• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡ್ಯೂರಪ್ಪ ಹೆಸರು ಈಗ ಯಡಿಯೂರಪ್ಪ ಎಂದು ಬದಲಾಗಿದ್ದೇಕೆ?

|

ಬೆಂಗಳೂರು, ಜುಲೈ 26: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಹೆಸರು ಮತ್ತೆ ಬದಲಾಗಿದೆ. ಯಡ್ಯೂರಪ್ಪ ಹೆಸರು ಈಗ ಯಡಿಯೂರಪ್ಪ ಎಂದು ಬದಲಾಯಿಸಲಾಗಿದೆ. ಹೆಸರು ಬದಲಾವಣೆ ಬಗ್ಗೆ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿಲ್ಲ. ಆದರೆ, ಅಧಿಕೃತ ಖಾತೆಗಳಲ್ಲಿ ಹೆಸರು ಬದಲಾಯಿಸಲಾಗಿದೆ.

BS Yeddyurappa ಈಗ ಬದಲಾಗಿ ಮತ್ತೊಮ್ಮೆ BS Yediyurappa ಎಂದು ಬದಲಾಗಿದ್ದಾರೆ. ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ನಿಜ ನಾಮಧೇಯ, 2007ರಲ್ಲಿ ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ತಮ್ಮ ಹೆಸರಿನ ಇಂಗ್ಲೀಷ್ ಸೆಲ್ಪಿಂಗ್ ಬದಲಾಯಿಸಿದ್ದರು. I ಅಕ್ಷರ ತೆಗೆದು D ಅಕ್ಷರ ಹೆಚ್ಚಿಗೆ ಸೇರಿಕೊಂಡಿದ್ದರು.

ಸಿಎಂ ಆಗುವ ಉತ್ಸಾಹದ ಬೆನ್ನಲ್ಲೇ ಮತ್ತೆ ಹೆಸರು ಬದಲಿಸಿಕೊಂಡ ಯಡಿಯೂರಪ್ಪ? ಸಿಎಂ ಆಗುವ ಉತ್ಸಾಹದ ಬೆನ್ನಲ್ಲೇ ಮತ್ತೆ ಹೆಸರು ಬದಲಿಸಿಕೊಂಡ ಯಡಿಯೂರಪ್ಪ?

2008ರಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿ, ಯಡಿಯೂರಪ್ಪ ನೇತೃತ್ವದಲ್ಲಿ 112 ಸ್ಥಾನ ಗೆದ್ದು ಅಧಿಕಾರ ಸ್ಥಾಪಿಸಿತ್ತು. ಆದರೆ, ನಂತರ ಯಡಿಯೂರಪ್ಪ ಅವರ ಹಾದಿ ಅಷ್ಟು ಸುಗುಮವಾಗಿರಲಿಲ್ಲ.

2007ರಿಂದ 2018ರ ಅವಧಿಯಲ್ಲಿ ಮೂರು ಬಾರಿ ಅಲ್ಪಾವಧಿ ಸರ್ಕಾರವನ್ನು ಯಡಿಯೂರಪ್ಪ ಕಂಡಿದ್ದಾರೆ. 2007ರಲ್ಲಿ 7 ದಿನ, 2008ರಲ್ಲಿ 3 ವರ್ಷ ಹಾಗೂ 2018ರಲ್ಲಿ 55ಗಂಟೆಗಳ ಕಾಲ ಅಧಿಕಾರ ಅನುಭವಿಸಿದರು.

BS Yeddyurappa Oath Live: ರಾಜಕೀಯ ಅನಿಶ್ಚಿತತೆ ನಡುವೆ ಸಿಎಂ ಆಗಲು ಯಡಿಯೂರಪ್ಪ ತಯಾರಿBS Yeddyurappa Oath Live: ರಾಜಕೀಯ ಅನಿಶ್ಚಿತತೆ ನಡುವೆ ಸಿಎಂ ಆಗಲು ಯಡಿಯೂರಪ್ಪ ತಯಾರಿ

ಒನ್ಇಂಡಿಯಾಕ್ಕೆ ಲಭ್ಯ ಮಾಹಿತಿಯಂತೆ Yeddyurappa ಸ್ಪೆಲ್ಲಿಂಗ್ ಬದಲಾವಣೆಗೆ ಜ್ಯೋತಿಷಿಗಳು ಸೂಚನೆ ನೀಡಿದ್ದರಿಂದ ಮತ್ತೊಮ್ಮೆ Yediyurappa ಎಂದು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆ @bsybjp ಯಲ್ಲೂ ಬದಲಾಯಿಸಲಾಗಿದೆ. ಇದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಬರೆದಿದ್ದ ಪತ್ರದಲ್ಲೂ ಹಳೆ ಸ್ಪೆಲ್ಲಿಂಗ್ ಬಳಸಲಾಗಿತ್ತು.

English summary
Bhookanakere Siddalingappa Yediyurappa was the original name. However in 2007, he was advised a name change, following which he spelt it as Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X