ಅಯ್ಯೋ ಇದೇನಿದು? 'ಬಿಜೆಪಿಯ ಅಮಿತ್ ಶಾ ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್?!'
Recommended Video

ಬೆಂಗಳೂರು, ಏಪ್ರಿಲ್ 06: "ಇಡೀ ಜಗತ್ತಿನಲ್ಲಿ ರೇಷ್ಮೆ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮತ್ತು ಇಡೀ ದೇಶದಲ್ಲಿ ರೇಷ್ಮೆ ಉತ್ಪಾದಿಸುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ..." ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರ್ನಾಟಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, 'ಮತ್ತೊಮ್ಮೆ ಸತ್ಯ ಮಾತನಾಡಿದ್ದಕ್ಕೆ ಬಹಳ ಧನ್ಯವಾದಗಳು. ನೀವು ನಮ್ಮ ಸ್ಟಾರ್ ಕ್ಯಾಂಪೇನರ್(ತಾರಾ ಪ್ರಚಾರಕ) ಆಗುತ್ತಿದ್ದೀರಾ' ಎಂದು ಕಾಲೆಳೆದಿದೆ.

2016-17 ರಲ್ಲಿ ಕರ್ನಾಟಕದ ರೇಷ್ಮೆ ಉತ್ಪಾದನೆ ದಾಖಲೆಯ ರೀತಿಯಲ್ಲಿ ಏರಿಕೆ ಕಂಡಿದೆ. ರೇಷ್ಮೆ ಗೂಡಿನ ಮಾರುಕಟ್ಟೆಯನ್ನೂ ಆಧುನೀಕರಣಗೊಳಿಸಿ, ಸಮಗ್ರ ಇ-ಮಂಡಿ ವೇದಿಕೆಯನ್ನು ಪರಿಚಯಿಸಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಈ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ ಹಲವರು, 'ಅಮಿತ್ ಶಾ ಕರ್ನಾಟಕದಲ್ಲಿದ್ದಷ್ಟೂ ಕಾಂಗ್ರೆಸ್ ಗೇ ಒಳ್ಳೆಯದು. ಅವರು ಕಾಂಗ್ರೆಸ್ ನ ತಾರಾ ಪ್ರಚಾರಕರಾಗುತ್ತಿದ್ದಾರೆ' ಎಂದು ಲೇವಡಿ ಮಾಡಿದ್ದಾರೆ!












Click it and Unblock the Notifications