ಜೆಡಿಎಸ್, ಮಧುಬಂಗಾರಪ್ಪ ಗೆಲುವಷ್ಟೇ ನನಗೆ ಮುಖ್ಯ: ಗೀತಾ

Posted By:
Subscribe to Oneindia Kannada

ಶಿವಮೊಗ್ಗ, ಮಾರ್ಚ್ 23: ಜೆಡಿಎಸ್ ಪಕ್ಷ ಹಾಗೂ ನನ್ನ ತಮ್ಮ ಮಧು ಬಂಗಾರಪ್ಪನ ಗೆಲವಷ್ಟೆ ನನಗೆ ಮುಖ್ಯ ಎಂದು ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್‌ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಸೊರಬ ಶಾಸಕ ಮಧು ಬಂಗಾರಪ್ಪನವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಕುಟುಂಬದ ಇನ್ನೋರ್ವ ಸಹೋದರ ಕುಮಾರ್ ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಪರವಾಗಿ ತಮ್ಮ ನಿಲುವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಜೆಡಿಎಸ್ ಪಕ್ಷ ಹಾಗೂ ಮಧು ಬಂಗಾರಪ್ಪ ಗೆಲುವಷ್ಟೆ ಮುಖ್ಯವಾಗಿದೆ. ಬೇರೆ ಪಕ್ಷದ ಕುರಿತು ನಾನು ಉತ್ತರಿಸಲ್ಲ' ಎಂದರು.

ಆರ್.ಎಂ. ಮಂಜುನಾಥ ಗೌಡ ಪರ ಪ್ರಚಾರಕ್ಕಿಳಿದ ಗೀತಾ ಶಿವರಾಜ್ ಕುಮಾರ್

'ಶಿವಮೊಗ್ಗ ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರಗಳನ್ನ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಈಗಾಗಲೇ ಕಳೆದ ಮೂರು ದಿನಗಳಿಂದ ಜೆಡಿಎಸ್ ಪರ ಪ್ರಚಾರ ಮಾಡುತ್ತಿದ್ದೇನೆ. ತೀರ್ಥಹಳ್ಳಿಯಿಂದ ಪ್ರಚಾರ ಪ್ರಾರಂಭಿಸಿದ್ದೇನೆ' ಎಂದರು.

JDS, and Mshu Bangarappas success is important to me: Geeta Shivaraj Kumar

'ಗೀತಾ ಶಿವರಾಜ್ ಕುಮಾರ್ ಕಾಣೆಯಾಗಿದ್ದರು, ಇಂದು ಶಿವಮೊಗ್ಗದಲ್ಲಿ ಪ್ರತ್ಯೆಕ್ಷರಾಗಿದ್ದಾರೆ ಯಾಕೆ? ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟುದಿನ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಷ್ಟೆ. ಆದರೆ ವ್ಯಯಕ್ತಿಕವಾಗಿ ಶಿವಮೊಗ್ಗ ಹಾಗೂ ಸೊರಬಕ್ಕೆ ಭೇಟಿ ನೀಡಿದ್ದೇನೆ. ನನ್ನ ತಾಯಿಯ ಸಾವು, ಮಗಳ ನಿಶ್ಚಿತಾರ್ಥ, ಮದುವೆಯಿಂದ ಬ್ಯುಸಿಯಾಗಿದ್ದೆ. ಇವುಗಳ ಮಧ್ಯೆಯೂ ಶಿವಮೊಗ್ಗ ಹಾಗೂ ಸೊರಬಕ್ಕೆ ಬಂದಿದ್ದೆ" ಎಂದು ಉತ್ತರಿಸಿದರು.

ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ನಿರಂಜನ್, ಮುಖಂಡರಾದ ಶ್ರೀಕಾಂತ್, ಶಾಂತ ಸುರೇಂದ್ರ, ಮೇಯರ್ ನಾಗರಾಜ್ ಕಂಕರಿ, ಮಾಜಿ ಮೇಯರ್ ಏಳುಮಲೈ, ಪಾಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Only JDS and MLA of Sorab constituency Madhu Bangarappa's successs is important to me. i don't think about others in different parties" JDS leader and Kannada actor Shivaraj Kumar's wif Geetha Shivaraj Kumar told in Shivamogga.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ