PUC ಅಂಕಪಟ್ಟಿ ಇನ್ನು ಡಿಜಿಟಲ್: ಮುಂದಿನ ವರ್ಷದಿಂದ ಸಿಗಲ್ಲ ಭೌತಿಕ ಅಂಕಪಟ್ಟಿ , ಡಿಜಿಲಾಕರ್‌ನಲ್ಲಿ ಮಾತ್ರ ಲಭ್ಯ
ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿ ನೀಡುವ ದಶಕಗಳ ಹಳೆಯ ಪದ್ಧತಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (KSEAB) ಗುಡ್ ಬೈ ಹೇಳಲು ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಕೇವಲ ಡಿಜಿಟಲ್ ಅಂಕಪಟ್ಟಿ ಮಾತ್ರ ಲಭ್ಯವಾಗಲಿದ್ದು, ಭೌತಿಕ ಪ್ರತಿಯನ್ನು ಮುದ್ರಿಸಿ ನೀಡುವ ವ್ಯವಸ್ಥೆ ಇತಿಹಾಸದ ಪುಟ ಸೇರಲಿದೆ.
ಈ ವರ್ಷ ದ್ವಿತೀಯ ಪಿಯುಸಿ ಅಂಕಪಟ್ಟಿಗೆ ವಿದ್ಯಾರ್ಥಿಗಳಿಂದ ಈಗಾಗಲೇ ಶುಲ್ಕವನ್ನು ಸಂಗ್ರಹ ಮಾಡಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನಲ್ಲಿ ಡಿಜಿಲಾಕರ್ ಜೊತೆಗೆ ಭೌತಿಕ ಅಂಕಪಟ್ಟಿಯನ್ನೂ ಸಹ ನೀಡಲಾಗುತ್ತಿದೆ. ಆದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ಮಯವಾಗಲಿದ್ದು, ರಾಷ್ಟ್ರೀಯ ಶೈಕ್ಷಣಿಕ ದಾಖಲೆ ಕೋಶ (NAD) - ಡಿಜಿಲಾಕರ್‌ನಲ್ಲಿ ಮಾತ್ರ ದ್ವಿತೀಯ ಪಿಯುಸಿ ಅಂಕಪಟ್ಟಿ ಸಿಗಲಿದೆ. ವಿಶೇಷವೆಂದರೆ, ಈ ನೂತನ ಡಿಜಿಟಲ್ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳ ಭಾವಚಿತ್ರ ಸಹ ಇರಲಿದೆ.

ಅಪಾರ್ ಐಡಿ (APAAR ID) ಕಡ್ಡಾಯ
ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿ ಅಂಕಪಟ್ಟಿಯನ್ನು ಅಪಾರ್ (ಆಟೋಮೇಟೆಡ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ) ಐಡಿಯೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಲು ಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಎನ್‌ಎಡಿ-ಡಿಜಿಲಾಕರ್‌ನಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ಅಪಾರ್ ಐಡಿ ಪಡೆಯುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಪದವಿ ಪೂರ್ವ ಶಿಕ್ಷಣ) ಅಧೀನ ಕಾರ್ಯದರ್ಶಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಡಿಜಿಟಲ್ ಅಂಕಪಟ್ಟಿಯಿಂದ ವಿದ್ಯಾರ್ಥಿಗಳಿಗೆ ಆಗುವ ಲಾಭಗಳೇನು?
1. ದಾಖಲೆಗಳು ಡಿಜಿಟಲ್ ರೂಪದಲ್ಲಿರುವುದರಿಂದ ವಿದ್ಯಾರ್ಥಿಗಳು ದೇಶದ ಯಾವುದೇ ಮೂಲೆಯಲ್ಲಿದ್ದರೂ, ಯಾವಾಗ ಬೇಕಾದರೂ ತಮ್ಮ ಮೊಬೈಲ್ ಮೂಲಕ ಸುಲಭವಾಗಿ ಪಡೆಯಬಹುದು.
2. ಭೌತಿಕ ಅಂಕಪಟ್ಟಿಯಂತೆ ಮಳೆಯಿಂದ ನೆನೆಯುವ, ಹರಿದುಹೋಗುವ ಅಥವಾ ಕಳೆದುಹೋಗುವ ಯಾವುದೇ ಆತಂಕವಿರುವುದಿಲ್ಲ.
3. ಶಿಕ್ಷಣ ಮತ್ತು ಐಟಿ ಇಲಾಖೆಗಳ ಸಮನ್ವಯದಿಂದ ಎನ್‌ಎಡಿ-ಡಿಜಿಲಾಕರ್‌ನಲ್ಲಿರುವ ಈ ದಾಖಲೆಗಳು ಅತ್ಯಂತ ಸುರಕ್ಷಿತವಾಗಿರುತ್ತವೆ.
4. ಈ ಅಂಕಪಟ್ಟಿಯನ್ನು ಸರ್ಕಾರವೇ ಅಧಿಕೃತವೆಂದು ಪರಿಗಣಿಸಿರುವುದರಿಂದ, ದಾಖಲೆಗಳ ದೃಢೀಕರಣ (Verification) ಮತ್ತು ಹಂಚಿಕೆ ಪ್ರಕ್ರಿಯೆ ಅತ್ಯಂತ ಸರಳವಾಗಲಿದೆ.
ಈ ಮಹತ್ವದ ಬದಲಾವಣೆ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ನಿಟ್ಟಾಲಿ, "ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಜಿಟಲ್ ಅಂಕಪಟ್ಟಿಗಳು ಅತ್ಯಂತ ಸುರಕ್ಷಿತವಾಗಿದ್ದು, ದೇಶದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಇದನ್ನು ಅಧಿಕೃತವಾಗಿ ಸುಲಭವಾಗಿ ಬಳಸಬಹುದು" ಎಂದು ಸ್ಪಷ್ಟಪಡಿಸಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ರಿಲೀಫ್
ಈ ಡಿಜಿಟಲ್ ವ್ಯವಸ್ಥೆಯಿಂದಾಗಿ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನಗತ್ಯ ಅಲೆದಾಟ ತಪ್ಪಲಿದೆ. ಈ ಹಿಂದೆ ಅಂಕಪಟ್ಟಿಯಲ್ಲಿನ ಸಣ್ಣಪುಟ್ಟ ತಪ್ಪುಗಳ ತಿದ್ದುಪಡಿಗಾಗಿ ಅಥವಾ ಕಳೆದುಹೋದ ಅಂಕಪಟ್ಟಿಯ ನಕಲು ಪ್ರತಿ ಪಡೆಯಲು ವಿದ್ಯಾರ್ಥಿಗಳು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂಡಳಿಯ ಕಚೇರಿಗೆ ಅಲೆಯಬೇಕಿತ್ತು. ಇನ್ನು ಮುಂದೆ ಆ ಕಿರಿಕಿರಿ ಇರುವುದಿಲ್ಲ. ಪಿಯುಸಿ ಫಲಿತಾಂಶ ಪ್ರಕಟವಾದ ದಿನವೇ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಅಪ್‌ಲೋಡ್ ಆಗಲಿದೆ. ಮರು ಎಣಿಕೆ (Re-totaling) ಅಥವಾ ಮರುಮೌಲ್ಯಮಾಪನದ (Re-evaluation) ನಂತರದ ಪರಿಷ್ಕೃತ ಅಂಕಪಟ್ಟಿಗಳೂ ಸಹ ತಕ್ಷಣವೇ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ.
ಎನ್‌ಎಡಿ-ಡಿಜಿಲಾಕರ್‌ನಲ್ಲಿ ಲಭ್ಯವಾಗುವ ಈ ಡಿಜಿಟಲ್ ಅಂಕಪಟ್ಟಿಯನ್ನು ರಾಜ್ಯ ಹಾಗೂ ಹೊರ ರಾಜ್ಯಗಳ ಉನ್ನತ ವ್ಯಾಸಂಗಕ್ಕೆ ಅಧಿಕೃತ ದಾಖಲೆಯೆಂದು ಪರಿಗಣಿಸುವಂತೆ ಸರ್ಕಾರ ಸೂಚಿಸಿದೆ. ಅಲ್ಲದೆ, ವಿವಿಧ ನೇಮಕಾತಿ ಪ್ರಾಧಿಕಾರಗಳು ಮತ್ತು ಸಂಸ್ಥೆಗಳು ತಮ್ಮ ನೇಮಕಾತಿ ಸಮಯದಲ್ಲಿ ಈ ಡಿಜಿಟಲ್ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ದೃಢೀಕೃತವೆಂದು ಮಾನ್ಯ ಮಾಡಲಿವೆ. ಜೊತೆಗೆ, ಈ ತಂತ್ರಜ್ಞಾನದ ಬಳಕೆಯಿಂದ ನಕಲಿ ಅಂಕಪಟ್ಟಿಗಳ ಹಾವಳಿಗೂ ಶಾಶ್ವತ ಬ್ರೇಕ್ ಬೀಳಲಿದೆ.
-
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
ದ್ವಿತೀಯ PUC ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
PUC ಕಾಮರ್ಸ್ ಪಾಸ್ ಆದ ವಿದ್ಯಾರ್ಥಿಗಳಿಗೆ ಮುಂದೇನು? ಕೈತುಂಬಾ ಸಂಬಳ ತರುವ ಬೆಸ್ಟ್ ಕೋರ್ಸ್ಗಳ ವಿವರ ಇಲ್ಲಿದೆ -
PUC ಕಲಾ ವಿಭಾಗದಲ್ಲಿ ಪಾಸ್ ಆದವರಿಗೆ ಮುಂದೇನು? ಇಲ್ಲಿವೆ ಭವಿಷ್ಯ ರೂಪಿಸುವ ಬೆಸ್ಟ್ ಕೋರ್ಸ್ಗಳು -
PUC ವಿಜ್ಞಾನ ವಿಭಾಗದಲ್ಲಿ ಶೇ.91.69ರಷ್ಟು ದಾಖಲೆ ಫಲಿತಾಂಶ: ಇವರೇ 599 ಅಂಕ ಗಳಿಸಿದ ಟಾಪರ್ -
2nd PUC 'ವಾಣಿಜ್ಯ' ವಿಭಾಗದಲ್ಲಿ ಶೇ.88.4ರಷ್ಟು ಸಾಧನೆ: ಇಬ್ಬರಿಗೆ 600ಕ್ಕೆ 600 ಅಂಕ, ಇವರೇ ಟಾಪರ್ಸ್ -
ದ್ವಿತೀಯ ಪಿಯುಸಿ 'ಕಲಾ' ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ: ಟಾಪರ್ಸ್ ಲಿಸ್ಟ್ ಇಲ್ಲಿದೆ -
2nd PUC ಫಲಿತಾಂಶದಲ್ಲಿ ಶೇ. 13ರಷ್ಟು ಏರಿಕೆ; ಕಲಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಫಸ್ಟ್: ಮಧು ಬಂಗಾರಪ್ಪ -
ದ್ವಿತೀಯ PUC ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ -
ನಿಮ್ಮ ದ್ವಿತೀಯ PUC ಅಂಕಗಳ ಬಗ್ಗೆ ಅಸಮಾಧಾನವೇ? ಮರುಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
PUC Result 2026: ದ್ವಿತೀಯ PUC ವಿದ್ಯಾರ್ಥಿಗಳ ಗಮನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ -
2nd PUC Result: ದ್ವಿತೀಯ ಪಿಯು ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟ: ನೋಡುವುದು ಹೇಗೆ?














Click it and Unblock the Notifications