ಡಿ ಕೆ ಶಿವಕುಮಾರ್ ಜೈಲಿಗೆ,‌ ಜಗದೀಶ್ ಶೆಟ್ಟರ್ ಬಿಜೆಪಿಗೆ: ಭವಿಷ್ಯ ನುಡಿದ ಮಾಜಿ ಡಿಸಿಎಂ

ಶಿವಮೊಗ್ಗ, ಡಿಸೆಂಬರ್‌ 01: ಲೋಕಸಭೆ ಚುನಾವಣೆ ಮೊದಲು ಅಥವಾ ನಂತರ ಡಿಕೆಶಿ ಜೈಲಿಗೆ ಹೋಗುವುದು ಗ್ಯಾರಂಟಿ. ಮಾಜಿ ಸಿಎಂ ಆಗಿರುವ ಜಗದೀಶ್‌ ಶೆಟ್ಟರ್‌ ಬಿಜೆಪಿ ಬರುವುದು ಪಕ್ಕಾ ಎಂದು ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶದಲ್ಲಿ ಮಣ್ಣು ಮುಕ್ಕುತ್ತಿದೆ. ಕಳ್ಳರ ಕೈಯಲ್ಲಿ ಬೀಗ ಕೊಟ್ಪಂತಾಗಿದೆ. ಸಚಿವ ಸಂಪುಟ ಡಿ ಕೆ ಶಿವಕುಮಾರ್ ಮೇಲಿನ ಸಿಬಿಐ ಕೇಸ್ ವಾಪಸ್ ಪಡೆದದೆ. ಸಿಬಿಐ ತನಿಖೆ ಶೇಕಡಾ 90 ರಷ್ಟು ಮುಗಿದಿದೆ. ಲೋಕಸಭೆ ಚುನಾವಣೆ ಮೊದಲು ಅಥವಾ ನಂತರ ಡಿಕೆಶಿ ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಈಶ್ವರಪ್ಪ ಹೇಳಿದರು.

Jagadish Shettar is sure to come to BJP Says ‌KS Eshwarappa

ಹಿಂದೂ ಸಮಾಜ ರಕ್ತಗತ ಮಾಡಿಕೊಂಡ‌ ಕುಟುಂಬ. ಜಗದೀಶ್ ಶೆಟ್ಟರ್ ತಂದೆ ಹುಬ್ಬಳ್ಳಿ ‌ಮೇಯರ್, ಶಾಸಕರಾಗಿದ್ದರು. ಜಗದೀಶ್ ಶೆಟ್ಟರ್ ಮೈಯಲ್ಲಿ‌ ಹಿಂದು ರಕ್ತ ಹರಿಯುತ್ತಿದೆ. ಕಾಂಗ್ರೆಸ್ ಸಂಸ್ಕೃತಿ, ಜಮೀರ್ ಅವರ ಧೋರಣೆ ಅವರಿಗೆ ಹೊಂದಿಕೊಳ್ಳಲ್ಲ. ಹೀಗಾಗಿಯೇ ಶೆಟ್ಟರ್ ಹೊರಗೆ ಬರುತ್ತಾರೆ. ಖಂಡಿತ ಜಗದೀಶ್‌ ಶೆಟ್ಟರ್ ಅವರು ಬಿಜೆಪಿ ಗೆ ವಾಪಸ್ ಬರುತ್ತಾರೆ ಎಂದರು.

ಜಮೀರ್ ಅಹ್ಮದ್ ವಿವಾದಾತ್ಮಕ ದೇಶದ್ರೋಹಿ ಹೇಳಿಕೆ ಕೂಡ ಸಾಕಷ್ಟು ಪರಿಣಾಮ ಬೀರಿದೆ. ಇದರಿಂದ ಕಾಂಗ್ರೆಸ್ ಗೆ ಒಂದಿಷ್ಟು ಕ್ಷೇತ್ರಗಳು ಬರಲಿವೆ.‌ ತೆಲಂಗಾಣ ದಲ್ಲಿ ರಾಜ್ಯದ ದುಡ್ಡು ಬಳಕೆ ಆಗಿದೆ. ನಮ್ಮ ಸರ್ಕಾರ ಇದ್ದಾಗ 40 ಪರ್ಸೆಂಟ್ ವಿನಾಕಾರಣ ಆರೋಪ ಮಾಡಿದರು. ಅದನ್ನು ಸಾಬೀತು ಪಡಿಸಲು ಕಾಂಗ್ರೆಸ್ ಮತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗೆ ಸಾಧ್ಯವಾಗಿಲ್ಲ. ಸತ್ಯ ಹರಿಶ್ಚಂದ್ರ‌ ಕೆಂಪಣ್ಣ ಸಾಬೀತು ಮಾಡಲು ಹೊರಟಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಬಿಜೆಪಿ ಗೆಲುವು ಸಾಧಿಸಲಿದೆ. ಛತ್ತೀಸಗಡ ರಾಜ್ಯದ ಲ್ಲಿ ಅತಂತ್ರ ಪರಿಸ್ಥಿತಿ ಇದೆ. ಬಿಜೆಪಿ ಉತ್ತರಾಖಂಡ ಗೆಲುವಿನ ಹತ್ತಿರ ಇದೆ. ತೆಲಂಗಾಣದಲ್ಲಿ ಡಿಕೆ ಶಿವಕುಮಾರ್‌ ಎಟಿಎಂ ಬಳಕೆ ಆಗಿದೆ ಎಂದು ಕರ್ನಾಟಕ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಲೆಗಳಿಗೆ ಬಾಂಬ್ ಇಟ್ಟಿರುವ ಬೆದರಿಕೆ ಕರೆ ವಿಚಾರವಾಗಿ ಮಾತನಾಡಿ, ಶಾಲೆಗಳಿಗೆ ಬಾಂಬ್ ಇಟ್ಟಿದ್ದಾರೆ ಎಂಬುದನ್ನು ‌ನೋಡಿದೆ. ಅದು ಸುಳ್ಳಾಗಲಿ ಅಂತಾ ಭಗವಂತನಲ್ಲಿ ಪ್ರಾರ್ಥನೆ ‌ಮಾಡ್ತೇನೆ. ಅದು ಏನಾದರೂ ನಿಜ ಆಗಿದ್ದರೆ ಬಾಂಬ್ ಇಟ್ಟ ರಾಷ್ಟ್ರದ್ರೋಹಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಈ ಸರಕಾರ ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ಮಾತ್ರ ಚಿಂತನೆಯಲ್ಲಿ ಇದ್ದಾರೆ. ಅವರಿಗೆ ಭಯೋತ್ಪಾದನೆ, ಮಕ್ಕಳ ಭವಿಷ್ಯ ಗೊತ್ತಿಲ್ಲ.

ಚಾರ್ಜ್ ಶೀಟ್ ಹಾಕುವ ಸಂದರ್ಭದಲ್ಲಿ, ಜೈಲಿಗೆ ಹೋಗುವ ಭೀತಿಯಿಂದ ವಾಪಸ್ ಪಡೆದಿದ್ದಾರೆ. ರಾಹುಲ್ ಗಾಂಧಿ, ಸೋನಿಯಾಗಾಂಧಿ ಮೇಲೆ ಒತ್ತಡ ಹಾಕಿ ಸಿದ್ದರಾಮಯ್ಯ ಮೂಲಕ‌ ಪ್ರಕರಣ ಹಿಂಪಡೆದಿದ್ದಾರೆ. ಡಿಕೆಶಿ ಲೋಕಸಭೆ ಚುನಾವಣೆಗೆ ಮೊದಲು ಜೈಲಿಗೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಲೋಕಸಭೆ ಚುನಾವಣೆಗೆ ಮೊದಲು ಅಥವಾ ನಂತರ ಯಾವುದೇ ಕಾರಣಕ್ಕು ಈ ಸರಕಾರ ಇಲ್ಲ. ಈ ಸರಕಾರ ಬಿದ್ದು ಹೋಗೋದು ಮಾತ್ರ ಗ್ಯಾರಂಟಿ. ಈ ಸರಕಾರ ಆದಷ್ಟು ಬೇಗ‌ ಹೋಗಲಿ ಅಂತಾ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+