ಉಡುಪಿ : ಎಸ್‌ಎಂವಿ ಕಾಲೇಜಿನಲ್ಲಿ ಫೆ.5ರಿಂದ ಉದ್ಯೋಗ ಮೇಳ
ಉಡುಪಿ, ಫೆ.3 : ಉಡುಪಿಯ ಶ್ರೀ ಮಾಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಫೆಬ್ರವರಿ 5ರಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಸುಮಾರು 500 ಹುದ್ದೆಗಳಿಗೆ ಉದ್ಯೋಗ ಮೇಳದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಎಸ್‌ಎಂವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಫೆಬ್ರವರಿ 5ರಿಂದ 7ರವರೆಗೆ ಕಾಲೇಜಿನ ಆವರಣದಲ್ಲಿ 'ಪ್ರವೃತ್ತಿ' ಎಂಬ ಶೀರ್ಷಿಕೆಯಡಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. [ನಮ್ಮ ಮೆಟ್ರೋದಲ್ಲಿ ಕೆಲಸ ಖಾಲಿ ಇದೆ]

20 ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 500 ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಿವೆ. ಐಟಿ, ಬಿಪಿಓ, ಮೆಕಾನಿಕಲ್, ಸಿವಿಲ್, ವಾಣಿಜ್ಯ, ಅಕೌಂಟ್ಸ್ ಮತ್ತು ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ಎಲ್ಲಾ ಇಂಜಿನಿಯರಿಂಗ್ ಮತ್ತು ಪದವಿ ಪಡೆದ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 100 ರೂ.ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಫೆಬ್ರವರಿ 5ರಂದು ಬಂಟಕಲ್‌ನಲ್ಲಿರುವ ಕಾಲೇಜಿನ ಆವರಣದಲ್ಲಿ ಬೆಳಗ್ಗೆ 8.30ಕ್ಕೆ ನೋಂದಣಿ ಆರಂಭವಾಗಲಿದ್ದು, 9 ಗಂಟೆಗೆ ಉದ್ಯೋಗ ಮೇಳ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 0820-2589182 ಅಥವ 9481914710 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ www.sode-edu.in. ವೆಬ್ ಸೈಟ್ ನೋಡಬಹುದು.












Click it and Unblock the Notifications