ಕನ್ನಡಿಗರ ಅಭಿಯಾನ: ದಕ್ಷಿಣ ಪಥೇಶ್ವರ "ಇಮ್ಮಡಿ ಪುಲಕೇಶಿ ಜಯಂತಿ" ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೆಂಡ್

ಇಂದು ಕನ್ನಡದ ಕುಲ ತಿಲಕ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯ. ಇಮ್ಮಡಿ ಪುಲಕೇಶಿ ರಾಜರನ್ನು ಹಲವರು ಸ್ಮರಿಸಿದ್ದಾರೆ. ಇದಕ್ಕೆಲ್ಲ ಕನ್ನಡಿಗರು ಇಷ್ಟು ದಿನಗಳ ಕಾಲ ಮಾಡಿದ ಪ್ರಯತ್ನವೇ ಮುಖ್ಯ ಕಾರಣ. ಪಕ್ಕದ ರಾಜ್ಯದ ರಾಜರುಗಳನ್ನು ಮೆರೆಸದೆ ಕನ್ನಡಿಗರು ಕರ್ನಾಡಕದ ರಾಜರನ್ನು ಮೆರೆಸಬೇಕು ಹಾಗೂ ಸ್ಮರಿಸಬೇಕು ಎಂದು ಕನ್ನಡಿಗರು ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸಿದ್ದರು. ಅಲ್ಲದೇ ಕನ್ನಡ ರಾಜರ ಬಗ್ಗೆ ಪ್ರಚಾರ ಮಾಡಲು ಪ್ರಾರಂಭಿಸಿದರು. ಅದರ ಪರಿಣಾಮವಾಗಿ ಇಂದು ರಾಜಕಾರಣಿಗಳು ಸಹ ಕನ್ನಡ ಕುಲ ತಿಲಕ ಎಂದೇ ಖ್ಯಾತಿ ಗಳಿಸಿರುವ ಇಮ್ಮಡಿ ಪುಲಕೇಶಿಗೆ ಶುಭಕೋರಿದ್ದಾರೆ. ಯಾರು ಏನೆಂದು ಶುಭಕೋರಿದ್ದಾರೆ ಎನ್ನುವ ವಿವರ ನೋಡೋಣ.

ರವಿ ಆಲದಮರ ಎನ್ನುವವರು, ನಾವು ಕನ್ನಡಿಗರು, ಕನ್ನಡ ಮಣ್ಣಿನ ಕೆಚ್ಚೆದೆಯ ಮಕ್ಕಳು ಎಂದಿದ್ದು, ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯ ಹಂಚಿಕೊಂಡಿದ್ದಾರೆ. ಕಾರ್ತಿಕ್ ವೆಂಕಟೇಶ್ ಎನ್ನುವವರು, ಯಾರೋ ನಾಲ್ಕು ಜನ ರಾಜರನ್ನ ಸೋಲಿಸಿದ್ದಲ್ಲ ಇಮ್ಮಡಿ ಪುಲಕೇಶಿ ಸೋಲಿಸಿದ ಅಷ್ಟು ಜನ ಸಾಮ್ರಾಟರೆ ಅದಕ್ಕೆ ಸಾಮ್ರಾಟರಿಗೆ ಮಹಾನ್ ಸಾಮ್ರಾಟ ಅನ್ನೋದು, ನೌಕ ದಿನದ ನಲ್ಮೆಯ ಹಾರೈಕೆಗಳು 💛❤️💪

Kannadigas campaign Dakshina Patheshwar s second Pulakeshi Jayanti trend on social media

ನೌಕಪಡೆಯ ಪಿತಾಮಹ, ಎರೆಯ, ಅಖಂಡ ಭಾರತದ ಪರಮೇಶ್ವರ, ಕನ್ನಡ ಕುಲತಿಲಕ,ಪರಮ ಭಾಗವತ, ಕನ್ನಡನಾಡು ಕಂಡ ಶ್ರೇಷ್ಠ ದೊರೆ ಜಯ ಜಯ ಚಾಲುಕ್ಯ ಚಕ್ರವರ್ತಿ ಶ್ರೀ #ಇಮ್ಮಡಿಪುಲಕೇಶಿ #ImmadiPulakeshi #FatherofIndianNavy #ನೌಕಪಡೆಯಪಿತಾಮಹ ಎಂದು ಪೋಸ್ಟ್‌ ಶೇರ್ ಮಾಡಿದ್ದಾರೆ.

ರಾಜಕಾರಣಿಗಳಿಂದಲೂ ಶುಭಾಶಯ ಪೋಸ್ಟ್‌

ಕಳೆದ ಕೆಲವು ವರ್ಷಗಳಿಂದ ಕನ್ನಡ ರಾಜರು ಹಾಗೂ ಕರ್ನಾಟಕದ ಹಿರಿಮೆಯನ್ನು ಹಂಚಿಕೊಳ್ಳುವ ಕೆಲಸವಾಗಬೇಕು ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ನಡೆಸಿದ್ದರು. ಅದರ ಪರಿಣಾಮ ಎನ್ನುವಂತೆ ಹಲರು ಸೋಷಿಯಲ್ ಮೀಡಿಯಾದಲ್ಲಿ ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯಕ್ಕೆ ಶುಭಕೋರಿದ್ದಾರೆ.

ನಾಡಿನ ಸಮಸ್ತ ಜನತೆಗೆ ಕನ್ನಡದ ಕುಲ ತಿಲಕ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು. ನೌಕಾಪಡೆಯ ಪಿತಾಮಹ, ಅಖಂಡ ಭಾರತದ ದೊರೆ, ಚಾಲುಕ್ಯ ಸಾಮ್ರಾಟ, ದಕ್ಷಿಣಾಪಥೇಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಈ ದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು ಎಂದು ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ ಎಚ್.ಡಿ ದೇವೇಗೌಡ ಅವರು ಶುಭಾ ಕೋರಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು, ಕನ್ನಡನಾಡನ್ನು ಆಳಿದ ಹೆಮ್ಮೆಯ ದೊರೆ, ಅಖಂಡ ಭಾರತವನ್ನು ಆಳಿದ ಪ್ರಪ್ರಥಮ ಕನ್ನಡಿಗ, ಮೊತ್ತ ಮೊದಲಿಗೆ ನೌಕಾಪಡೆ ಕಟ್ಟಿದ ಸಮರಕಲಿ ಆಗಿರುವ ಚಾಲುಕ್ಯ ಸಾಮ್ರಾಟ, ದಕ್ಷಿಣಾಪಥೇಶ್ವರ ಬಿರುದಾಂಕಿತ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಈ ದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು. ಕನ್ನಡಿಗರೆಲ್ಲರಿಗೂ ಇಮ್ಮಡಿ ಪುಲಕೇಶಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಅಖಂಡ ಭಾರತದ ಚಾಲುಕ್ಯ ಚಕ್ರವರ್ತಿ, ನೌಕಾಪಡೆಯ ಪಿತಾಮಹ ಹಾಗೂ ದಕ್ಷಿಣ ಪಥೇಶ್ವರ ಎಂಬ ಬಿರುದಾಂಕಿತ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು. ಕನ್ನಡ ಕುಲ ಕೋಟಿ ತಿಲಕ ಹಾಗೂ ಸ್ವಾಭಿಮಾನದ ಪ್ರತೀಕವಾದ ಇಮ್ಮಡಿ ಪುಲಿಕೇಶಿ ಮಹಾರಾಜರು ಸ್ಥಾಪಿಸಿದ ಸಾರ್ವಭೌಮತ್ವ ಮತ್ತು ಅವರ ಆಡಳಿತ ವೈಖರಿ ಇಂದಿಗೂ ಸ್ಫೂರ್ತಿದಾಯಕ ಎಂದು ಶುಭಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+