Karnaraka Rain: ಇಂದು ರಾತ್ರಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ

ಕರ್ನಾಟಕ, ಮೇ, 28: ರಾಜ್ಯದ ಹಲವೆಡೆ ಈಗಾಗಲೇ ಮುಂಗಾರು ಪೂರ್ವ ಮಳೆಯಿಂದ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿವೆ. ಅಲ್ಲದೆ ಇಂದು ಸಹ ಗುಡುಗು, ಮಿಂಚು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗಾದರೆ ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬೀಳಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮೂರು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದಾನೆ. ನಗರದಲ್ಲಿ ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನ ತಾಪಮಾನ ಇದ್ದು, ಬಳಿಕ ಮೋಡ ಮುಚ್ಚಿನ ವಾತಾವರಣವೇ ಮುಂದುವರೆದಿತ್ತು. ಹಾಗೆಯೆ ಇಂದು ಕೂಡ ನಗರದಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾರಣ ಇದ್ದು, ಸಂಜೆ ಗುಡುಗು, ಮಿಂಚು ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Heavy rain forecast in these districts

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯವ ಸಾಧ್ಯತೆಯಿದೆ ಎಂದು ಮುನ್ಸೂಚೆನೆ ನೀಡಿದೆ. ಕರಾವಳಿಯ ಕೆಲವು ಭಾಗಗಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಶನಿವಾರ ಮಳೆ ಬಿದ್ದಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ವಿಜಯಪು ಜಿಲ್ಲೆಯ ದೇವರಹಿಪ್ಪರಿಗೆಯಲ್ಲೂ ಸಾಧಾರಣ ಮಳೆ ಸುರಿದಿದೆ. ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಉಡುಪಿಯ ಕೂಟದಲ್ಲೂ ಕೂಡ ಮಳೆ ಬಿದ್ದಿದೆ.

ಹೀಗೆ ಮಳೆರಾಯನ ಆರ್ಭಟ ಜೋರಾಗುತ್ತಿದ್ದಂತೆ ಬಿಸಿಲ ಧಗೆ ಕಡಿಮೆ ಆಗುತ್ತಲೇ ಇದೆ. ಉತ್ತರ ಒಳನಾಡಿನ ಹಲವೆಡೆ ಈಗಾಗಲೇ ತಾಪಮಾನ ಕಡಿಮೆ ಆಗಿದೆ. ಮತ್ತೊಂದೆಡೆ ಒಳನಾಡಿನ ಹಲವೆಡೆ ಹಾಗೂ ಕರಾವಳಿಯ ಕೆಲವು ಭಾಗಗಳಲ್ಲಿ ಉಷ್ಣಾಂಶದ ವಾತಾವರಣ ಪ್ರತಿದಿನದಂತೆಯೇ ಮುಂದುವರದಿದೆ. ಇನ್ನು ದಕ್ಷಿಣ ಒಳನಾಡಿನ ಹಲವೆಡೆಯೂ ಉಷ್ಣಾಂಶ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ. ರಾಯಚೂರಿನಲ್ಲಿ ಮಾತ್ರ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು ಆಗಿದೆ ಎಂದು ತಿಳಿಸಿದೆ.

ಅದರಲ್ಲೂ ರಾಯಚೂರು ಜಿಲ್ಲೆ ಬಿಸಿಲ ನಾಡು ಅಂತಲೇ ಪ್ರಸಿದ್ಧಿ ಪಡೆದಿದೆ. ಇನ್ನು ಇಲ್ಲಿನ ಜನರು ಬಿಸಿಲಿನ ತಾಪಮಾನದಿಂದ ಬೆಂದು ಹೋಗಿದ್ದು, ಮಳೆರಾಯ ಯಾವಾಗ ತಂಪೆರೆಯುತ್ತಾನೆ ಎಂದು ಕಾದುಕುಳಿತ್ತಿದ್ದಾರೆ. ಹಾಗೆಯೆ ಬಳ್ಳಾರಿ, ಕಲಬುರಗಿ, ವಿಜಯನಗರ ಜಿಲ್ಲೆಗಳಲ್ಲೂ ಕೂಡ ಬಿಸಿಲಿನ ಬೇಗೆಯಿಂದ ಜನರು ಮನೆಗಳಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮವಾರವೂ ಮಳೆ ಮುಂದುವರಿಕೆ

ಇನ್ನು ಮೇ 29ರಂದು ಅಂದರೆ ಸೋಮವಾರವೂ ಕೂಡ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು, ಸಹಿತ ಮಳೆಯಾಗುವ ಸಾಧ್ಯತೆಯುದೆ. ಹಾಗೆಯೆ ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯ ದಿನಗಳಿಗಿಂತ ಹೆಚ್ಚಿರಲಿದೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ನಾಳೆ ಆರ್ಭಟ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಾಳೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ನಗರದ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಮತ್ತೊಂದೆ ಮೇ 30 ರಿಂದ 31ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಟ್ಟಿನಲ್ಲಿ ಹೇಳುವುದಾದರೆ ಬಿಸಿಲಿನಿಂದ ಇಷ್ಟು ದಿನ ಹಲವು ಜಿಲ್ಲೆಗಳ ಜನರು ಬೇಸತ್ತಿದ್ದರು. ಮತ್ತೊಂದೆಡೆ ಹಲವು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಿಂದ ದೊಡ್ಡ ಅನಾವುತಗಳೇ ಸಂಭವಿಸಿದ್ದವು. ಇದೀಗ ಮುಂಗಾರು ಮಳೆ ಎಂಟ್ರಿ ಕೊಡುವ ದಿನಗಣನೆ ಆರಂಭವಾಗಿದ್ದು, ಇದರಿಂದ ಅನಾಹುತಗಳು ಆಗದಂತೆ ಈಗಾಗಲೇ ಜಿಲ್ಲಾವಾರು ಎಚ್ಚರಿಕೆ ಸಂದೇಶಗಳನ್ನು ಕೂಡ ಜನರಿಗೆ ತಲಪಿಸಲಾಗಿದೆ. ಇನ್ನು ವಿಕೋಪ ತಡೆಯಲು ತಂಡಗಳು ಕೂಡ ಸಜ್ಜಾಗಿದ್ದು, ಈ ಬಾರಿಯ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಅನ್ನುವುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+