ಸುದ್ದಿಮನೆ ಸುದ್ದಿ: ಬಿಟಿವಿಯಿಂದ ಚಂದನ್ ಶರ್ಮ ಟಿವಿ9ಗೆ ಎಂಟ್ರಿ

Posted By:
Subscribe to Oneindia Kannada

ಬೆಂಗಳೂರಿನ ಅಕಾಲಿಕ ಮಳೆಯಂತೆ ಕನ್ನಡ ಟಿವಿ ಮಾಧ್ಯಮದಲ್ಲಿ ಅಕಾಲಿಕ ವಲಸೆ, ನೇಮಕಾತಿ, ಸಂಬಳ ವಿತರಣೆ ಆರಂಭವಾಗಿದೆ ಎಂಬ ಸುದ್ದಿ ನಮ್ಮ ಬಾತ್ಮೀದಾರರ ಕಿವಿಗೆ ಬಿದ್ದಿದೆ. ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ಒಂದು ವಾರೆ ನೋಟ ಇಲ್ಲಿದೆ.

ಸುದ್ದಿ ಮುಖ್ಯಾಂಶಗಳು ಹೀಗಿವೆ:
* ಕನ್ನಡಕ್ಕೆ ಇನ್ನೂ ಐದು ಚಾನೆಲ್ ಗಳು ಬರಲಿವೆ.
* ಬಿಟಿವಿ ತೊರೆದ ನಿರೂಪಕ ಚಂದನ್ ಶರ್ಮ.
* ಸುವರ್ಣ 24/7 ಸುದ್ದಿವಾಹಿನಿ ಬಿಟ್ಟ ಹರಿಪ್ರಸಾದ್.
* ಸಿನಿಮಾ ಮೈ ಡಾರ್ಲಿಂಗ್ ಎನ್ನುತ್ತಿದ್ದ ಅಕ್ಕಿ ಅವ್ರು ಈಗ ಕಸ್ತೂರಿ ಪಾಲು.

* ಕೀರ್ತಿ ಶಂಕರಘಟ್ಟ ಹಾಗೂ ರಾಧಾ ಹಿರೇಗೌಡರ್ ಅವರು ಜನಶ್ರೀ ಸೇರ್ಪಡೆ.

ಚಂದನ್ ಶರ್ಮ ಅವರು ಬಿಟಿವಿಯಿಂದ ಬಿಗ್ ಬಾಸ್ ಗೆ ಅಲ್ಲ, ಟಿವಿ9 ಕಚೇರಿ ಪ್ರವೇಶಿಸುತ್ತಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಅವರೇ ಬರೆದುಕೊಂಡಿದ್ದಾರೆ.

ಸಿನಿಮಾ ಮೈ ಡಾರ್ಲಿಂಗ್, ಕೆಂಗುಲಾಬಿ ನಂತರ ಸುದ್ದಿ ವಾಹಿನಿಯಲ್ಲಿದ್ದ ಗೌರೀಶ್ ಅಕ್ಕಿ ಅವರು ಮೊನ್ನೆ ಮೊದಲ ವಾರ್ಷಿಕೋತ್ಸವ ಸಂಭ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣ, ಅಕ್ಕಿ ಅವರು ಕಸ್ತೂರಿ ಸುದ್ದಿ ವಾಹಿನಿಗೆ ಸೇರಿದ್ದಾರೆ.

ಇನ್ನಷ್ಟು ಸುದ್ದಿಗಳು ಮುಂದಿವೆ...

ಟಿವಿ5 ಸುದ್ದಿ ವಾಹಿನಿ

ಟಿವಿ5 ಸುದ್ದಿ ವಾಹಿನಿ

ಆಂಧ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಸದ್ದು ಮಾಡಿರುವ ನಾಯ್ಡುಗಳ ಒಡೆತನ ಟಿವಿ5 ಸುದ್ದಿ ವಾಹಿನಿ ಈಗ ಕನ್ನಡಕ್ಕೂ ಕಾಲಿಟ್ಟಿದೆ. ಗುರುಪ್ರಸಾದ್, ರಾಘವಸೂರ್ಯ, ಅರ್ಚನಾ, ದಿವ್ಯ ರಘುನಾಥ್, ನಮಿತಾ ಮುಂತಾದವರು ಆಂಕರಿಂಗ್ ಮಾಡುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದ್ದು, ಸಂಜೆ ಪ್ರೈಮ್ ಟೈಮ್ ನಲ್ಲಿ 26 ಮಂದಿ ಲೈವ್ ವೀಕ್ಷಣೆಯನ್ನ ಆರಂಭದಲ್ಲೆ ಪಡೆದುಕೊಂಡಿದೆ.

ಚಾನೆಲ್ ಗಳ ಲೈವ್ ಸ್ಟ್ರೀಮಿಂಗ್

ಚಾನೆಲ್ ಗಳ ಲೈವ್ ಸ್ಟ್ರೀಮಿಂಗ್

ಇತ್ತೀಚೆಗೆ ಈಟಿವಿ ಕನ್ನಡ ಬದಲಾಗಿ 'ನ್ಯೂಸ್ 18 ಕನ್ನಡ' ಆಗ ಬದಲಾಗಿದೆ. ಸಂಜೆ ಪ್ರೈಮ್ ಟೈಮ್ ನಲ್ಲಿ 4-6 ಮಂದಿ ಲೈವ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಮೊಬೈಲ್ ಆಪ್, ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಗೆ ಇನ್ನೂ ಒಗ್ಗಿಕೊಳ್ಳಬೇಕಿದೆ.

ಸಮಯ ಟಿವಿ ಹೊಸ ಅಸ್ತಿತ್ವದ ಹುಡುಕಾಟದಲ್ಲಿದ್ದು, ಇತ್ತೀಚೆಗೆ ಮೊಬೈಲ್ ಅಪ್ಲಿಕೇಷನ್ ನಲ್ಲಿ ಲೈವ್ ಸ್ಟ್ರೀಮಿಂಗ್ ಶುರು ಮಾಡಿದೆ.

ಹೊಸ ಚಾನೆಲ್ ಗಳು

ಹೊಸ ಚಾನೆಲ್ ಗಳು

ಟಿವಿ5 ಬೆನ್ನಲ್ಲೇ ಟಿವಿ 1, ಪವರ್ ಕನ್ನಡ, ಫೋಕಸ್, ಎಬಿಪಿ, ಜೀ ಕನ್ನಡ ನ್ಯೂಸ್, ಗರುಡಾ ಮಾಲ್ ಒಡೆತನದ ಚಾನೆಲ್ ಬರುವ ಮುನ್ಸೂಚನೆ ಸಿಕ್ಕಿದೆ.
ಯೂಟ್ಯಬ್ ಲೈವ್ ಸ್ಟ್ರೀಮಿಂಗ್, ಟಿಆರ್ ಪಿಯಲ್ಲಿ ಎಂದಿನಂತೆ ಟಿವಿ9 ಕನ್ನಡ ಮುನ್ನಡೆ ಸಾಧಿಸಿದೆ. ಟಿಆರ್ ಪಿ ನೂರರ ಮೇಲಿದ್ದರೆ, ಯೂಟ್ಯೂಬ್ ಲೈವ್ ನಲ್ಲಿ ಯಾವುದೇ ಸಮಯವಾದರೂ ಕನಿಷ್ಠ ಐನೂರರ ಮೇಲೆ ವೀಕ್ಷಕರು ಇದ್ದೇ ಇರುತ್ತಾರೆ.

ಜನಶ್ರೀ ಸಿಬ್ಬಂದಿಗೆ ಸಂಬಳ

ಜನಶ್ರೀ ಸಿಬ್ಬಂದಿಗೆ ಸಂಬಳ

* ಟಿವಿ9ಯ ಪ್ರಮುಖರಾದ ಮಾರುತಿ. ರವಿಕುಮಾರ್ ಅವರು ಹೊಸ ಚಾನೆಲ್ ನತ್ತ ಮುಖ ಮಾಡಿದ್ದಾರಂತೆ.
* ಸಂಬಳ ಸಿಗದೆ ಪರಿತಪಿಸುತ್ತಿರುವ ಜನಶ್ರೀ ಸಿಬ್ಬಂದಿಗೆ ಸಂಬಳ ಸಿಗುವ ಸಾಧ್ಯತೆ ಇದೆ. ನವೆಂಬರ್ ನಿಂದ ಜನಶ್ರೀ ನೇಮಕಾತಿ ಆರಂಭವಾಗಲಿದ್ದು, ಹೊಸ ವಿನ್ಯಾಸ, ಹೊಸ ಮ್ಯಾನೇಜ್ಮೆಂಟ್ ನೊಂದಿಗೆ ಮತ್ತೆ ಚಾನೆಲ್ ಮೇಲಕ್ಕೇರಲಿದೆ ಎಂಬ ಸುದ್ದಿಯಿದೆ.
* ಹಿರಿಯ ಆಂಕರ್ ರಾಘವೇಂದ್ರ ಕಂಚನ್ ಅವರು ಸದ್ಯಕ್ಕೆ ಯಾವ ಚಾನೆಲ್ ನಲ್ಲೂ ಕಾಣುತ್ತಿಲ್ಲ. ಅವರ ಮುಂದಿನ ನಿಲ್ದಾಣ ಎಲ್ಲೋ ಇನ್ನೂ ತಿಳಿದು ಬಂದಿಲ್ಲ.

ರಾಧಾ ಹಾಗೂ ಕೀರ್ತಿ

ರಾಧಾ ಹಾಗೂ ಕೀರ್ತಿ

ಅನುಭವಿ ಪತ್ರಕರ್ತರಾದ ರಾಧಾ ಹಿರೇಗೌಡರ್ ಹಾಗೂ ಕೀರ್ತಿ ಶಂಕರಘಟ್ಟ ಅವರು ಜನಶ್ರೀ ಚಾನೆಲ್ ಸೇರಿದ್ದಾರೆ. ಕಿರಿಕ್ ಕೀರ್ತಿ ಅವರು ಮತ್ತೊಮ್ಮೆ ತಮ್ಮೊಳಗಿನ ಬರಹಗಾರನನ್ನು ಎಬ್ಬಿಸಿದ್ದು, ಹೊಸ ವೆಬ್ ಸೈಟ್ ಆರಂಭಿಸಿ ತಮ್ಮ ಲೇಖನಗಳನ್ನು ಹಾಕುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada electronic media is abuzz with many developments. Five more Kannada TV channels are taking birth just before assembly election, some prominent journalists are jumping from this channel to that, salary to Janasri scribes etc etc.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ