಿ 12-16 ಸ್ಥಾನ ಧಕ್ಕಬಹುದು. ಕಾಂಗ್ರೆಸ್‌ಗೆ (ಶೇ.41) 35 ಸ್ಥಾನಗಳಲ್ಲಿ 18-22 ಗಳಿಸಲಿದೆ. ಜೆಡಿಎಸ್‌ಗೆ 2ಕ್ಕಿಂತ ಹೆಚ್ಚು ಸ್ಥಾನ ಸಿಗುವುದು ಅನುಮಾನ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಕರಾವಳಿ ಕರ್ನಾಟಕವು ಕೇವಲ ಒಟ್ಟು 21 ಸ್ಥಾನ ಹೊಂದಿದೆ. ಅದರಲ್ಲಿ ಬಿಜೆಪಿ (ಶೇ.46) 9 ರಿಂದ 13 ಸ್ಥಾನ, ಕಾಂಗ್ರೆಸ್‌ 8 ರಿಂದ 12 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕ: ಉತ್ತರ (ಮುಂಬೈ) ಕರ್ನಾಟಕ ಪ್ರದೇಶದ 50 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಶೇ. 43 ಮತ ಪಡೆಯಬಹು ಎನ್ನಲಾಗಿದೆ. ಲಿಂಗಾಯತರೇ ಹೆಚ್ಚಿರುವುದರಿಂದ ಇಲ್ಲಿ ಬಿಜೆಪಿ 21-25 ಮತ್ತು ಕಾಂಗ್ರೆಸ್ 25-29 ಸ್ಥಾನ ಪಡೆಯುವ ಸಾಧ್ಯತೆ ಇದೆ. ಅದೇ ರೀತಿ ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಶೇ.44 ಮತ್ತು ಬಿಜೆಪಿ ಶೇ.37ರಷ್ಟು ಸ್ಥಾನ ಹೊಂದಲಿದೆ. ಕಾಂಗ್ರೆಸ್ 19-23 ಸ್ಥಾನ ಗೆಲ್ಲುವ ನಿರೀಕ್ಷೆಗಳು ದಟ್ಟವಾಗಿವೆ. ಬಿಜೆಪಿ ಈ ಪ್ರದೇಶದಲ್ಲಿ 8-12 ಕ್ಷೇತ್ರಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯ ಅಂಕಿ ಅಂಶಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+