• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಡ್ಡಿ ಉಪ್ಪು ತಿಂದಿದ್ದಾರೆ, ಈಗ ನೀರು ಕುಡಿಯುತ್ತಿದ್ದಾರೆ: ಸಿದ್ದರಾಮಯ್ಯ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ನವೆಂಬರ್ 11: ಜನಾರ್ದನ ರೆಡ್ಡಿ ಇಂದು ಜೈಲುಪಾಳಾದ ಬಗ್ಗೆ ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಉಪ್ಪು ತಿಂದವರು ನೀರು ಕುಡಿಯಲೇ ಬೇಕು' ಎಂದರು.

ಚಿಕ್ಕಮಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಯಾರೇ ಕಾನೂನು ವಿರೋಧಿ ಕಾರ್ಯ ಮಾಡಿದರೆ ಇದೇ ಗತಿಯಾಗುತ್ತದೆ ಎಂದರು.

ಕೆಲ ದಿನಗಳ ಹಿಂದಷ್ಟೆ ಜನಾರ್ದನ ರೆಡ್ಡಿ ಹಾಗೂ ಸಿದ್ದರಾಮಯ್ಯ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿದ್ದವು. ಸಂದರ್ಶನವೊಂದರಲ್ಲಿ ರೆಡ್ಡಿ ಅವರು, ನನ್ನನ್ನು ಸಿದ್ದರಾಮಯ್ಯ ಅವರು ಜೈಲಿಗೆ ಹಾಕಿಸಿದರು, ಅವರು ಮಾಡಿದ ಪಾಪಕ್ಕೆ ಅವರ ಮಗ ತೀರಿಕೊಂಡ ಎಂದಿದ್ದರು.

ಸಿದ್ದರಾಮಯ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಯುವಕರು

ಚಿಕ್ಕಮಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಇಂದು ಭಾರಿ ನೂಕಾಟ ತಳ್ಳಾಟ ಎದುರಿಸಬೇಕಾಯಿತು. ನೂರಾರು ಜನ ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು.

ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸಿದ್ದರಾಮಯ್ಯ ನವರ ಮೇಲೆ ಮುಗಿಬಿದ್ದ ಅಭಿಮಾನಿಗಳು ಪೊಲೀಸ್ ಭದ್ರತೆಯ ನಡುವೆಯೇ ಸೆಲ್ಫಿ ತಗೆದುಕೊಳ್ಳಲು ಮುಗಿಬಿದ್ರು. ಸುಮಾರು 30 ನಿಮಿಷಗಳ ಕಾಲ ಸಾವಿರಾರು ಜನ ಸೇಲ್ಫಿ ತಗೆದುಕೊಳ್ಳಲು ನಾ ಮುಂದು ತಾ ಮುಂದು ಅಂತಾ ಸಿದ್ದರಾಯ್ಯನವರನ್ನು ಮುಂದೆ ಸಾಗಲು ಬಿಡದೇ ಜಮಾಹಿಸಿದರು.

ಇನ್ನ ಕೆಲ ಅಭಿಮಾನಿಗಳು ಮನೆಗಳ ಮೇಲೆ ಹತ್ತಿ ಪೋಟೋ ತಗೆಯಲು ಮುಗಿಬಿದ್ರು ಈ ವೇಳೆ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಮಾಜಿ ಸಿ ಎಂ ಸಿದ್ದರಾಮೈ ಹರಸಾಹಸ ಪಡುವಂತಾಯಿತು.

English summary
Siddaramaiah said Janardhan Reddy made mistake broken law so law punishing him. He also said coalition government will not let anybody who break the law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X