ಜೆಡಿಎಸ್ ಖಾತೆ ಹಂಚಿಕೆ ಪಟ್ಟಿ ರೆಡಿ, ಯಾವ ಜಾತಿಗೆ ಎಷ್ಟು ಸ್ಥಾನ?

ಬೆಂಗಳೂರು, ಮೇ 21: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಬಹುತೇಕ ಖಚಿತವಾಗಿದ್ದು, ಇದೀಗ ಖಾತೆ ಹಂಚಿಕೆ ಕಸರತ್ತು ನಡೆಯುತ್ತಿದೆ. ಕಾಂಗ್ರೆಸ್‌ಗೆ ಎಷ್ಟು ಜೆಡಿಎಸ್‌ಗೆ ಎಷ್ಟು ಸಚಿವ ಸ್ಥಾನಗಳು ಬೇಕು ಎಂಬ ಬಗ್ಗೆ ಎರಡೂ ಪಕ್ಷದ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ.

ಜೆಡಿಎಸ್ ಪಕ್ಷವು ಇದಾಗಲೇ ತನಗೆ ಬೇಕಾದ ಮಂತ್ರಿ ಸ್ಥಾನಗಳ ಪಟ್ಟಿ ತಯಾರಿಸಿದ್ದು, ಸ್ಪೀಕರ್‌ ಸೇರಿದಂತೆ ಒಟ್ಟು 13 ಸಚಿವ ಸ್ಥಾನಗಳಿಗಾಗಿ ಬೇಡಿಕೆ ಇಟ್ಟಿದೆ. ಜೊತೆಗೆ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಕೂಡ ದೊರಕುತ್ತಿರುವುದರಿಂದ ಈ ಸಂಖ್ಯೆ 14 ಕ್ಕೆ ಏರುತ್ತದೆ.

ಜೆಡಿಎಸ್ ಪಕ್ಷವು ಜಾತಿ ಆಧಾರದ ಮೇಲೆ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದು, ಪಕ್ಷದ ವತಿಯಿಂದ ಗೆದ್ದಿರುವ ಎಲ್ಲಾ ಜಾತಿಯ ಅಭ್ಯರ್ಥಿಗಳ ಜಾತಿಗಳಿಗೂ ಪ್ರಾಶಸ್ಥ್ಯ ನೀಡುಲು ಈ ರೀತಿಯ ನಿರ್ಣಯ ಕೈಗೊಂಡಿದೆ.

JDS demanding 13 minister post along with speaker post

ಒಕ್ಕಲಿಗ ಸಮುದಾಯಕ್ಕೆ ಅತಿ ಹೆಚ್ಚು ಅಂದರೆ 5 ಮಂತ್ರಿ ಸ್ಥಾನಗಳನ್ನು ಜೆಡಿಎಸ್ ನೀಡಲಿದೆ. ಇದರಲ್ಲಿ ಜಿ.ಟಿ.ದೇವೇಗೌಡ ಅವರಿಗೆ ಪ್ರಭಾವಿ ಸಚಿವ ಸ್ಥಾನವನ್ನೇ ಜೆಡಿಎಸ್ ನೀಡುತ್ತಿದೆ. ಜೆಡಿಎಸ್‌ ಪಕ್ಷದಿಂದ ಒಟ್ಟು 23 ಒಕ್ಕಲಿಗ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆ ಆಗಿದ್ದಾರೆ ಹಾಗಾಗಿ ಈ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಆಲೋಚನೆಯನ್ನು ಜೆಡಿಎಸ್ ಮಾಡಿದೆ.

ವೀರಶೈವ-ಲಿಂಗಾಯತ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲಿದೆ ಜೆಡಿಎಸ್. ಪರಿಶಿಷ್ಟ ಪಂಗಡದ ಒಬ್ಬ ಶಾಸಕರಿಗೆ, ಪ.ಜಾತಿಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡುವ ಆಲೋಚನೆ ಜೆಡಿಎಸ್‌ಗಿದೆ. ಬಂಡೆಪ್ಪ ಖಾಶಂಪುರ ಅವರಿಗೂ ಪ್ರಭಾವಿ ಸಚಿವ ಸ್ಥಾನವೇ ದೊರಕಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+