ಜಿಲ್ಲಾವಾರು ಫಲಿತಾಂಶ: ಉಡುಪಿ ಫಸ್ಟ್ , ಬೀದರ್ ಲಾಸ್ಟ್
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ(ಮೇ 11) ಮಧ್ಯಾಹ್ನ ಪ್ರಕಟಗೊಂಡಿದೆ. ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡರೆ, ಬೀದರ್ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಪಡೆದುಕೊಂಡಿದ್ದಾರೆ.
ಬೆಂಗಳೂರು, ಮೇ 25: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ(ಮೇ 11) ಮಧ್ಯಾಹ್ನ ಪ್ರಕಟಗೊಂಡಿದೆ. ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡರೆ, ಬೀದರ್ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಎಂದಿನಂತೆ ಕರಾವಳಿ, ಮಲೆನಾಡು ಜಿಲ್ಲೆಗಳು ಮೇಲುಗೈ ಪಡೆದುಕೊಂಡಿದ್ದಾರೆ. ಜಿಲ್ಲಾವಾರು ಫಲಿತಾಂಶ ವಿವರ ಇಲ್ಲಿದೆ.
ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ 3.15ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಫಲಿತಾಂಶವನ್ನು ಪ್ರಕಟಿಸಿದರು.

ಸರ್ಕಾರಿ ವೆಬ್ ಸೈಟ್‌ಗಳಲ್ಲಿ ಮಾತ್ರ ಫಲಿತಾಂಶ ಲಭ್ಯವಿದೆ. ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ
ಸತತ ಎರಡು ಬಾರಿ ಪ್ರಥಮ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಈ ಬಾರಿ ಉಡುಪಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಬೀದರ್ ಜಿಲ್ಲೆಗೆ ಕೊನೆಯ ಸ್ಥಾನ ಗಳಿಸಿದೆ.
| ಶೈಕ್ಷಣಿಕ ಜಿಲ್ಲೆ | ಮಾರ್ಚ್ 2017 ಫಲಿತಾಂಶ | ಮಾರ್ಚ್ 2016 ಫಲಿತಾಂಶ | ||
| ಶೇಕಡಾ | ಸ್ಥಾನ | ಶೇಕಡಾ | ಸ್ಥಾನ | |
| ಉಡುಪಿ | 90.01 | 1 | 90.35 | 2 |
| ದಕ್ಷಿಣ ಕನ್ನಡ | 89.92 | 2 | 90.48 | 1 |
| ಉತ್ತರ ಕನ್ನಡ | 71.99 | 3 | 76.44 | 4 |
| ಕೊಡಗು | 70.83 | 4 | 79.35 | 3 |
| ಚಿಕ್ಕಮಗಳೂರು | 68.03 | 5 | 67.34 | 8 |
| ಶಿವಮೊಗ್ಗ | 68 | 6 | 69.28 | 7 |
| ಬೆಂಗಳೂರು ಉತ್ತರ | 67.17 | 7 | 70.82 | 6 |
| ಬೆಂಗಳೂರು ದಕ್ಷಿಣ | 66.63 | 8 | 70.88 | 5 |
| ಚಾಮರಾಜನಗರ | 65.34 | 9 | 64.86 | 13 |
| ಬಾಗಲಕೋಟೆ | 63.11 | 10 | 65.91 | 10 |
| ಹಾಸನ | 59.88 | 11 | 65.47 | 12 |
| ಬೆಂಗಳೂರು ಗ್ರಾಮಾಂತರ | 59.64 | 12 | 66.38 | 09 |
| ಚಿಕ್ಕಬಳ್ಳಾಪುರ | 59.63 | 13 | 63.74 | 14 |
| ಮೈಸೂರು | 59.03 | 14 | 65.53 | 11 |
| ಕೋಲಾರ | 57.87 | 15 | 61.76 | 17 |
| ಕೊಪ್ಪಳ | 56.84 | 16 | 54.32 | 26 |
| ಮಂಡ್ಯ | 56.43 | 17 | 56.52 | 24 |
| ಧಾರವಾಡ | 55.73 | 18 | 62.86 | 15 |
| ದಾವಣಗೆರೆ | 55.71 | 19 | 58.01 | 21 |
| ಬಳ್ಳಾರಿ | 55.13 | 20 | 59.09 | 20 |
| ಹಾವೇರಿ | 54.95 | 21 | 60.54 | 18 |
| ತುಮಕೂರು | 54.72 | 22 | 56.63 | 23 |
| ಗದಗ | 53.11 | 23 | 49.28 | 29 |
| ರಾಮನಗರ | 51.55 | 24 | 56.36 | 25 |
| ಚಿತ್ರದುರ್ಗ | 47.31 | 25 | 47.55 | 30 |
| ರಾಯಚೂರು | 46.98 | 26 | 49.61 | 28 |
| ಕಲಬುರಗಿ | 44.94 | 27 | 57.05 | 22 |
| ಬೆಳಗಾವಿ | 44.25 | 28 | 62.05 | 16 |
| ವಿಜಯಪುರ | 43 | 29 | 60.39 | 19 |
| ಯಾದಗಿರಿ | 42.07 | 30 | 44.16 | 31 |
| ಬೀದರ್ | 42.05 | 31 | 52.07 | 27 |
(ಒನ್ ಇಂಡಿಯಾ ಸುದ್ದಿ)












Click it and Unblock the Notifications