• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೂಪರ್ ಮಾಡೆಲ್‌ಗಳನ್ನೂ ಮೀರಿಸಿದ್ದಾರೆ ನಮ್ಮ ದೇವೇಗೌಡರು

By Manjunatha
|

ಬೆಂಗಳೂರು, ಜೂನ್ 21: ಇಂದು ಅಂತಾರಾಷ್ಟ್ರೀಯ ಯೋಗದಿನದಂದು ದೇವೇಗೌಡರು ಮಾಡಿದ ಯೋಗಾಸನವನ್ನು ಬಹುತೇಕ ಎಲ್ಲ ಚಾನೆಲ್‌ಗಳು ಇಂಚಿಂಚೂ ಪ್ರಸಾರ ಮಾಡಿದವು. ಅವರ ಸಣ್ಣ ಕದಲಿಕೆಯನ್ನೂ ಸುದ್ದಿ ವಾಹಿನಿಗಳು ಪುನ-ಪುನಃ ಪ್ರದರ್ಶಿಸಿದವು.

ಮೋದಿ ಅವರ ಯೋಗಕ್ಕಿಂತಲೂ ಮಣ್ಣಿನ ಮಗ ಮಾಡಿದ ಯೋಗ ಹೆಚ್ಚು ಕವರೇಜ್ ಗಿಟ್ಟಿಸಿಕೊಂಡಿತು. ದೇವೇಗೌಡರ ಯೋಗವನ್ನು ಕ್ಯಾಮೆರಾದಲ್ಲಿ ತುಂಬಿಕೊಳ್ಳಲೆಂದೇ ಗೌಡರ ಮನೆಯ ಮುಂದೆ ಇಂದು ಬೆಳಿಗ್ಗೆಯಿಂದಲೇ ಸುದ್ದಿ ವಾಹಿನಿಯ ಮಂದಿ ಸಾಲುಗಟ್ಟಿ ನಿಂತಿದ್ದರು.

ತರಹೇವಾರಿ ಭಂಗಿಯಲ್ಲಿ ನಮ್ಮ ನಾಯಕರ ಯೋಗಾವತಾರ!

ಮಾಧ್ಯಮದವರು ಒಂಟಿ ಕಾಲಲ್ಲಿ ಗೌಡರ ಮನೆ ಮುಂದೆ ನಿಂತಿದ್ದಾಗ ಬಹುಷಃ ದೊಡ್ಡ ಗೌಡರು ಇನ್ನೂ ನಿದ್ದೆಯಲ್ಲಿದ್ದರೋ ಏನೋ. ಆ ನಂತರ ನಡೆದದ್ದನ್ನು ಜನರು ಟಿವಿಗಳಲ್ಲಿ ನೋಡಿರಲಿಕ್ಕೂ ಸಾಕು. ಆದರೆ ವಿಷಯ ಇರುವುದೇ ಬೇರೆ.

JDS president Deve Gowdas Yoga gets big coverage in news channel

ದೇವೇಗೌಡರು ಯೋಗ ಮಾಡಿರುವುದೇ ಕ್ಯಾಮೆರಾಗಳಿಗಾಗಿ ಎನ್ನುತ್ತಿದ್ದಾರೆ ಕೆಲವು ಮಂದಿ. ಹೌದು, ಅವರ ಈ ಆರೋಪಕ್ಕೆ ಫೋಟೋ ಒಂದನ್ನು ಸಾಕ್ಷಿಯಾಗಿಯೂ ಕೊಡುತ್ತಾರೆ. ಆ ಚಿತ್ರದಲ್ಲಿ ಮಂಚದ ಮೇಲೆ ಮಲಗಿದ ಗೌಡರು ಯೋಗದ ಭಂಗಿಯೊಂದನ್ನು ಹಾಕಿದ್ದಾರೆ ಮಾಧ್ಯಮದ ಮಂದಿ ಗೌಡರ ಆಸನವನ್ನು ಕ್ಯಾಮೆರಾದೊಳಕ್ಕೆ ಸೆರೆಮಾಡಿಕೊಳ್ಳುತ್ತಿದ್ದಾರೆ.

ಚಿತ್ರ ನೋಡಿದವರು 'ಇದು ಯೋಗ ದಿನದ ಸ್ಟಂಟು ಅಷ್ಟೆಯೇ' ಎಂದು ಹೇಳಬಹುದು. ಆದರೆ ದೇವೇಗೌಡರ ವಿಷಯದಲ್ಲಿ ಹಾಗೆ ಬಿಡುಬೀಸಾಗಿ ಮಾತು ಒಗೆದು ಬಿಡಲು ಸಾಧ್ಯವಿಲ್ಲ. ಇಂದು ಯೋಗ ದಿನವೆಂದೋ ಅಥವಾ ಮಾಧ್ಯಮದವರು ಇದ್ದಾರೆಂದೋ ದೇವೇಗೌಡರು ಯೋಗ ಮಾಡಿಲ್ಲ, ಅವರು ಬಹಳ ಸಮಯದಿಂದಲೂ ಯೋಗ ಮಾಡುತ್ತಲೇ ಬಂದಿದ್ದಾರೆ.

ಯೋಗ ದಿನದಂದು ಯೋಗವನ್ನು ಆರೋಗ್ಯದ ಸಾಧನವಾಗಿ ನೋಡದೇ ಪ್ರಚಾರದ ಸಾಧನವಾಗಿ ನೋಡುವವರೇ ಹೆಚ್ಚು ಎಂದು ಆ ದೇವೇಗೌಡರ ಈ ಚಿತ್ರ ಹೇಳುತ್ತಿದೆ. ಆದರೆ ನೆನಪಿರಲಿ ದೇವೇಗೌಡರು ಯೋಗ ಮಾಡುತ್ತಿದ್ದನ್ನು ಮಾಧ್ಯಮದವರು ಸೆರೆ ಹಿಡಿದಿದ್ದಾರೆಯೇ ವಿನಃ ಮಾಧ್ಯಮದವರು ಇದ್ದಾರೆಂದು ಗೌಡರು ಆಸನ ಹಾಕಿಲ್ಲ, ಅವರು ಹಳೆಯ ಯೋಗಪಟು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS President Deve Gowda's Yoga performance gets high coverage in all Kannada news channels and some national channels too. a photo in which news channels camera focusing Deve Gowda went viral inn social media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more