Karnataka: ಸಿಲಿಕಾನ್‌ ಸಿಟಿಗೆ ಈ ಗ್ರಾಮ ಮಾದರಿ: ನೂರಕ್ಕೆ ನೂರರಷ್ಟು ಮತದಾನ

ದೇಶದಲ್ಲಿ ಎರಡನೇ ಹಂತದ ಮತದಾನ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನದ ಸಂಪೂರ್ಣ ಚಿತ್ರಣ ಸಿಗಲಿದೆ. ಕರ್ನಾಟಕದಲ್ಲೂ ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.

14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಶಾಂತಿಯುತವಾಗಿತ್ತು. ಚಾಮರಾಜನರದಲ್ಲಿ ಗಲಾಟೆ ಆಗಿದ್ದು ಬಿಟ್ಟರೆ, ಮಿಕ್ಕ ಎಲ್ಲ ಕಡೆಯೂ ಶಾಂತಿಯುತ ಮತದಾನ ನಡೆದಿದೆ. ಅಲ್ಲದೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮತದಾನ ಬಿರುಸು ಪಡೆದುಕೊಂಡಿದೆ. ಆದರೆ ಕರ್ನಾಟಕದ ಈ ಒಂದು ಗ್ರಾಮದಲ್ಲಿ ನೂರಕ್ಕೆ ನೂರು ಮತದಾನ ನಡೆದಿದ್ದು, ಮಾದರಿ ಗ್ರಾಮ ಎಂಬ ಖ್ಯಾತಿ ಪಡೆದುಕೊಂಡಿದೆ.

Karnataka A Prototype for Silicon City Unanimous Voter Turnout

ಮಾದರಿ ಗ್ರಾಮ

ಬೆಂಗಳೂರಿನ ವಿದ್ಯಾವಂತ ಮತದಾರ ಈ ಬಾರಿಯೂ ಸಹ ತನ್ನ ಹಳೆಯ ಮೂಡ್‌ನಲ್ಲೇ ಮುಂದುವರೆದಿದ್ದಾನೆ. ಪಾರ್ಟಿ ಮೂಡ್‌ನಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ಬೆಂಗಳೂರಿಗರು, ಮತದಾನ ಮಾಡುವಲ್ಲಿ ಹಿಂದೇಟು ಹಾಕಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲೇ ಅತಿ ಕಡಿಮೆ ಮತದಾನ ನಡೆದಿದೆ.

ನೂರಕ್ಕೆ ನೂರು ಮತದಾನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತಾಲೂಕಿನ ಬಾಂಜಾರ ಮಲೆ ಗ್ರಾಮದಲ್ಲಿ ಶೇಕಡಾ 100 ರಷ್ಟು ಮತದಾನ ಮಾಡುವ ಮೂಲಕ ನಗರ ಹಾಗೂ ಪಟ್ಟಣಗಳಿಗೆ ಮಾದರಿ ಆಗಿದೆ. ಈ ಗ್ರಾಮದಲ್ಲಿ 111 ಮತಗಳಿದ್ದು, ಗ್ರಾಮಸ್ಥರು ಎಲ್ಲರೂ ಮತಚಲಾಯಿಸಿ ಹಿರಿಮೆ ಮೆರೆದಿದ್ದಾರೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲೂ ಮತದಾನ ಬಿರುಸು ಪಡೆದಿದೆ. ವಿಶೇಷ ಬಿಗಿ ಭದ್ರತೆಯೊಂದಿಗೆ ಮತದಾರರಿಗೆ ಮತದಾನ ಮಾಡಲು ಅವಕಾ ಕಲ್ಪಿಸಲಾಗಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಿಎಪಿಎಫ್‌ ಫೋರ್ಸ್‌ ನಿಯೋಜಿಲಾಗಿತ್ತು.

ಕರ್ನಾಕದಲ್ಲಿ ಆದ ವೋಟಿಂಗ್ ಎಷ್ಟು?

ಈ ವರೆಗೆ ಬಂದಿರುವ ಮತದಾನದ ಮಾಹಿತಿಯ ಪ್ರಕಾರ ಮಂಡ್ಯದಲ್ಲಿ 74.87 ರಷ್ಟು ಮತದಾನವಾಗಿದೆ. ಇನ್ನು ಉಡುಪಿ-ಚಿಕ್ಕಮಗಳೂರಿನಲ್ಲಿ 72.13, ಹಾಸನದಲ್ಲಿ 72.13, ದಕ್ಷಿಣ ಕನ್ನಡದಲ್ಲಿ 71.83, ಚಿತ್ರದುರ್ಗದಲ್ಲಿ 67.00, ತುಮಕೂರು 72.10, ಚಾಮರಾಜನಗರ 69.60, ಬೆಂಗಳೂರು ಗ್ರಾಮಾಂತರ 61.78, ಬೆಂಗಳೂರು ಉತ್ತರ 50.04, ಬೆಂಗಳೂರು ಕೇಂದ್ರ 48.61, ಬೆಂಗಳೂರು ದಕ್ಷಿಣ 49.37, ಚಿಕ್ಕಮಗಳೂರು 70.97, ಕೋಲಾರದಲ್ಲಿ 71.26 ರಷ್ಟು ಮತದಾನವಾಗಿದೆ.

13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಿತು. ಸಂಜೆ 5 ಗಂಟೆಗೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 60.7% ಮತದಾನವಾಗಿದೆ. ಮಣಿಪುರ, ಛತ್ತೀಸ್‌ಗಢ, ಬಂಗಾಳ, ಅಸ್ಸಾಂ ಮತ್ತು ತ್ರಿಪುರದಲ್ಲಿ 70% ಕ್ಕಿಂತ ಹೆಚ್ಚು ಮತದಾನ ದಾಖಲಾದರೆ ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 52.6%, 53% ಮತ್ತು 53.5% ಕಡಿಮೆ ಮತದಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+