ಜಾತ್ಯಾತೀತ ಎನ್ನುವ ಜೆಡಿಎಸ್ ಎಲ್ಲಾ ಜಾತಿಗಳಿಗೂ ಟಿಕೆಟ್ ನೀಡಿದೆಯೇ? ವಿವರಗಳು ಇಲ್ಲಿವೆ

ಬೆಂಗಳೂರು, ಏಪ್ರಿಲ್. 21: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಜೆಡಿಎಸ್ 211 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಉಳಿದ ಏಳು ಕಡೆ ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದೆ. ತಮ್ಮದು ಜಾತ್ಯಾತೀತ ಎಂದು ಹೇಳುವ ಪಕ್ಷ ಎಲ್ಲಾ ಜಾತಿಯವರಿಗೂ ಸಮಾನ ಅವಕಾಶ ನೀಡಿದೆಯೇ ಎಂಬುದನ್ನು ಈ ಲೇಖನದಲ್ಲಿ ತಿಳಿಯುವ.

"ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಯಾವೆಲ್ಲ ಸಮುದಾಯಕ್ಕೆ ಎಷ್ಟು ಟಿಕೆಟ್ ನೀಡಲಾಗಿದೆ ಎಂಬುದರ ಸವಿವರ ಇಲ್ಲಿದೆ. ಈ ಮೂಲಕ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಸಾಮಾನತೆಯನ್ನು ಜಾತ್ಯತೀತ ಜನತಾದಳ ಪಕ್ಷ ಪಾಲಿಸುತ್ತಿದೆ" ಎಂದು ಜೆಡಿಎಸ್ ತಾನು ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್ ನೀಡಿದೆ ಎಂಬುದನ್ನು ಬಹಿರಂಗಪಡಿಸಿದೆ.

JDS Candidates List: Caste Wise Analysis of Janatha Dal (Secular) Candidates for Karnataka Elections.

ಜೆಡಿಎಸ್ ಪಕ್ಷವು ವಿವಿಧ ಜಾತಿಗಳಿಗೆ ಪ್ರಾತಿನಿಧ್ಯವನ್ನು ನೀಡಿದೆ. ಪಟ್ಟಿಯಲ್ಲಿ ಒಕ್ಕಲಿಗರು ಸಿಂಹಪಾಲು ಪಡೆದಿದ್ದರೇ, ಎರಡನೇ ಸಾಲಿನಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಪರಿಶಿಷ್ಟ ಜಾತಿಯವರಿಗೆ ದೊಡ್ಡ ಪ್ರಮಾಣದ ಟಿಕೆಟ್ ಹಂಚಿಕೆ ಮಾಡಿದೆ. ಮುಸ್ಲಿಂ ಸಮುದಾಯಕ್ಕೆ 23 ಟಿಕೆಟ್ ಘೋಷಣೆ ಮಾಡಿದೆ.

ನಿರೀಕ್ಷೆಯಂತೆ ಒಕ್ಕಲಿಗರಿಗೆ ಜೆಡಿಎಸ್ 55 ಟಿಕೆಟ್‌ಗಳನ್ನು ನೀಡಿದೆ. ಅತ್ಯಧಿಕ ಸಂಖ್ಯೆಯ ಸ್ಥಾನಗಳು ಒಕ್ಕಲಿಗರ ಪಾಲಾಗಿವೆ. ಲಿಂಗಾಯತರಿಗೆ 41 ಸ್ಥಾನಗಳಲ್ಲಿ ಟಿಕೆಟ್ ನೀಡಲಾಗಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ರಾಜ್ಯದ ಪ್ರಬಲ ಸಮುದಾಯಗಳಾಗಿದ್ದು, ಮೂರು ಪಕ್ಷಗಳು ಈ ಎರಡು ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ಗಳನ್ನು ಘೊಷಣೆ ಮಾಡಿವೆ.

JDS Candidates List: Caste Wise Analysis of Janatha Dal (Secular) Candidates for Karnataka Elections.

*ಜಾತ್ಯತೀತ ಜನತಾದಳ ಪಕ್ಷದ ಅಭ್ಯರ್ಥಿಗಳ ಜಾತಿವಾರು ವಿವರ*

1. ಒಕ್ಕಲಿಗ- 55

2. ಲಿಂಗಾಯತ - 41

3. ಪರಿಶಿಷ್ಟ ಜಾತಿ (SC) - 33

4. ಪರಿಶಿಷ್ಟ ಪಂಗಡ (ST) - 13

5. ಮುಸ್ಲಿಂ - 23

* ಒಬಿಸಿ - 31*

1. ಕುರುಬ- 10

2. ನೇಕಾರ- 01

3. ಮಡಿವಾಳ- 01

4. ಕೋಲಿ- 01

5. ಈಡಿಗ- 07

6. ಕ್ಷತ್ರಿಯ- 01

7. ತಿಗಳ - 01

8. ಕುಂಬಾರ- 01

9. ಉಪ್ಪಾರ- 02

10. ಕೊಂಕಣಿ- 01

11. ಅಕ್ಕಸಲಿಗ- 01

12. ಬಲಿಜ- 02

13. ನಾಯ್ಡು- 01

* ಇತರರು -15

1. ಮರಾಠ - 05

2. ಜೈನ್- 01

3. ಬ್ರಾಹ್ಮಣ- 01

4. ಜಿಎಸ್ಬಿ- 01

5. ಬಂಟ್ಸ್ 04

6. ರೆಡ್ಡಿ- 01

7. ಕೊಡವ- 01

8. ಕ್ರಿಶ್ಚಿಯನ್- 01

*ಮಹಿಳೆಯರು- 13*

ಒಟ್ಟು- 211

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+