ಕಳಸಾ ಬಂಡೂರಿ ಯೋಜನೆ, ಸರ್ವ ಪಕ್ಷ ಸಭೆ ವಿಫಲ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 02 : ಕಳಸಾ ಬಂಡೂರಿ ನಾಲಾ ಯೋಜನೆ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ದೆಹಲಿಗೆ ಸರ್ವ ಪಕ್ಷ ನಿಯೋಗ ತೆರಳುವ ವಿಷಯದಲ್ಲಿ ಒಮ್ಮತ ಮೂಡದೆ ಶನಿವಾರ ನಡೆದ ಸರ್ವ ಪಕ್ಷ ವಿಫಲಗೊಂಡಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜರುಗಿದ ಸರ್ವ ಪಕ್ಷ ಸಭೆಯಲ್ಲಿ ಬಿಜೆಪಿ ಸಂಸದರು ಮತ್ತು ನಾಯಕರು ಪಾಲ್ಗೊಂಡಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಕೆಲವೇ ಸಂಸದರು ಮತ್ತು ಸಚಿವರು ಮಾತ್ರ ಉಪಸ್ಥಿತರಿದ್ದರು. [ಚಿತ್ರಗಳು : ರಾಜಧಾನಿಯಲ್ಲಿ ಕಳಸಾ-ಬಂಡೂರಿ ಕಿಚ್ಚು]

mahadayi

ನ್ಯಾಯಾಧೀಕರಣದಲ್ಲಿರುವ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಲಿ ಎಂದು ರೈತ ನಾಯಕರು ಆಗ್ರಹಿಸಿದರು. ಇದಕ್ಕೆ ಸಿದ್ದರಾಮಯ್ಯ ಮತ್ತು ಸಚಿವರು ಸಹಮತ ವ್ಯಕ್ತಪಡಿಸಿದರು. [ಏನಿದು ಕಸಳಾ-ಬಂಡೂರಿ ಯೋಜನೆ?]

-
-
-
-

ಬಿಜೆಪಿ ನಾಯಕರು ನಿಯೋಗ ತೆರಳುವ ಮೊದಲು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಪ್ರತಿಪಕ್ಷದವರ ಮನವೊಲಿಸಬೇಕು ಎಂದು ಪಟ್ಟು ಹಿಡಿದರು. ಇದರಿಂದ ಸಭೆಯು ವಾಗ್ವಾದಕ್ಕೆ ತಿರುಗಿದಾಗ ಕಾಂಗ್ರೆಸ್ ನವರು ಸಭೆಯಲ್ಲಿದ್ದ ಬಿಜೆಪಿಯವರನ್ನು ಹಾಗೂ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡರು. [ಕಳಸಾ-ಬಂಡೂರಿಗಾಗಿ ಏ.18ರಂದು ಕರ್ನಾಟಕ ಬಂದ್]

ಗೊಂದಲದ ಗೂಡಾಗಿ ಪರಿಣಮಿಸಿದ ಸಭೆಯಲ್ಲಿ ರಾಜ್ಯ ಸರ್ಕಾರ ಪ್ರಧಾನ ಮಂತ್ರಿ ಮಧ್ಯ ಪ್ರವೇಶಿಸಬೇಕೆಂಬ ನಿಲುವಿಗೆ ಅಂಟಿಕೊಂಡಿತು. ಬಿಜೆಪಿಯವರುವ ಮೊದಲು ಆಯಾ ರಾಜ್ಯಗಳ ಕಾಂಗ್ರೆಸ್ ನಾಯಕರ ಮನವೊಲಿಸಿ ಎಂದು ವಾದ ಮಾಡಲಾರಂಭಿಸಿದರು. ಆದ್ದರಿಂದ ಸಭೆಯು ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲಿಲ್ಲ. ಇದರಿಂದಾಗಿ ಬಿಜೆಪಿಯ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಸಿದ್ದರಾಮಯ್ಯ ಹೇಳಿಕೆ : ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಬಿಜೆಪಿ ತನ್ನ ಹಳೆಯ ವಾದವನ್ನೇ ಹೇಳುತ್ತಿದೆ. ಪ್ರಧಾನಿ 3 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದರೆ ಆ ಸಂದರ್ಭದಲ್ಲಿ ಆಯಾ ರಾಜ್ಯದ ಮುಖ್ಯಮಂತ್ರಿಗಳು ವಿರೋಧ ಪಕ್ಷದ ನಾಯಕರ ಸಲಹೆ ಮತ್ತು ಅಭಿಪ್ರಾಯ ಪಡೆದೇ ಸಭೆಗೆ ಬರುತ್ತಾರೆ' ಎಂದರು.

-
-
-
-

'ರಾಜ್ಯದಲ್ಲಿ ನಮ್ಮ ಸರ್ಕಾರಕ್ಕೆ ಬಹುಮತವಿದೆ, ನಾನು ಪ್ರಧಾನಿ ಕರೆದ ಸಭೆಗೆ ಹೋಗುವ ಮೊದಲು ತಯಾರಿ ಮಾಡಿಕೊಳ್ಳದೆ ಕೈ ಬಿಸಿಕೊಂಡು ಹೋಗಿಬಿಡುತ್ತೇನೆಯೇ? ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಮೊದಲು ಪ್ರಧಾನಿ ಮಧ್ಯ ಪ್ರವೇಶ ಮಾಡಿ ಸಭೆ ಕರೆಯಲಿ' ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಅನಂತಕುಮಾರ್, ಜಿ.ಎಂ.ಸಿದ್ದೇಶ್ವರ್, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಉತ್ತರ ಕರ್ನಾಟಕ ಭಾಗದ ಮುಖಂಡರು, ಕಳಸಾ-ಬಂಡೂರಿ ಯೋಜನೆ ಹೋರಾಟ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All party meeting failed to take decision on future course of action by the government in the matter of Kalasa Banduri Nala drinking water project. Meeting held at Bengaluru under the leadership of Chief Minister Siddaramaiah On Saturday, April 2, 2016.
Please Wait while comments are loading...