ನಿಮ್ಮ ದ್ವಿತೀಯ PUC ಅಂಕಗಳ ಬಗ್ಗೆ ಅಸಮಾಧಾನವೇ? ಮರುಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಫಲಿತಾಂಶದ ನಂತರ ಕೆಲವು ವಿದ್ಯಾರ್ಥಿಗಳಿಗೆ ತಾವು ನಿರೀಕ್ಷಿಸಿದಷ್ಟು ಅಂಕಗಳು ಬಂದಿಲ್ಲ ಅಥವಾ ಮೌಲ್ಯಮಾಪನದಲ್ಲಿ ದೋಷವಾಗಿದೆ ಎಂಬ ಬೇಸರ ಅಥವಾ ಅಸಮಾಧಾನ ಇರಬಹುದು. ಇಂತಹ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ, ನಿಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಲಾದ ಪ್ರತಿ ಪಡೆಯಲು, ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಮಂಡಳಿಯು ಮುಕ್ತ ಅವಕಾಶ ಕಲ್ಪಿಸಿದೆ.

ಮರುಮೌಲ್ಯಮಾಪನ ಪ್ರಕ್ರಿಯೆ ಹೇಗೆ ನಡೆಯುತ್ತದೆ, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರ ಇಲ್ಲಿದೆ.

PUC Result

ಪ್ರಮುಖ ದಿನಾಂಕಗಳು

ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ಒಂದು ಅಥವಾ ಎರಡು ದಿನಗಳ ನಂತರ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಮಂಡಳಿಯು ಅಧಿಕೃತ ಪ್ರಕಟಣೆಯಲ್ಲಿ ದಿನಾಂಕಗಳನ್ನು ತಿಳಿಸಲಿದ್ದು, ಸ್ಕ್ಯಾನ್ ಪ್ರತಿ ಪಡೆದ ನಂತರವಷ್ಟೇ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಅಥವಾ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮಂಡಳಿಯು ನಿಗದಿಪಡಿಸಿದ ಅಂತಿಮ ದಿನಾಂಕದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ.

ಹಂತ 1: ಸ್ಕ್ಯಾನ್ ಪ್ರತಿ ಪಡೆಯುವುದು ಕಡ್ಡಾಯ

ಯಾವುದೇ ವಿದ್ಯಾರ್ಥಿ ಮರುಮೌಲ್ಯಮಾಪನ ಅಥವಾ ಮರು ಎಣಿಕೆ ಮಾಡಿಸಬೇಕಾದರೆ, ಮೊದಲು ಆಯಾ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಆನ್‌ಲೈನ್‌ನಲ್ಲಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದರೆ, ಮಂಡಳಿಯು ಉತ್ತರ ಪತ್ರಿಕೆಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುತ್ತದೆ. ಇದನ್ನು ಪಿಡಿಎಫ್ (PDF) ರೂಪದಲ್ಲಿ ಡೌನ್‌ಲೋಡ್ ಮಾಡಿಕೊಂಡು, ನಿಮ್ಮ ಕಾಲೇಜಿನ ಆಯಾ ವಿಷಯದ ಉಪನ್ಯಾಸಕರ ಬಳಿ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.

ಹಂತ 2: ಮರುಮೌಲ್ಯಮಾಪನ ಮತ್ತು ಮರು ಎಣಿಕೆ

ಸ್ಕ್ಯಾನ್ ಪ್ರತಿಯನ್ನು ಪರಿಶೀಲಿಸಿದಾಗ, ಯಾವುದಾದರೂ ಸರಿಯಾದ ಉತ್ತರಕ್ಕೆ ಅಂಕ ನೀಡಿಲ್ಲ ಅಥವಾ ಒಟ್ಟು ಅಂಕಗಳನ್ನು ಎಣಿಕೆ ಮಾಡುವಾಗ ತಪ್ಪಾಗಿದೆ ಎಂದು ಉಪನ್ಯಾಸಕರು ಖಚಿತಪಡಿಸಿದರೆ, ನೀವು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಪಿಯುಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

1. ಮೊದಲಿಗೆ KSEAB ನ ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಿ.

2. ಮುಖಪುಟದಲ್ಲಿ '2nd PUC Scanned Copy/Revaluation/Retotalling 2026' ಲಿಂಕ್ ಮೇಲೆ ಕ್ಲಿಕ್ ಮಾಡಿ.

3. ಹೊಸ ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಕೇಳಲಾದ ಇತರ ವಿವರಗಳನ್ನು ನಮೂದಿಸಿ ಲಾಗಿನ್ ಆಗಿ.

4. ನೀವು ಯಾವ ವಿಷಯದ ಸ್ಕ್ಯಾನ್ ಪ್ರತಿ ಅಥವಾ ಮರುಮೌಲ್ಯಮಾಪನ ಬಯಸುತ್ತೀರೋ ಆ ವಿಷಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ.

5. ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ (UPI) ಮೂಲಕ ಪ್ರತಿ ವಿಷಯಕ್ಕೆ ಮಂಡಳಿಯು ನಿಗದಿಪಡಿಸಿದ (1,670 ರೂ)ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.

6. ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ರಶೀದಿ ಮತ್ತು ಅರ್ಜಿಯ ಪ್ರಿಂಟ್ ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ.

ವಿದ್ಯಾರ್ಥಿಗಳು ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಮರುಮೌಲ್ಯಮಾಪನದ ನಂತರ ಬರುವ ಅಂಕಗಳೇ ಅಂತಿಮವಾಗಿರುತ್ತದೆ. ಮೊದಲಿನ ಅಂಕಗಳಿಗಿಂತ ಅಂಕಗಳು ಹೆಚ್ಚಾಗಬಹುದು ಅಥವಾ ಕೆಲವೊಮ್ಮೆ ಕಡಿಮೆಯೂ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ವಿಷಯ ಶಿಕ್ಷಕರ ಸಲಹೆ ಪಡೆದು, ಅಂಕ ಹೆಚ್ಚಾಗುವ ನೂರಕ್ಕೆ ನೂರು ಖಚಿತತೆ ಇದ್ದರಷ್ಟೇ ಮರುಮೌಲ್ಯಮಾಪನ ಪ್ರಕ್ರಿಯೆಗೆ ಮುಂದಾಗುವುದು ಜಾಣತನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+