ಕೊಪ್ಪಳ ಚಿತ್ರೋತ್ಸವದಲ್ಲಿ ಫೆ. 07 ರಂದು 'ರಂಗಿತರಂಗ' ಪ್ರದರ್ಶನ
ಕೊಪ್ಪಳ ಫೆ. 06: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೊಪ್ಪಳದ ಶಾರದ ಚಿತ್ರಮಂದಿರದಲ್ಲಿ ಹಮ್ಮಿಕೊಂಡಿರುವ ಚಿತ್ರೋತ್ಸವ ಸಪ್ತಾಹದಲ್ಲಿ ಫೆ. 07 ರಂದು ಬೆಳಿಗ್ಗೆ 11 ಗಂಟೆಗೆ ರಂಗಿತರಂಗ ಚಲನಚಿತ್ರ ಪ್ರದರ್ಶನವಾಗಲಿದೆ.
ರಂಗಿತರಂಗ ಚಲನಚಿತ್ರವು, ಕನ್ನಡ ಚಿತ್ರರಂಗದಲ್ಲಿ ಇಂದಿನ ಅದ್ದೂರಿ ಚಿತ್ರಗಳ ಪೈಪೋಟಿ ನಡುವೆಯೂ ವರ್ಷ ಪೂರೈಸಿದ ಚಿತ್ರ, ರೋಚಕತೆ, ಕುತೂಹಲ ಕಂಡುಕೊಂಡ ಪತ್ತೇದಾರಿ ಕಥೆಯ ಜನಮನ್ನಣೆ ಗಳಿಸಿರುವ ಸಿನಿಮಾ ಇದಾಗಿದೆ.

ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶವಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ತಿಳಿಸಿದ್ದಾರೆ.












Click it and Unblock the Notifications