Kabini Dam: ಭರ್ತಿಯಾದ ಕಬಿನಿ ಜಲಾಶಯ; 20,000 ಕ್ಯೂಸೆಕ್ಸ್ ನೀರು ಬಿಡುಗಡೆ

ಕಾವೇರಿ ಕೊಳ್ಳದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಬಿನಿ ಜಲಾಶಯ ಭರ್ತಿಯಾಗಿದ್ದು, 20,000 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗಿದೆ.

ಶನಿವಾರ ಕಬಿನಿ ಜಲಾಶಯದ ಒಳಹರಿವು 19,181 ಕ್ಯೂಸೆಕ್ಸ್ ಇದ್ದು, 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದೆ. 2284 ಅಡಿ ಗರಿಷ್ಠ ಸಾಮರ್ಥ್ಯವನ್ನು ಹೊಂದಿದ್ದು, 2283.30 ಅಡಿ ನೀರು ಸಂಗ್ರಹವಾಗಿದೆ.

Kabini Dam Releases 20 000 Cusecs Water

ಕೇರಳದ ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇನ್ನೂ ಒಂದು ವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಲಿದೆ.

ತಮಿಳುನಾಡಿಗೆ ನೀರು!

ಕಬಿನಿ ಜಲಾಶಯದಿಂದ ಕಬಿನಿ ನದಿಗೆ 20,000 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು ಇದು ಟಿ ನರಸೀಪುರದ ಬಳಿಕ ಕಾವೇರಿ ನದಿಯನ್ನು ಸೇರಿ ಬಳಿಕ ತಮಿಳುನಾಡಿಗೆ ಹರಿಯಲಿದೆ. ಈ ಮೂಲಕ ತಮಿಳುನಾಡು ಬೇಡಿಕೆ ಇಟ್ಟಿರುವ 19 ಟಿಎಂಸಿ ನೀರನ್ನು ಹರಿಸಲು ರಾಜ್ಯಕ್ಕು ಸುಲಭವಾಗುತ್ತದೆ.

ಕಾವೇರಿ ನದಿ ಪಾತ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆಆರ್ ಎಸ್ ಜಲಾಶಯದ ಒಳಹರಿವು ಕೂಡ ಮತ್ತಷ್ಟು ಹೆಚ್ಚಾಗಲಿದೆ. ಕೊಡಗಿನ ಕೂಡಿಗೆ ಬಳಿ ಕಾವೇರಿ ನದಿಯ ಮಟ್ಟ 1.5 ಮೀಟರ್ ಹೆಚ್ಚಾಗಿದ್ದು, ಸೋಮವಾರ ಕೆಆರ್ ಎಸ್‌ ಜಲಾಶಯದ ಒಳಹರಿವು ಮತ್ತೆ ಹೆಚ್ಚಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+