Breaking: ಕರ್ನಾಟಕದಲ್ಲಿ 93 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಜೆಡಿಎಸ್

ಬೆಂಗಳೂರು, ಡಿಸೆಂಬರ್ 19: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಮೊದಲ ಹೆಜ್ಜೆ ಇಟ್ಟಿದೆ.

ರಾಷ್ಟ್ರೀಯ ಪಕ್ಷಗಳಿಗೂ ಪೂರ್ವದಲ್ಲಿಯೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ 93 ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಕರ್ನಾಟಕದಲ್ಲಿ ಭವಿಷ್ಯದ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಪಾಲಿಗೆ ಜೆಡಿಎಸ್ ಬಹುಮುಖ್ಯ ಪಾತ್ರ ವಹಿಸಲಿದೆ. ರಾಷ್ಟ್ರೀಯ ಪಕ್ಷಗಳು ಒಂದು ವೇಳೆ ಬಹುಮತ ಸಂಪಾದಿಸುವಲ್ಲಿ ವಿಫಲವಾದಲ್ಲಿ ಸರ್ಕಾರ ರಚನೆಗೆ ಜೆಡಿಎಸ್ ಬೆಂಬಲ ಅತ್ಯವಶ್ಯಕವಾಗಿದೆ.

Karnataka Assembly Election 2023: JDS Announced Candidate Name to 93 Constituency

ದಕ್ಷಿಣ ಕರ್ನಾಟಕದಲ್ಲಿ ಬಲಿಷ್ಠವಾಗಿರುವ ಜೆಡಿಎಸ್ ಒಟ್ಟು 93 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಈ ಪೈಕಿ ಟಾಪ್-10 ಅಭ್ಯರ್ಥಿಗಳು ಯಾರು ಹಾಗೂ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಲಾಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.ಜೆಡಿಎಸ್ ಪಕ್ಷದ ಟಾಪ್ -10 ಅಭ್ಯರ್ಥಿಗಳು ಮತ್ತು ಕ್ಷೇತ್ರ:

1. ಚನ್ನಪಟ್ಟಣ - ಹೆಚ್ ಡಿ ಕುಮಾರಸ್ವಾಮಿ

2. ರಾಮನಗರ - ನಿಖಿಲ್ ಕುಮಾರಸ್ವಾಮಿ

3. ಚಾಮುಂಡೇಶ್ವರಿ - ಜಿಟಿ ದೇವೇಗೌಡ

4. ಕೆ ಆರ್ ನಗರ - ಸಾ ರಾ ಮಹೇಶ್

5. ಶ್ರೀರಂಗಪಟ್ಟಣ - ರವೀಂದ್ರ ಶ್ರೀಕಂಠಯ್ಯ

6. ಬೀದರ್ ದಕ್ಷಿಣ - ಬಂಡೆಪ್ಪ ಕಾಶೆಂಪೂರ್

7. ಹರಿಹರ - ಹೆಚ್ ಎಸ್ ಶಿವಶಂಕರ್

8. ಭದ್ರಾವತಿ - ಶಾರದಾ ಅಪ್ಪಾಜಿಗೌಡ

9. ತುರುವೆಕೆರೆ - ಎಂ ಟಿ ಕೃಷ್ಣಪ್ಪ

10. ಚಿಕ್ಕಬಳ್ಳಾಪುರ - ಕೆಪಿ ಬಚ್ಚೇಗೌಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+