ಎಚ್ ಡಿಕೆಗೆ ಮುಕ್ತ ಆಹ್ವಾನ ನೀಡಿದ ಬಂಡಾಯ ಶಾಸಕ ಬಾಲಕೃಷ್ಣ

Posted By:
Subscribe to Oneindia Kannada

ರಾಮನಗರ: ನವೆಂಬರ್, 24: "ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸುವುದಾದರೆ ನಾನು ಅದನ್ನು ಸ್ವಾಗತಿಸುತ್ತೇನೆ" ಎಂದು ಜೆಡಿಎಸ್ ಬಂಡಾಯ ಶಾಸಕ ಬಾಲಕೃಷ್ಣ ತಿಳಿಸಿದರು.

'ಅಬ್ ಕೀ ಬಾರ್ ಕುಮಾರಸ್ವಾಮಿ ಸರ್ಕಾರ್' ಎಂಬ ಹೇಳಿಕೆಗೆ ವಂಗ್ಯವಾಗಿ ಪ್ರತಿಕ್ರಿಯೆ ನೀಡಿದ ಅವರು, "ಆ ಕಾಲಹೋಯ್ತು. ಯಾವ ಬಾರು ಇಲ್ಲ ಗೀರು ಇಲ್ಲ" ಬೇಕಿದ್ರೆ ಅವರು ನನ್ನ ಕ್ಷೇತ್ರದಲ್ಲಿ ಬಂದು ಸ್ಪರ್ಧಿಸಲಿ ಎಂದು ಮುಕ್ತ ಆಹ್ವಾನ ನೀಡಿದರು.

JD(S) rebel MLA Balakrishna challenges HD Kumaraswamy

"ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಲ್ ಕುಮಾರಸ್ವಾಮಿ ಯಾರಾದರೂ ಸರಿ ಬಂದು ಸ್ಪರ್ಧಿಸಬಹುದು" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

"ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿಂದ ಬೇಕಾದರೂ ಚುನಾವಣೆಗೆ ನಿಲ್ಲಬಹುದು ಅದಕ್ಕೆ ನನ್ನ ತಕರಾರು ಏನೂ ಇಲ್ಲ" ಎಂದು ಅವರು ಹೇಳಿದರು.

ಬಾಲಕೃಷ್ಣ ಅವರ ಹೇಳಿಕೆ ಜೆಡಿಎಸ್ ನಲ್ಲಿ ಬಂಡಾಯ ಶಾಸಕರ ಭಿನ್ನಮತ ಮತ್ತಷ್ಟು ತೀವ್ರವಾಗಿದೆ ಎಂಬುದನ್ನು ತೋರಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JD(S) rebel MLA Balakrishna challenges JD(S) State unit president HD Kumaraswamy. he welcomes to Kumaraswamy to contest from Magadi assembly constituency in next state assembly election of Karnataka.
Please Wait while comments are loading...