ಪರಭಾಷೆಯ ಸಿನಿಮಾಗಳು ಕನ್ನಡ ಸಿನಿಮಾಗಳನ್ನು ನುಂಗದಿರಲಿ ಎಂದ ಕನ್ನಡದ ಖ್ಯಾತ ನಿರ್ದೇಶಕ!

Telugu films in Karnataka: ಪುಷ್ಪ -2 ಸಿನಿಮಾ ಇಂದು ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕನ್ನಡಿದ ಹಲವು ನಿರ್ದೇಶಕರು ಈ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಈ ಸಿನಿಮಾವನ್ನು ಕನ್ನಡಿಗರು ಹಾಗೂ ತೆಲುಗು ಸಿನಿರಸಿಕರು ಮುಗಿಬಿದ್ದು ನೋಡುತ್ತಿದ್ದು, ಕನ್ನಡದ ನಿರ್ದೇಶಕರು ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಕನ್ನಡ ಸಿನಿಮಾಗಳನ್ನು ಪರಭಾಷೆಯ ಸಿನಿಮಾಗಳು ನುಂಗದೆ ಇರಲಿ ಎಂದಿದ್ದಾರೆ. ಪುಷ್ಪ - 2 ಸಿನಿಮಾದ ಅಬ್ಬರದ ನಡುವೆ ಕನ್ನಡದ ಸಿನಿಮಾಗಳು ಎಲ್ಲಿ ಕಳೆದು ಹೋಗಲಿವೆಯೇ ಎಂದು ಕನ್ನಡದ ನಿರ್ದೇಶಕರು ಸೋಷಿಯಲ್‌ ಮೀಡಿಯಾದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಪುಷ್ಪ -2 ಸಿನಿಮಾ ಇದೀಗ ದೇಶದಾದ್ಯಂತ ಹೊಸ ದಾಖಲೆಯನ್ನೇ ಬರೆಯುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಎಲ್ಲಿ ಕನ್ನಡದ ಸಿನಿಮಾಗಳು ಈ ಸಿನಿಮಾದಿಂದ ಸೋಲಾಗುತ್ತದೋ ಎಂದು ಹಲವರು ತಮ್ಮ ಆತಂಕವನ್ನು ಹೊರಹಾಕಿದ್ದಾರೆ. ಇದೀಗ ಕನ್ನಡದ ಬ್ಲಿಂಕ್ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಕನ್ನಡ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

Kannada Directors Voice Concerns as Pushpa-2 Dominates on kannada movies

ಕರ್ನಾಟಕದಲ್ಲಿ ಈ ವಾರ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಆದರೆ, ಪುಷ್ಪ -2 ಸಿನಿಮಾದ ಅಬ್ಬರದ ಮುಂದೆ ಕನ್ನಡದ ಸಿನಿಮಾಗಳಿಗೆ ಅವಕಾಶವಿಲ್ಲದಂತಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಹಲವು ಕನ್ನಡದ ನಿರ್ದೇಶಕರು ಈ ಸಿನಿಮಾದಿಂದ ಕನ್ನಡದ ಸಿನಿಮಾಗಳ ಮೇಲೆ ಆಗಲಿರುವ ಹಾಗೂ ಆಗುತ್ತಿರುವ ಪರಿಣಾಮದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಕನ್ನಡದ ಉದಯೋನ್ಮುಖ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ಸಹ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪರಭಾಷೆಯ ದೊಡ್ಡ ಸಿನಿಮಾ, ಕನ್ನಡದ ಅರವಿಂದ ಸ್ವಾಮಿಯನ್ನು ಹಾಗೂ ಮರ್ಯಾದೆ ಪ್ರಶ್ನೆ ಎನ್ನುವ ಸಿನಿಮಾಗಳನ್ನು ಹಾಗೇ ಸಾಕಷ್ಟು ದೊಡ್ಡ ಕನಸುಗಳನ್ನು ನುಂಗಿ ಹಾಕದಂತೆ ನೋಡಿಕೊಳ್ಳಿ. ಈಗಲೂ ಕಾಲ ಮಿಂಚಿಲ್ಲ. ಒಳ್ಳೆಯ ವಿಮರ್ಶೆ ಸಿಕ್ಕ ಕನ್ನಡ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ, ಸಾವಿರಾರು ರೂಪಾಯಿ ಟಿಕೆಟ್‌ ದರ ಇರುವ ಚಿತ್ರಗಳನ್ನು ಕನ್ನಡ ನಿರ್ಮಾಪಕರ ಜೇಬಿಗೆ ಕತ್ತರಿ ಹಾಕದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Kannada Directors Voice Concerns as Pushpa-2 Dominates on kannada movies

ಅಲ್ಲದೇ ಮುಂದುವರಿದು ನಿಮ್ಮ ಇಷ್ಟದ ಯಾವ ಭಾಷೆಯ ಚಿತ್ರವನ್ನಾದರೂ ನೋಡಿ. ಆದರೆ, ಕನ್ನಡ ಚಿತ್ರಕ್ಕೆ ಮೊದಲ ಆದ್ಯತೆ ನೀಡಿ ಎಂದಿದ್ದಾರೆ.

ಪುಷ್ಪ - 2 ಸಿನಿಮಾದ ಹೆಸರನ್ನು ಉಲ್ಲೇಖ ಮಾಡದೆ ಅವರು ಪೋಸ್ಟ್‌ ಮಾಡಿದ್ದಾರೆ.

ಹಲವು ಕನ್ನಡ ಹೋರಾಟಗಾರರು ಹಾಗೂ ಕನ್ನಡ ಸಿನಿಮಾದ ನಿರ್ದೇಶಕರು ಇದೇ ಮಾದರಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹಲವರು ನಾವು ಕನ್ನಡ ಸಿನಿಮಾವನ್ನು ಮಾತ್ರ ಚಿತ್ರಮಂದಿರಗಳಲ್ಲಿ ನೋಡುತ್ತೇವೆ ಎಂದಿದ್ದರೆ. ಇನ್ನು ಕೆಲವರು ನಾವು ಪರಭಾಷೆಯ ಸಿನಿಮಾಗಳು ಒಟಿಟಿಗೆ ಬರುವವರೆಗೂ ಕಾಯುತ್ತೇವೆ ಎಂದಿದ್ದಾರೆ. ತೆಲುಗು ಸಿನಿಮಾವೊಂದನ್ನು ಇಷ್ಟೊಂದು ಅದ್ಧೂರಿಯಾಗಿ ಕರ್ನಾಟಕದಲ್ಲಿ ಸ್ವಾಗತಿಸಿರುವುದು ಸಹ ಕನ್ನಡದ ನಿರ್ದೇಶಕರಲ್ಲಿ ಸಣ್ಣ ಬೇಸರವನ್ನು ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+