8th Pay Commission: ಕೋಟಿಗೂ ಅಧಿಕ ನೌಕರರಿಗೆ ಸಿಹಿಸುದ್ದಿ; ಫಿಟ್‌ಮೆಂಟ್‌ 2.64, ಮೂಲ ವೇತನ ಭಾರೀ ಜಿಗಿತ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು 8ನೇ ವೇತನದ ಆಯೋಗದಡಿ (8th Pay Commission) ಏನೆಲ್ಲ ಆರ್ಥಿಕ ಸೌಲಭ್ಯಗಳು ಸಿಗಲಿವೆ, ವೇತನ ಎಷ್ಟು ಹೆಚ್ಚಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಫಿಟ್‌ಮೆಂಟ್ ಅಂಶದ ಆಧಾರದಲ್ಲಿ ಮೂಲ ವೇತನ ಏರಿಕೆ ಕುರಿತು ಲೆಕ್ಕಾಚಾರ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ 2.64 ರಷ್ಟು ಫಿಟ್‌ ಮೆಂಟ್ ಅಂಶವನ್ನು ಪರಿಗಣಿಸುವ ಸಾಧ್ಯತೆ ಇದೆ. ಈ ಬಾರಿ ಒಂದು ಕೋಟಿಗೂ ಅಧಿಕ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಗುವ ವಿಶ್ವಾಸ ವ್ಯಕ್ತವಾಗಿದೆ.

8ನೇ ವೇತನ ಆಯೋಗದಡಿ ಕೈಗೊಳ್ಳುವ ಕ್ರಮಗಳು ದೇಶದ ಸುಮಾರು 55 ಲಕ್ಷಕ್ಕೂ ಅಧಿಕ ಹಾಲಿ ಸರ್ಕಾರಿ ಉದ್ಯೋಗಿಗಳು ಹಾಗೂ 69 ಲಕ್ಷಕ್ಕಿಂತ ಹೆಚ್ಚಿನ ನಿವೃತ್ತ ಪಿಂಚಣಿದಾರರ ಮೂಲ ವೇತನ, ಭತ್ಯೆ, ಪಿಂಚಣಿ ಪ್ರಮಾಣದಲ್ಲಿ ಬೃಹತ್ ಬದಲಾವಣೆ ತರಲಿವೆ. ನೌಕರರು ಹಾಗೂ ಪಿಂಚಣಿದಾರರ ಪ್ರತಿನಿಧಿಗಳು ಈ ಹಿಂದೆ ಸಭೆ ನಡೆಸಿ ತಮ್ಮ ಬೇಡಿಕೆಗಳ ಕುರಿತು ವರದಿ ತಯಾರಿಸಿದ್ದಾರೆ. ಆ ವರದಿಯನ್ನು ಇಂದು ಸೋಮವಾರ (ಜೂನ್ 15) ಸಲ್ಲಿಸಲಿದ್ದಾರೆ. ವೇತನ, ಭತ್ಯೆ ಹೆಚ್ಚಳ ಕುರಿತಂತೆ ಶಿಫಾರಸು ಮಾಡಲಿದ್ದಾರೆ.

8th Pay Commission

ನೌಕರರು, ಪಿಂಚಣಿದಾರರಿಗೆ ಆರ್ಥಿಕ ಏರಿಕೆ ವರದಾನ

ದೀರ್ಘಕಾಲದ ಕಾಯುವಿಕೆ ಬಳಿಕ ಉತ್ತಮ ಆರ್ಥಿಕ ಪ್ರಯೋಜನ ದೊರೆಯುವ ಸಾಧ್ಯತೆಗಳು ಕಾಣಿಸುತ್ತಿವೆ. ಕೇಂದ್ರ ಸರ್ಕಾರವು ಕೊನೆಗೂ ಎಂಟನೇ ವೇತನ ಆಯೋಗದ ಅತ್ಯಂತ ಮಹತ್ವದ ನಿಯಮಗಳು ಮತ್ತು ಷರತ್ತುಗಳಿಗೆ (ಟರ್ಮ್ಸ್ ಆಫ್ ರೆಫರೆನ್ಸ್) ತನ್ನ ಅಧಿಕೃತ ಅನುಮೋದನೆಯನ್ನು ನೀಡಿದೆ. ಕೇಂದ್ರವು ಸಮಗ್ರ ವಿಶ್ಲೇಷಣೆ ಮತ್ತು ನೌಕರರ ವೇತನ ಸಂಬಂಧ ಶಿಫಾರಸುಗಳನ್ನು ಸಿದ್ಧಪಡಿಸಿ ಸಲ್ಲಿಸಲು ಒಟ್ಟು 18 ತಿಂಗಳ ಅವಧಿ ಪಡೆದಿತ್ತು. ಇಂದಿನ ಹಣದುಬ್ಬರದ ಪರಿಸ್ಥಿತಿಯಲ್ಲಿ ನೌಕರರಿಗೆ ವೇತನ ಆಯೋಗದ ನಿಯಮಗಳು, ವೇತನ, ಭತ್ಯೆ ಏರಿಕೆಗಳು ಆರ್ಥಿಕ ಜೀವದಾನ ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

Special Train: ಮೈಸೂರು-ಮದಾರ್ ಮಾರ್ಗದಲ್ಲಿ ವಿಶೇಷ ರೈಲು ಸೇವೆ, ರಾಜ್ಯದ ಪ್ರಯಾಣಿಕರಿಗೆ ಅನುಕೂಲ, ವೇಳಾಪಟ್ಟಿ
Special Train: ಮೈಸೂರು-ಮದಾರ್ ಮಾರ್ಗದಲ್ಲಿ ವಿಶೇಷ ರೈಲು ಸೇವೆ, ರಾಜ್ಯದ ಪ್ರಯಾಣಿಕರಿಗೆ ಅನುಕೂಲ, ವೇಳಾಪಟ್ಟಿ

ಫಿಟ್‌ಮೆಂಟ್ 2.64 ಪರಿಗಣನೆ? ಹೆಚ್ಚಳ ಎಷ್ಟಾಗುತ್ತೆ?

ಎಂಟನೇ ವೇತನ ಆಯೋಗಡಿ ಹೊಸ ವೇತನ ಮತ್ತು ಪಿಂಚಣಿ ಹೆಚ್ಚಳ ಘೋಷಣೆ ವೇಳೆ ಕಠಿಣವಾದ ಆರ್ಥಿಕ ಲೆಕ್ಕಾಚಾರ ಹಾಕುತ್ತದೆ. ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಫಿಟ್‌ಮೆಂಟ್ ಅಂಶವು ಮಹತ್ವ ಪಡೆಯುತ್ತದೆ. ಈ ಹಿಂದೆ ಏಳನೇ ವೇತನ ಆಯೋಗದಲ್ಲಿ ಸುಮಾರು 2.57 ರಷ್ಟು ಫಿಟ್‌ಮೆಂಟ್ ಫ್ಯಾಕ್ಟರ್ ಪರಿಗಣಿಸಲಾಗಿತ್ತು. ಆಗ ಒಬ್ಬ ನೌಕರನ ಮೂಲ ವೇತನವು 15,000 ರೂಪಾಯಿ ಆಗಿದ್ದರೆ ಫಿಟ್‌ಮೆಂಟ್ ಹೆಚ್ಚಳದಿಂದ ಆತನ ವೇತನ ನೇರವಾಗಿ 38,550 ರೂಪಾಯಿಗೆ ಹೆಚ್ಚಾಗಿತ್ತು.

ಶಿಫಾರಸಿನಲ್ಲಿ ಆ ಫಿಟ್‌ಮೆಂಟ್‌ ಅಂಶವನ್ನು ಕನಿಷ್ಠ 3 ರಿಂದ 5 ಕ್ಕೆ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಿಸಬೇಕು ಎಂದು ಬೇಡಿಕೆ ಇಡಲಾಗಿದೆ. ನೌಕರರ ಮೂಲ ವೇತನ 45 ಸಾವಿರಕ್ಕೆ ಹೆಚ್ಚಿಸುವ ಬೇಡಿಕೆ ಸಹ ಇದೆ. ಆದರೆ ಹಣಕಾಸು ತಜ್ಞರ ಪ್ರಕಾರ, ಇಷ್ಟೊಂದು ಭಾರಿ ಬೇಡಿಕೆಯನ್ನು ಈಡೇರಿಸುವುದು ದೇಶದ ಪ್ರಸ್ತುತ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡಬಹುದೆಂದು ಹೇಳಿದ್ದಾರೆ. ಹೀಗಾಗಿ ಈ ಸಾರಿ ಫಿಟ್‌ಮೆಂಟ್ ಅಂಶವನ್ನು 2.64 ಕ್ಕೆ ಹೆಚ್ಚಿಸಬಹುದು ಎನ್ನಲಾಗಿದೆ. ಇದರಿಂದಲೂ ನೌಕರರ ಕನಿಷ್ಠ ವೇಗನ, ಭತ್ಯೆಗಳಲ್ಲಿ ಭಾರೀ ಬದಲಾವಣೆ ನಿರೀಕ್ಷೆ ಇದೆ.

ಭತ್ಯೆಗಳ ತೃಪ್ತಿದಾಯಕ ಏರಿಕೆ ಸಂಭವ

ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಹೇಗೆ ಅನುಮೋದಿಸುತ್ತದೆ ಎಂಬುದರ ಮೇಲೆ ನೌಕರರು ಮತ್ತು ಆರ್ಥಿಕ ಪಿಂಚಣಿದಾರರ ಭವಿಷ್ಯ ನಿಂತಿದೆ. ಸದ್ಯ ಶೇಕಡಾ 60 ರಷ್ಟು ತುಟ್ಟಿಭತ್ಯೆ (DA) ಒಳಗೊಂಡಂತೆ ನೌಕರರ ಒಟ್ಟು ವೇತನವು 160 ರೂಪಾಯಿ ಆಗಿದ್ದರೆ, ಮುಂದಿನ ದಿನಗಳಲ್ಲಿ ಹೊಸ ಮೂಲ ವೇತನವು ದುಪ್ಪಟ್ಟಾಗಿ 200 ರೂಪಾಯಿ ತಲುಪಬಹುದು. ಇದರಿಂದಾಗಿ ನೌಕರರ ಒಟ್ಟಾರೆ ಸಂಬಳದ ಆದಾಯದಲ್ಲಿ ಕನಿಷ್ಠ ಶೇ. 25 ರಷ್ಟು ತೃಪ್ತಿದಾಯಕ ಏರಿಕೆ ಆಗುವ ಸಾಧ್ಯತೆಗಳಿವೆ.

LPG ಗ್ರಾಹಕರಿಗೆ ಜೂನ್ 30ರೊಳಗೆ ಇ-ಕೆವೈಸಿ ಕಡ್ಡಾಯ: ಮೊಬೈಲ್‌ನಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಲು ಇಲ್ಲಿದೆ ಮಾಹಿತಿ
LPG ಗ್ರಾಹಕರಿಗೆ ಜೂನ್ 30ರೊಳಗೆ ಇ-ಕೆವೈಸಿ ಕಡ್ಡಾಯ: ಮೊಬೈಲ್‌ನಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಲು ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರವು ಒಂದು ವೇಳೆ ಹಾಲಿ ಫಿಟ್‌ಮೆಂಟ್ ಅಂಶವನ್ನು 2.57 ರಿಂದ ಕೇವಲ 3.0 ಕ್ಕೆ ಹೆಚ್ಚಿಸಿದಲ್ಲಿ ನೌಕರನ ಮೂಲ ವೇತನ ಶೇ.15-20 ರಷ್ಟು ಹೆಚ್ಚಾಗಲಿದೆ. ಈ ಸುಧಾರಿತ ವ್ಯವಸ್ಥೆಯಿಂದಾಗಿ ಯಾವುದೇ ನೌಕರನ ಸದ್ಯದ ಕನಿಷ್ಠ ಮೂಲ ವೇತನವು ನೇರವಾಗಿ 15,000 ದಿಂದ 45,000 ರೂಗೆ ಏರಿಕೆಯಾಗಲಿದೆ. ಇದರಿಂದ ನೌಕರರನ ಭವಿಷ್ಯ ಹೆಚ್ಚು ಭದ್ರತೆಯಿಂದ ಕೂಡಿರಲಿದೆ.

ಈ ಹಿಂದೆ ಏಳನೇ ವೇತನ ಆಯೋಗಡಿ ಕೆಳ ಹಂತದ ಕಿರಿಯ ನೌಕರರ ಕನಿಷ್ಠ ಸಂಬಳದ ಮಿತಿ ಪ್ರತಿ ತಿಂಗಳಿಗೆ 18,000 ರೂಪಾಯಿಗೆ ವಿಸ್ತರಿಸಲಾಗಿತ್ತು. ಹೊಸದಾಗಿ ನೇಮಕಗೊಳ್ಳುವ ಪ್ರಥಮ ದರ್ಜೆ ಅಧಿಕಾರಿಗಳ ಕನಿಷ್ಠ ವೇತನ ಆಗ 56,100 ರೂ. ಇತ್ತು. ಇದರಿಂದ ಹೊಸ ನೌಕರರ ಒಟ್ಟು ಸಂಬಳ ಮತ್ತು ಪಿಂಚಣಿ ವೆಚ್ಚದಲ್ಲಿ ಸರಾಸರಿ ಶೇ. 14.29 ರಷ್ಟು ನಿವ್ವಳ ಲಾಭ ಕಂಡು ಬಂದಿತ್ತು.

ಎಂಟನೇ ವೇತನ ಆಯೋಗದ ಉನ್ನತಾಧಿಕಾರದ ಸಮಿತಿ ಮುಖ್ಯಸ್ಥರು ರಾಜ್ಯಗಳಿಗೆ ಪ್ರವಾಸ ಮಾಡಿದ್ದರು. ದೆಹಲಿಯಲ್ಲಿ ನಿರಂತರ ಸಭೆಯಗಳನ್ನು ಆಯೋಜಿಸಿ ನೌಕರರು ಮತ್ತು ಪಿಂಚಣಿದಾರರ ಆರ್ಥಿಕ ಸಮಸ್ಯೆ, ಪ್ರಮುಖ ಬೇಡಿಕೆಗಳು, ವ್ಯತ್ಯಾಗಳು, ನಿವೃತ್ತಿ ನಂತರ ಸಿಗುವ ಆರ್ಥಿಕ ಸೌಲಭ್ಯಗಳ ವರದಿ ತಯಾರಿಸಿದ್ದಾರೆ. ಈ ಪ್ರಕ್ರಿಯೆ ಕೇಂದ್ರದ ಸೂಚನೆ ಮೇರೆಗೆ ಅಕ್ಟೋಬರ್ 2025 ರಲ್ಲಿ ಆರಂಭಗೊಂಡಿತ್ತು. ಇದೀಗ 18 ತಿಂಗಳ ವರದಿ ತಯಾರಿಸಿದ್ದು, ಕೇಂದ್ರಕ್ಕೆ ಸಲ್ಲಿಸಲಾಗುತ್ತಿದೆ.

ಇನ್ನೂ ಹೊಸ 8ನೇ ವೇತನ ಆಯೋಗ 2026 ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ತರಲು ಯೋಜಿಸಲಾಗಿದೆ. ಸದ್ಯ ನೌಕರರು, ಪಿಂಚಣಿದಾರರ ಹಕ್ಕೋತ್ತಾಯಗಳ ಸಲ್ಲಿಕೆಗೆ ಕೆಲವು ಗಡುವು ವಿಸ್ತರಣೆ ಆಗಿದ್ದವು. ಇದೀಗ ಅಂತಿಮವಾಗಿ ಜೂನ್ 15ರಂದು ಸಲ್ಲಿಸಲಾಗುತ್ತಿದೆ. ಅಂತಿಮ ಶಿಫಾರಸು ಮುಂದಿನ ವರ್ಷ 2027ರ ಜೂನ್ ಅಥವಾ ಜುಲೈಗೆ ಸಲ್ಲಿಕೆ ಆಗುವ ನಿರೀಕ್ಷೆಗಳು ಇವೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+