ವೈಎಸ್ ವಿ ದತ್ತ ಅವರಿಗೆ ಪತ್ನಿ ವಿಯೋಗ, ಯಗಟಿಯಲ್ಲಿ ಅಂತ್ಯಕ್ರಿಯೆ
Recommended Video

ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾರವರ ಪತ್ನಿ ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ನಿಧನ | Oneindia Kannada
ಚಿಕ್ಕಮಗಳೂರು, ಆಗಸ್ಟ್ 22 : ಕಡೂರಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಅವರ ಪತ್ನಿ ನಿರ್ಮಲಾ ಅವರು ಬುಧವಾರ ನಿಧನರಾಗಿದ್ದಾರೆ. 60 ವರ್ಷ ವಯಸ್ಸಿನ ನಿರ್ಮಲಾ ಅವರು ಬೆಂಗಳೂರಿನಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು

ಮೃತರಿಗೆ ಪತಿ ವೈ.ಎಸ್.ವಿ.ದತ್ತ ಹಾಗೂ ಒಬ್ಬ ಮಗಳಿದ್ದಾರೆ. ಗುರುವಾರ ಬೆಳಗ್ಗೆ 10 ಗಂಟೆ ತನಕ ಬೆಂಗಳೂರಿನಲ್ಲಿರುವ ರಾಜಾಜಿನಗರದಲ್ಲಿರುವ ದತ್ತ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗುರುವಾರ ಸಂಜೆ 4 ಗಂಟೆಗೆ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಮಾಜಿ ಪ್ರಧಾನಿ- ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಅವರು ಮೃತರ ಅಂತಿಮ ದರ್ಶನವನ್ನು ಪಡೆದರು.












Click it and Unblock the Notifications