Karnataka Elections Opinion Poll: ಹೊರಬಿದ್ದ ಮತ್ತೊಂದು ಸಮೀಕ್ಷಾ ಫಲಿತಾಂಶ

ಬೆಂಗಳೂರು, ಮಾರ್ಚ್ 30: ಚುನಾವಣಾ ಹೊಸ್ತಿಲಲ್ಲಿರುವ ಕರ್ನಾಟಕ ಅಸೆಂಬ್ಲಿಯಲ್ಲಿ ಯಾರು ಗೆಲ್ಲಬಹುದು ಎನ್ನುವ ವಿಚಾರದಲ್ಲಿ ಮಾಧ್ಯಮ ಸಂಸ್ಥೆಗಳು ಖಾಸಗಿ ಕಂಪೆನಿಗಳ ಸಹಕಾರದೊಂದಿಗೆ ಸಾಲುಸಾಲು ಸಮೀಕ್ಷೆಯನ್ನು ನಡೆಸುತ್ತಿವೆ. ಮಾರ್ಚ್ 29ರಂದು, ಹಲವು ವಾಹಿನಿಗಳು ಸಮೀಕ್ಷೆಯನ್ನು ನಡೆಸಿ ಫಲಿತಾಂಶವನ್ನು ಪ್ರಕಟಿಸಿದ್ದವು.

ಈಗ, ಸ್ಮಾಲ್ ಬಾಕ್ಸ್ ಇಂಡಿಯಾ ಎನ್ನುವ ಸಂಸ್ಥೆಯು ಚುನಾವಣಾಪೂರ್ವ ಸಮೀಕ್ಷೆಯನ್ನು ನಡೆಸಿದ್ದು ಫಲಿತಾಂಶವನ್ನು ಪ್ರಕಟಿಸಿದೆ. ಒಂದು ದಿನದ ಹಿಂದೆಯೇ ರಿಸಲ್ಟ್ ಬಹಿರಂಗ ಪಡಿಸುವುದಾಗಿ ಈ ಸಂಸ್ಥೆ ತಿಳಿಸಿತ್ತು. ಎಲ್ಲಾ ಚುನಾವಣೆಯ ಸಮೀಕ್ಷೆ, ರಾಜಕೀಯಕ್ಕೆ ಸಂಬಂಧಿಸಿದಂತೆ ಈ ಮಾಧ್ಯಮ ಅಪ್ಡೇಟ್ ಕೊಡುತ್ತದೆ.

Karnataka Assembly Elections 2023: Opinion Poll Result By Small Box India

ಈಗಾಗಲೇ, ಗುಜರಾತ್ ನಲ್ಲಿ ಬಿಜೆಪಿ, ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸಮೀಕ್ಷೆಯಲ್ಲೇ ಹೇಳಿದ್ದೇವೆ ಎಂದು ಈ ಸಂಸ್ಥೆ ತನ್ನ ಟ್ವಿಟ್ಟರ್ ಹ್ಯಾಂಡಲ್ (@SmallBoxIndia) ನಲ್ಲಿ ಹೇಳಿಕೂಂಡಿದೆ. ತನ್ನದು ಲಾಭರಹಿತ ಸಂಸ್ಥೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.

2023ರ ಈ ಸಲ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತ್ಯಧಿಕ ಸ್ಥಾನಗಳು ಲಭಿಸಲಿವೆ. ಬಹುಮತ ಮೂಲಕ ಕಾಂಗ್ರೆಸ್‌ ಕರ್ನಾಟಕದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ವಿಪಕ್ಷವಾದ ಕಾಂಗ್ರೆಸ್‌ ಚುನಾವಣೆಯಲ್ಲಿ 115-127, ಬಿಜೆಪಿಯು ಒಟ್ಟು 68-80, ಇನ್ನು ಪ್ರಾದೇಶಿಕ ಪಕ್ಷವಾದ ಜೆಡಿಎಸ್ 23-35 ಸ್ಥಾನಗಳಲ್ಲಿ ತನ್ನ ಛಾಪು ಮೂಡಿಸಬಹುದು ಎಂದು ಎಬಿಪಿ-ಸಿವೋಟರ್ ತನ್ನ ಸಮೀಕ್ಷೆಯಲ್ಲಿ ಹೇಳಿತ್ತು.

ಸ್ಮಾಲ್ ಬಾಕ್ಸ್ ಇಂಡಿಯಾ ಪ್ರಕಟಿಸಿದ ಸಮೀಕ್ಷಾ ಫಲಿತಾಂಶದಲ್ಲಿ ಕಾಂಗ್ರೆಸ್ ಬಹುಮತವನ್ನು ಪಡೆದುಕೊಳ್ಳಲಿದೆ. ಅದು ಕೊಟ್ಟ ಸಂಖ್ಯಾಬಲ ಹೀಗಿದೆ:

ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಇತರರು
118-129 65-70 28-32 1-3

ಶೇಕಡಾವಾರು ಅಂದಾಜು ಮತಗಳಿಕೆ:

ಕಾಂಗ್ರೆಸ್: ಶೇ. 41

ಬಿಜೆಪಿ: ಶೇ. 36

ಜೆಡಿಎಸ್: ಶೇ. 18

ಇತರರು: ಶೇ.5

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಎಬಿಪಿ-ಸಿ ವೋಟರ್ ಸಮೀಕ್ಷೆ ಭವಿಷ್ಯ ನುಡಿದಿತ್ತು. ಮತ್ತೊಂದೆಡೆ ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಜೀ ನ್ಯೂಸ್ ಸರ್ವೇ ಹೇಳುತ್ತಿದೆ.

ಜೀ ನ್ಯೂಸ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ 96 ರಿಂದ 106, ಕಾಂಗ್ರೆಸ್ 88-98, ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ 23-33, ಇತರೆ 02-07 ಸೀಟು ಗೆಲ್ಲೋ ಸಾಧ್ಯತೆ ಇದೆ ಎಂದು ಸರ್ವೇಯಲ್ಲಿ ಹೇಳಿದೆ.

ಎಬಿಪಿ-ಸಿವೋಟರ್ ನಡೆಸಿದ್ದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ, ಕಾಂಗ್ರೆಸ್‌ ಚುನಾವಣೆಯಲ್ಲಿ 115-127 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ. ಅದೇ ರೀತಿ ಈಗಿನ ಆಡಳಿತ ಪಕ್ಷವಾಗಿರುವ ಬಿಜೆಪಿಯು ಒಟ್ಟು 68-80 ಸೀಟುಗಳನ್ನು ಗೆಲ್ಲಬಹುದು. ಇನ್ನೂ ಸ್ಥಳಿಯ ಪಕ್ಷವಾದ ಜೆಡಿಎಸ್ 23-35 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ತನ್ನ ಸಮೀಕ್ಷೆಯಲ್ಲಿ ಹೇಳಿದೆ.

Disclaimer: ಈ ಲೇಖನವನ್ನು ಸ್ಮಾಲ್ ಬಾಕ್ಸ್ ಇಂಡಿಯಾ ನಡೆಸಿದ ಸಮೀಕ್ಷೆ ಅಂಕಿಅಂಶ ಆಧಾರದಲ್ಲಿ ಬರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+