Kannada TV Channels TRP : ಬಾರ್ಕ್ ರೇಟಿಂಗ್: ಕರ್ನಾಟಕದ ಟಾಪ್ -1 ಟಿವಿ ಚಾನೆಲ್ ಯಾವುದು?
ಬೆಂಗಳೂರು, ಅಕ್ಟೋಬರ್ 21: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 41ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಭವಿಷ್ಯ ತಿಳಿಯಲಿದೆ. ಟಿಆರ್‌ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿ ವಾಹಿನಿಗಳ ರೇಟಿಂಗ್ ಬಂದಿದ್ದು, ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡು ಬಂದಿದೆ.
ಕರ್ನಾಟಕದಲ್ಲಿ ಸದ್ಯ ನಂಬರ್ ಒನ್ ಸಂಸ್ಥೆಯಾಗಿ ಟಿವಿ 9 ಕನ್ನಡ ಮುಂದುವರೆದಿದ್ದು ರೇಟಿಂಗ್‌ನಲ್ಲಿ 73ರ ಗಡಿ ದಾಟಿದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಗುರುತಿಸಿಕೊಂಡಿದ್ದರೆ, ಮೂರನೇ ಸ್ಥಾನದಲ್ಲಿ ಏಷಿಯನ್ ನೆಟವರ್ಕ್ ಸಂಸ್ಥೆಯ ಸುವರ್ಣ ನ್ಯೂಸ್ ಕಾಣಿಸಿಕೊಂಡಿದೆ. ಕಳೆದ 40ನೇ ವಾರದ ಟಿಆರ್‌ಪಿ ಅನ್ನು ಗಮನದಲ್ಲಿ ಇಟ್ಟುಕೊಂಡು ನೋಡಿದರೆ, ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳ ಟಿಆರ್‌ಪಿ ಇಳಿಮುಖವಾಗಿದೆ. ಪಬ್ಲಿಕ್ ಟಿವಿ ಟಿಆರ್‌ಪಿಯಲ್ಲಿ ಮಾತ್ರ ಕಳೆದ ವಾರಕ್ಕಿಂತ ಶೇ.08ರಷ್ಟು ಏರಿಕೆಯಾಗಿದೆ.
ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿಯಲ್ಲೂ ಅಲ್ಪ ಪ್ರಮಾಣದ ಏರಿಳಿತವಾಗಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್ ಪಾಲಿಗೆ ಬಹಳ ಪ್ರಮುಖವಾಗಿರುತ್ತದೆ.

ಅಕ್ಟೋಬರ್ 8 ರಿಂದ ಜುಲೈ 15ರ ವರದಿ
1.ಟಿವಿ 9 ಕನ್ನಡ - 73.58
2.ಪಬ್ಲಿಕ್ ಟಿವಿ- 57.16
3.ಏಷಿಯನ್ ನೆಟ್ ಸುವರ್ಣ ನ್ಯೂಸ್ - 33.01
4.ನ್ಯೂಸ್ 18 ಕನ್ನಡ- 22.97
5.ನ್ಯೂಸ್ ಫಸ್ಟ್-22.92
6.ದಿಗ್ವಿಜಯ 24x7 ನ್ಯೂಸ್- 14.56
7.ಪವರ್ ಟಿವಿ- 10.97
8.ಟಿವಿ 5 ಕನ್ನಡ- 3.68
9.ರಾಜ್ ನ್ಯೂಸ್ ಕನ್ನಡ- 2.62
10.ಕಸ್ತೂರಿ ನ್ಯೂಸ್- 2.83

ಅಕ್ಟೋಬರ್ 01 ರಿಂದ ಜುಲೈ 08ರ ವರದಿ
1.ಟಿವಿ9 ಕನ್ನಡ - 82.06
2.ಪಬ್ಲಿಕ್ ಟಿವಿ - 52.97
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 35.83
4.ನ್ಯೂಸ್ 18 ಕನ್ನಡ- 25.09
5.ನ್ಯೂಸ್ ಫಸ್ಟ್- 23.24
6.ದಿಗ್ವಿಜಯ 24x7 ನ್ಯೂಸ್- 15.86
7.ಪವರ್ ಟಿವಿ- 12.00
8.ಟಿವಿ 5 ಕನ್ನಡ- 3.55
9.ರಾಜ್ ನ್ಯೂಸ್ ಕನ್ನಡ - 3.04
10.ಕಸ್ತೂರಿ ನ್ಯೂಸ್- 2.93

ಕನ್ನಡ ಟಿವಿ ಚಾನೆಲ್ ಬೆಂಗಳೂರಿನವ ಟಿಆರ್ ಪಿ ಹೇಗಿದೆ?
ಕರ್ನಾಟಕದ ಒಟ್ಟಾರೆ ಟಿಆರ್‌ಪಿ ಅನ್ನು ಬಿಡುಗಡೆ ಮಾಡುವುದರ ಜೊತೆಗೆ ಬೆಂಗಳೂರಿನಲ್ಲಿ ಅತಿಹೆಚ್ಚು ಜನಪ್ರಿಯವಾದ ಚಾನೆಲ್ ಅನ್ನು ಗುರುತಿಸುವ ನಿಟ್ಟಿನಲ್ಲಿ ಪ್ರತ್ಯೇಕ ಟಿಆರ್‌ಪಿ ಅನ್ನು ಬಿಡುಗಡೆ ಮಾಡಲಾಗುತ್ತದೆ. ಅದರಂತೆ ರಾಜ್ಯದಲ್ಲಿ ಅಷ್ಟೇ ಅಲ್ಲದೇ ರಾಜ್ಯ ರಾಜಧಾನಿಯಲ್ಲೂ ಟಿವಿ 9 ನಂಬರ್ 1 ಚಾನೆಲ್ ಎನಿಸಿಕೊಂಡಿದೆ. ಬೆಂಗಳೂರಿಗೆ ಸಂಬಂಧಿಸಿದಂತೆ ಟಿವಿ ಚಾನೆಲ್ ಟಿಆರ್‌ಪಿ ಹೇಗಿದೆ ಎಂಬುದನ್ನು ಮುಂದಿನ ಪಟ್ಟಿಯಲ್ಲಿ ತಿಳಿದುಕೊಳ್ಳಿ.
ಬೆಂಗಳೂರಿನ ಟಿಆರ್‌ಪಿ ಅಂಕಿ-ಅಂಶ:
1.ಟಿವಿ9 ಕನ್ನಡ - 114.12
2.ಪಬ್ಲಿಕ್ ಟಿವಿ - 100.26
3.ಏಷಿಯನ್ ನೆಟ್ ಸುವರ್ಣ ನ್ಯೂಸ್ - 33.48
4.ನ್ಯೂಸ್ 18 ಕನ್ನಡ- 21.50
5.ನ್ಯೂಸ್ ಫಸ್ಟ್ - 21.62
6.ದಿಗ್ವಿಜಯ 24x7 ನ್ಯೂಸ್- 15.04
7.ಪವರ್ ಟಿವಿ- 12.12
8.ಟಿವಿ 5 ಕನ್ನಡ- 3.59
9.ರಾಜ್ ನ್ಯೂಸ್ ಕನ್ನಡ - 2.67
10.ಕಸ್ತೂರಿ ನ್ಯೂಸ್- 3.78

ಪ್ರತಿವಾರ ಟಿಆರ್‌ಪಿ ಬಿಡುಗಡೆ ಮಾಡುವ ಬಾರ್ಕ್ ಸಂಸ್ಥೆ
BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ಟಿಆರ್‌ಪಿ ರೇಟಿಂಗ್ ಅನ್ನು ಬಿಡುಗಡೆ ಮಾಡುತ್ತದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ತಮ್ಮ ಅಸ್ತಿತ್ವವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಸಲಿದೆ. ಸುದ್ದಿಗಳ ಆಧಾರದ ಮೇಲೆ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ. ಇನ್ನು ಬಿ ನ್ಯೂಸ್(ಬಿಟಿವಿ) ಮತ್ತು ಪ್ರಜಾ ಟಿವಿ ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿರುವುದಿಲ್ಲ.












Click it and Unblock the Notifications