ಯಡಿಯೂರಪ್ಪಗೆ ಸಂಕಷ್ಟ: ಆಪರೇಷನ್ ಕಮಲ ವಿರುದ್ಧ ಎಸಿಬಿಗೆ ದೂರು

Recommended Video

      ಆಪರೇಷನ್ ಕಮಲ ವಿರುದ್ಧ ಎಸಿಬಿಗೆ ದೂರು | Oneindia Kannada

      ಬೆಂಗಳೂರು, ಫೆಬ್ರವರಿ 11: ಶಾಸಕರನ್ನು ಸೆಳೆಯಲು ಹಣ ಮತ್ತು ಮಂತ್ರಿಗಿರಿಯ ಆಮಿಷವೊಡ್ಡಿದ ಆರೋಪದಡಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.

      ಯಡಿಯೂರಪ್ಪ ಅವರು ಪಕ್ಷ ತೊರೆದು ಬಿಜೆಪಿ ಸೇರಿಕೊಳ್ಳಲು 10 ಕೋಟಿ ರೂಪಾಯಿ ನೀಡುವುದಾಗಿ ಮತ್ತು ಸಚಿವ ಸ್ಥಾನ ನಿಡುವುದಾಗಿ ಶಾಸಕ ನಾಗನಗೌಡ ಅವರಿಗೆ ಆಮಿಷವೊಡ್ಡಿದ್ದಾರೆ. ಅದರ ಕುರಿತಾದ ಆಡಿಯೋ ಕ್ಲಿಪ್ ಇದ್ದು, ಅದು ತಮ್ಮದೇ ಧ್ವನಿ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

      ಜೆಡಿಎಸ್ ಕಾರ್ಯಕರ್ತ ಸಿದ್ದರಾಜು ಎಂಬುವವರು ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದಾರೆ. ಇದರಿಂದ ಯಡಿಯೂರಪ್ಪ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ.

      jds worker files complaint to ACB against bjp state president bs yeddyurappa on operation kamala

      ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರನ್ನು ಬಿಜೆಪಿಗೆ ಸೆಳೆಯಲು ಮುಂದಾಗಿದ್ದ ಬಿಎಸ್‌ಯಡಿಯೂರಪ್ಪ ಅವರ ಸಂಭಾಷಣೆ ಇರುವ ಆಡಿಯೋವನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಈ ಆಡಿಯೋ ಕ್ಲಿಪ್ ಸುಮಾರು 40 ನಿಮಿಷಗಳ ಅವಧಿಯದ್ದಾಗಿದೆ.

      ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಕಂದಕೂರು ​ಈ ಆಡಿಯೋ ಕ್ಲಿಪ್​ ಅನ್ನು ರೆಕಾರ್ಡ್​ ಮಾಡಿಕೊಂಡು ತಮಗೆ ಕೊಟ್ಟಿದ್ದಾಗಿ ಕುಮಾರಸ್ವಾಮಿ ಹೇಳಿದ್ದರು. ನೀನು ನನ್ನ ಮಗ ವಿಜಯೇಂದ್ರ ಇದ್ದಂತೆಯೇ ಎಂದು ಹೇಳುತ್ತಾ ಬಿಎಸ್ ಯಡಿಯೂರಪ್ಪ ಹಣದ ಆಮಿಷವನ್ನು ಒಡ್ಡಲು ಪ್ರಯತ್ನ ಮಾಡಿದ್ದಾರೆ, ಆದರೆ ಶರಣಗೌಡ ಅವರು ನನಗೆ ಕಾಲ್ ಮಾಡಿದ್ದರಿಂದ ಎಲ್ಲವನ್ನೂ ನಾನೇ ರೆಕಾರ್ಡ್ ಮಾಡಿದ್ದೇನೆ ಎಂದು ಎಚ್‌ಡಿಕೆ ವಿವರಿಸಿದ್ದರು.

      ಆರಂಭದಲ್ಲಿ ಇದು ನಕಲಿ ಆಡಿಯೋ. ನನ್ನ ಧ್ವನಿಯನ್ನು ಮಿಮಿಕ್ರಿ ಮಾಡಿ ಬಳಸಿಕೊಳ್ಳಲಾಗಿದೆ. ಈ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೆ, ಭಾನುವಾರ ಉಲ್ಟಾ ಹೊಡೆದ ಯಡಿಯೂರಪ್ಪ ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+