ಉತ್ತರ ಕರ್ನಾಟಕದಲ್ಲಿ ಶುರುವಾಯ್ತಾ ಆಪರೇಷನ್‌ ಹಸ್ತ! 20,30 ಜನ ಬರ್ತಾರೆ; ಶೆಟ್ಟರ್‌ ಹೊಸ ಬಾಂಬ್!

ಹುಬ್ಬಳ್ಳಿ,ಆಗಸ್ಟ್‌ 28: ಲೋಕಸಭಾ ಚುನಾವಣೆ ಕೇವಲ 9 ತಿಂಗಳು ಮಾತ್ರ ಬಾಕಿ ಉಳಿದಿದ್ದು, ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರನ್ನ ಸೆಳೆಯಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ ಎನ್ನುವ ಚರ್ಚೆ ಜೋರಾಗಿದ್ದು, ಬಿಜೆಪಿಯಿಂದ 20 ರಿಂದ 30 ಜನ ಬರ್ತಾರೆ ಎಂದು ಜಗದೀಶ್‌ ಶೆಟ್ಟರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಈ ಕುರಿತು ಮಾಜಿ ಸಿಎಂ ಶೆಟ್ಟರ್‌ ಮಾತನಾಡಿ, ಬಿಜೆಪಿಯಲ್ಲಿನ ವ್ಯವಸ್ಥೆಯಿಂದ ಬಹಳಷ್ಟು ಜನ ನೊಂದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಸ್ವ ಇಚ್ಛೆಯಿಂದ ಪಕ್ಷದಿಂದ ಪಕ್ಷಕ್ಕೆ ಹೋದರೆ ಅದು ಆಪರೇಷನ್ ಅಲ್ಲ. ಆಪರೇಷನ್ ಹಸ್ತ ಎನ್ನುವ ಅವಶ್ಯಕತೆ ಇಲ್ಲ. ಶಂಕರ್‌ ಪಾಟೀಲ್‌ ಮುನೇನಕೊಪ್ಪ ಅವರು ಪ್ರೆಸ್ ಮೀಟ್ ಕರೆದದ್ದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Jagadish Shettar: A Lot Of People Are Joining Congress Because Of The System In BJP

ನಾನು ಶಂಕರ್‌ ಪಾಟೀಲ್‌ ಮುನೇನಕೊಪ್ಪ ಅವರೊಂದಿಗೆ ಮಾತನಾಡಿಲ್ಲ. ಈ ಬಗ್ಗೆ ನಾನು ಏನು ಹೇಳಲು ಬರಲ್ಲ. ಇನ್ನೂ ಹಲವಾರು ನಾಯಕರು ಬಿಜೆಪಿಯಿಂದ ನೊಂದು ಬರುತ್ತಿದ್ದಾರೆ. ಬಿಜೆಪಿ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ನಾಯಕನಿಲ್ಲದೆ ಸೊರಗುತ್ತಿದೆ. ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇದುವರೆಗೂ ನೇಮಕ ಮಾಡಲಾಗುತ್ತಿಲ್ಲ ಅವರಿಗೆ ಈ ರೀತಿ ಶೋಚನಿಯ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರಲಿಲ್ಲ ಎಂದು ಹೇಳಿದರು.

ಹೊರಟ್ಟಿ ಅವರಿಗೆ ಚೀಟಿ ಎತ್ತಿ ತಾತ್ಕಾಲಿಕವಾಗಿ ಯಾದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದಿದ್ದೆ. ರಾಜ್ಯದ ಬಿಜೆಪಿ ನಾಯಕರ ಮೇಲೆ ನಂಬಿಕೆ ಕೇಂದ್ರದವರಿಗೆ ಹೋಗಿದೆ. ಮೋದಿಯವರನ್ನು ಬರಮಾಡಿಕೊಳ್ಳಲು ಅವರಿಗೆ ಅವಕಾಶ ಇರಲಿಲ್ಲ. ಬಿಜೆಪಿ ರಾಜ್ಯ ನಾಯಕರಿಗೆ ಬೀದಿಗೆ ಬೀಳುವಂತ ಪರಿಸ್ಥಿತಿ ಬಂದಿದೆ. ಈಗಿನ ಬಿಜೆಪಿ ಪಕ್ಷ ದಿನದಿಂದ ದಿನಕ್ಕೆ ಅದೋಗತಿಗೆ ಹೋಗ್ತಾ ಇದೆ ಎಂದು ಕಿಡಿಕಾರಿದರು.

ಇನ್ನೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮಿನಿಮಮ್‌ 15 ಸೀಟ್‌ ಗೆಲ್ಲುತ್ತದೆ. ಕಾಂಗ್ರೆಸ್ ಬಲವಾಗಿ ಬೆಳಿಯುತ್ತಿದೆ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ. ಇನ್ನೂ ಅಮಿತ್ ಶಾ ಅವರು ನನಗೆ ಕಾಲ್ ಮಾಡಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದರು. ರಾಜಕೀಯ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಮಾಡಿದ್ದರು ಎಂದು ಕಿಡಿಕಾರಿದರು.

ಜೋಶಿ ಪಕ್ಷ ನಿಷ್ಠೆ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ಪಕ್ಷ ನಿಷ್ಠೆ ಜಗದೀಶ್ ಶೆಟ್ಟರ್ ಗೆ ಇಲ್ಲಾ ಅಂತ ನಾ? ಸುಕುಮಾರ್, ರಾಮದಾಸ್ ಅವರಿಗೆ ಪಕ್ಷಕ್ಕೆ ನಿಷ್ಠೆ ಇರ್ಲಿಲ್ವ ?
ಪಕ್ಷಕ್ಕೆ ನಿಷ್ಠೆ ಅಂತ ಹೇಳಲಿಕ್ಕೆ ನಿಮಗೇನು ಅರ್ಹತೆ ಇದೆ ? ಎಂದು ಪ್ರಶ್ನಿಸಿದ ಅವರು, ಪಕ್ಷಕ್ಕಾಗಿ ಕೆಲಸ ಮಾಡಿದವರನ್ನೆಲ್ಲಾ ಹೊರಗೆ ಹಾಕ್ತಾ ಇದ್ದಾರೆ ಇವರು. ಜೋಶಿ ಆಗಲಿ ಯಾರಿಗೂ ಅರ್ಹತೆ ಇಲ್ಲಾ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಗೆ ಅಸ್ತಿತ್ವದ ಪ್ರಶ್ನೆ ಬರ್ತಾ ಇದೆ. ಒಟ್ಟಾರೆ ಬಹುತೇಕ ಮುಖಂಡರು ಬಿಜೆಪಿಯಿಂದ ಬಂದೇ ಬರ್ತಾರೆ, ಬಿಜೆಪಿ ಗ್ರೌಂಡ್ ಲೆವೆಲ್ ಕಾರ್ಯಕರ್ತರು ನನಗೆ ಕರೆ ಮಾಡಿ ಕೇಳ್ತಾರೆ. ಇದನ್ನೆಲ್ಲಾ ಸಮಯ ಬಂದಾಗ ತಿಳಿಸ್ತೀನಿ. ಯಾರಿಗೂ ಪಕ್ಷ ಬಿಟ್ಟು ಬನ್ನಿ ಅಂದಿಲ್ಲ ಅವರಾಗಲೇ ನನಗೆ ಕರೆ ಮಾಡ್ತಾ ಇದ್ದಾರೆ.ಬಹಳ ಜನ ಕಾಂಗ್ರೆಸ್ ಗೆ ಬರ್ತಾರೆ, ಅವರ ಹೆಸರುಗಳನ್ನ ನಾನು ಈಗ ಬಹಿರಂಗ ಪಡಿಸುವುದಿಲ್ಲ ಎಂದು ಜಗದೀಶ್‌ ಶೆಟ್ಟರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+