Industry: ತುಮಕೂರಿಗೆ ಕೈಗಾರಿಕಾ ಬೂಮ್: ₹7,000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗ ಸೃಷ್ಟಿಗೆ ಭರ್ಜರಿ ಪ್ಲ್ಯಾನ್

ಬೆಂಗಳೂರು: ಭಾರತ ಸರಕಾರದ ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (ಭವ್ಯ ಯೋಜನೆ) ಅಡಿಯಲ್ಲಿ 13 ರಾಜ್ಯಗಳಲ್ಲಿ 11 ಕೈಗಾರಿಕಾ ಕಾರಿಡಾರ್ ಮತ್ತು 20 ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸಲಾಗುತ್ತಿದೆ. ಕರ್ನಾಟಕದಲ್ಲಿ ತುಮಕೂರಲ್ಲಿ 'ನೋಡ್' ಅಭಿವೃದ್ಧಿ, ಕಲಬುರಗಿಯಲ್ಲಿ ಕೈಗಾರಿಕೆ ಕಾರಿಡಾರ್ ಸೇರಿದಂತೆ ಪ್ರಮುಖ ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ. ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ಪ್ರಗತಿ ಸಾಧಿಸಿದ್ದು ಸೇರಿದಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲರು ಮಹತ್ವದ ಮಾಹಿತಿ ನೀಡಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ನೇತೃತ್ವದಲ್ಲಿ ಸೋಮವಾರ ಜರುಗಿದ 'ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ' ಮತ್ತು ಅನುಷ್ಠಾನ ಮಂಡಳಿಯ 3ನೇ ಮೇಲುಸ್ತುವಾರಿ ಪ್ರಾಧಿಕಾರದ ಸಭೆಯಲ್ಲಿ ಸಚಿವರು ವರ್ಚುಯಲ್ ಆಗಿ ಪಾಲ್ಗೊಂಡು ಮಾತನಾಡಿದರು.

Karnataka Accelerates Industrial Growth

ಕರ್ನಾಟಕ ರಾಜಧಾನಿ ಬೆಂಗಳೂರಿನ ನಂತರದಲ್ಲಿ ತುಮಕೂರನ್ನು ತಯಾರಿಕೆಯ ನಗರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ 1,736 ಎಕರೆಯನ್ನು ಮೀಸಲಿಡಲಾಗಿದೆ. ಇದರಿಂದ 7 ಸಾವಿರ ಕೋಟಿ ರೂಪಾಯಿ ಹೂಡಿಕೆ ಹರಿದು ಬರಲಿದೆ ಎಂದರು. ಸಾರಿಗೆ, ರೈಲ್ವೆ ಮೂಲಸೌಕರ್ಯ, ಕೈಗಾರಿಕೆ ಸೇರಿದಂತೆ ಮುಂದಿನ ಕೆಲವೇ ವರ್ಷಗಳಲ್ಲಿ ಎಲ್ಲ ವಿಧದಲ್ಲೂ ತುಮಕೂರು ಅಭಿವೃದ್ಧಿ ಆಗಲಿದೆ ಎನ್ನಬಹುದು.

ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್, 88 ಸಾವಿರ ಉದ್ಯೋಗ!

ತುಮಕೂರು ನೋಡ್ ನಲ್ಲಿ ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ನ ಈಗಾಗಲೇ ಶೇ.30ರಷ್ಟು ಭೌತಿಕ ಪ್ರಗತಿ ಸಾಧಿಸಿದ್ದು, ಶೇ.20ರಷ್ಟು ಆರ್ಥಿಕ ಪ್ರಗತಿ ಕಂಡಿದೆ. ಇಲ್ಲಿ 300 ಎಕರೆ ಭೂಮಿಯನ್ನು ಜಪಾನ್ ಟೌನ್-ಶಿಪ್ ಗೆ ಮತ್ತು 200 ಎಕರೆಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಂಜೂರು ಮಾಡಲಾಗಿದೆ. ತುಮಕೂರು ನೋಡ್ ಅಭಿವೃದ್ಧಿಯಿಂದ 88 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಪಾಟೀಲರು ತಿಳಿಸಿದರು.

ಜಿಂದಾಲ್ ಗೆ 150 ಎಕ್ರೆ ಭೂಮಿ

ಇಲ್ಲಿ ಜಿಂದಾಲ್ ಅಲ್ಯೂಮಿನಿಯಂ ಪ್ರಧಾನ ಹೂಡಿಕೆದಾರ ಕಂಪನಿಯಾಗಿದ್ದು, ಅದಕ್ಕೆ 151 ಎಕರೆ ಭೂಮಿ ಕೊಡಲಾಗಿದೆ. 41 ಎಕರೆಯನ್ನು ಸಾಂಸ್ಥಿಕ ಬಳಕೆಗೆ ಮೀಸಲಿಡಲಾಗಿದೆ. ಭೂಸ್ವಾಧೀನ ಸುಗಮವಾಗಿ ನಡೆಯುತ್ತಿದೆ. 2027ರಲ್ಲಿ ಯೋಜನೆಯನ್ನು ಮುಗಿಸಲಾಗುವುದು. ಈ ನೋಡ್‌ನಲ್ಲಿ ಆಹಾರ ಮತ್ತು ಪಾನೀಯ, ಜವಳಿ ಮತ್ತು ಉಡುಪು, ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಜನರಲ್ ಎಂಜಿನಿಯರಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಆದ್ಯತೆ ಕೊಡಲಾಗುವುದು ಎಂದರು.

ಕಲಬುರಗಿಯಲ್ಲಿ 'ಪಿಎಂ ಮಿತ್ರ ಕೈಗಾರಿಕಾ ಪಾರ್ಕ್'

ಕಲಬುರಗಿಗೆ ಮಂಜೂರಾಗಿರುವ ಪಿಎಂ ಮಿತ್ರ ಕೈಗಾರಿಕಾ ಪಾರ್ಕ್ ಮತ್ತು 'ಭವ್ಯ' ಯೋಜನೆಯಡಿ ರಾಜ್ಯಕ್ಕೆ ಮಂಜೂರಾಗಿರುವ ಯೋಜನೆಗಳನ್ನು ಕೂಡ ಮುಗಿಸಲಾಗುವುದು. ಇದಕ್ಕೆ ರಾಜ್ಯದಿಂದ ಕೇಂದ್ರಕ್ಕೆ ಎಲ್ಲಾ ರೀತಿಯ ಅಗತ್ಯ ಸಹಕಾರ ಕೊಡಲಾಗುತ್ತದೆ. ಕೇಂದ್ರದಿಂದ ದೇಶದ 13 ರಾಜ್ಯಗಳಲ್ಲಿ 11 ಕೈಗಾರಿಕಾ ಕಾರಿಡಾರ್ ಮತ್ತು 20 ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪೈಕಿ 4 ಸ್ಮಾರ್ಟ್ ಸಿಟಿ ಯೋಜನೆಗಳು ಮುಗಿದಿದ್ದು, ಉಳಿದ 16 ಅಭಿವೃದ್ಧಿಯ ನಾನಾ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದು ಸಚಿವರು ವಿವರಿಸಿದರು.

ಬೆಂಗಳೂರು-ಚೆನ್ನೈ, ಮುಂಬೈ & ಹೈದರಾಬಾದ್ ಕಾರಿಡಾರ್

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿ, ಈ ಉಪಕ್ರಮದ ವ್ಯಾಪ್ತಿಯಲ್ಲೇ ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 50,759 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ 5.35 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಸಾಮರ್ಥ್ಯ ಹೊಂದಿದ್ದು 14 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಒಟ್ಟು 49,120 ಎಕರೆಯಲ್ಲಿ ಅನುಷ್ಠಾನಕ್ಕೆ 100 ಕೈಗಾರಿಕಾ ಪಾರ್ಕ್‌ಗಳು ತಲೆ ಎತ್ತಲಿವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+