ಚೀನಾ ವಸ್ತುಗಳ ಬಹಿಷ್ಕಾರ ಸುಲಭದ ಮಾತಲ್ಲ: ಮಾಜಿ ಸಿಎಂ ಎಚ್‌ಡಿಕೆ

ಬೆಂಗಳೂರು, ಜೂ. 19: ಭಾರತ-ಚೀನಾ ಗಡಿಯಲ್ಲಿ ಘರ್ಷಣೆ ಉಂಟಾದ ಬಳಿಕ ಮತ್ತೆ ಚೀನಾ ವಸ್ತುಗಳ ಬಳಕೆ ನಿಷೇಧಿಸುವ ಮಾತುಗಳು ಕೇಳಿ ಬಂದಿವೆ. ಸಾರ್ವಜನಿಕ ವಲಯದಲ್ಲಿಯೂ ಈ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಏಕಾಏಕಿ ಚೀನಾ ವಸ್ತುಗಳನ್ನು ಬಳಕೆ ನಿಲ್ಲಿಸಿ, ಆ ಮೂಲಕ ಚೀನಾ ಆರ್ಥಿಕತೆಗೆ ಪೆಟ್ಟು ಕೊಡುವುದು ಚರ್ಚೆಯ ಉದ್ದೇಶ.

ಗಡಿಯಲ್ಲಿ ಚೀನಾ ಖ್ಯಾತೆ ತೆಗೆದ ತಕ್ಷಣ ದೇಶದಲ್ಲಿ ಚೀನಾ ವಸ್ತುಗಳನ್ನು ಬಿಡಿ ಎಂಬ ಅಭಿಯಾನಗಳು ಶುರುವಾಗಿವೆ. ಚೀನಾ ದೇಶದ ಬಲ ಅದರ ಆರ್ಥಿಕತೆ. ಆ ಆರ್ಥಿಕತೆಗೆ ಭಾರತದ ಕೊಡುಗೆ ದೊಡ್ಡದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೇವಲ ಟಿವಿಗಳನ್ನು ಒಡೆದು ಹಾಕುವುದು, ಚೀನಾ ಮೇಡ್ ಮೊಬೈಲ್‌ಗಳನ್ನು ಬೀಸಾಕುವುದರಿಂದ ಚೀನಾದ ಆರ್ಥಿಕತೆಗೆ ಏನೂ ಆಗುವುದಿಲ್ಲ. ಅದರಿಂದ ನಮಗೆ ಮತ್ತಷ್ಟು ನಷ್ಠ.

ಚೀನಾದೊಂದಿಗೆ ಪೈಪೋಟಿ ನಡೆಸಲು ಸಾಕಷ್ಟು ಮುಂದಾಲೋಚನೆ ಬೇಕು. ಪೂರ್ವ ತಯಾರಿ ಬೇಕು. ಅದನ್ನು ಹಿಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಮಾಡಲು ಯೋಜನೆ ರೂಪಿಸಿದ್ದೇವು ಎಂದಿದ್ದಾರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ. ಹಾಗಾದ್ರೆ ಅವರು ಮಾಡಿಕೊಂಡಿದ್ದ ತಯಾರಿ, ಯೋಜನೆ ಏನು? ಮುಂದೆ ಓದಿ.

ಮೈತ್ರಿ ಮಾದರಿ

ಮೈತ್ರಿ ಮಾದರಿ

ಗಡಿಯಲ್ಲಿ ಅಮಾಯಕರ ಬಲಿದಾನದ ನಂತರ ಕೆಲವರಿಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಜ್ಞಾನೋದಯವಾಗಿದೆ. ಆದರೆ, ನನ್ನ ಅಧಿಕಾರವಧಿಯಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಲಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ಘೋಷ ವಾಕ್ಯದಷ್ಟು ಸುಲಭವಲ್ಲ. ಅದಕ್ಕೆ ರಚನಾತ್ಮಕ ಯೋಜನೆಗಳು ಬೇಕು. ಮೈತ್ರಿ ಸರ್ಕಾರದ ಯೋಜನೆಗಳು ಅದಕ್ಕೆ ಮಾದರಿ ಎಂದು ಮಾಜಿ ಸಿಎಂ ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ. ಜೊತೆಗೆ ಹಿಂದೆಯೆ ತಮ್ಮ ಅಧಿಕಾರದಲ್ಲಿ ಚೀನಾ ವಸ್ತುಗಳನ್ನು ಕಟ್ಟಿ ಹಾಕಲು ಮಾಡಿದ್ದ ಪ್ರಯತ್ನಗಳನ್ನು ಹಂಚಿಕೊಂಡಿದ್ದಾರೆ.

ಚೀನಾದೊಂದಿಗೆ ಸ್ಪರ್ಧೆ

ಚೀನಾದೊಂದಿಗೆ ಸ್ಪರ್ಧೆ

ಚೀನಾ ಉತ್ಪನ್ನ ಬಹಿಷ್ಕರಿಸಿ ಎಂಬುದು ದೇಶದ ಆಶೋತ್ತರಗಳಲ್ಲಿ ಒಂದು. ಈ ಕೂಗು ಇತ್ತೀಚೆಗೆ ಹೆಚ್ಚು ಬಲಗೊಳ್ಳುತ್ತಿದೆ. ದೇಶದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಚೀನಾ ಉತ್ಪನ್ನಗಳಿಗೆ ನಮ್ಮ ಉತ್ಪನ್ನಗಳ ಮೂಲಕ ಸಡ್ಡು ಹೊಡೆಯಬೇಕೆಂಬ ಪರಿಕಲ್ಪನೆಯಡಿ 2018ರಲ್ಲಿ ‘Compete With China' ಎಂಬ ಯೋಜನೆಯನ್ನು ನಾನು ಸಿಎಂ ಆದಾಗ ರೂಪಿಸಲಾಗಿತ್ತು. ಆದರೆ ಅಂತಹ ಯಾವುದೇ ಯೋಜನೆಗಳು ಅಥವಾ ದೂರಾಲೋಚನೆ ಬಿಜೆಪಿ ಸರ್ಕಾರಕ್ಕೆ ಇಲ್ಲ ಎಂದು ಎಚ್‌ಡಿಕೆ ಆರೋಪಿಸಿದ್ದಾರೆ.

ಸ್ಪರ್ಧೆಗೆ ಕ್ಲಸ್ಟರ್

ಸ್ಪರ್ಧೆಗೆ ಕ್ಲಸ್ಟರ್

‘Compete With China' ಯೋಜನೆ ಜಾರಿಗೆ ತರಲು ನನ್ನ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಕಲಬುರ್ಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ತುಮಕೂರು, ಬೀದರ್‌ ಜಿಲ್ಲೆಗಳಲ್ಲಿ 9 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿತ್ತು.


ಆ ಜಿಲ್ಲೆಗಳಲ್ಲಿ ಕ್ಲಸ್ಟರ್‌ಗಳಲ್ಲಿ ಸ್ಥಾಪಿಸಿ ಚೀನಾದೊಂದಿಗೆ ಪೈಪೋಟಿ ನಡೆಸಲು ಅನಕೂಲವಾಗುವಂತೆ ಯೋಜನೆ ರೂಪಿಸಲಾಗತ್ತು ಎಂದು ಎಚ್‌ಡಿಕೆ ನೆನಪಿಸಿದ್ದಾರೆ.

ಬಿಜೆಪಿ ಸರ್ಕಾರ ಏನು ಮಾಡಿದೆ?

ಬಿಜೆಪಿ ಸರ್ಕಾರ ಏನು ಮಾಡಿದೆ?

ಸ್ಥಳೀಯರಿಗೆ ಉದ್ಯೋಗ ಒದಗಿಸುವುದು, ಚೀನಾಕ್ಕೆ ಸಿಕ್ಕಿರುವ ಮಾರುಕಟ್ಟೆಯನ್ನು ಕಸಿದು ನಮ್ಮವರಿಗೆ ಕೊಡುವುದು, ಆ ಮೂಲಕ ಚೀನಾ ಉತ್ಪನ್ನಗಳನ್ನು ಯಶಸ್ವಿಯಾಗಿ ಹೊರ ಹಾಕುವುದು ನನ್ನ ಉದ್ದೇಶವಾಗಿತ್ತು. ಆದರೆ, ಮೈತ್ರಿ ಸರ್ಕಾರದ ಈ ಯೋಜನೆಯನ್ನು ಇಂದಿನ ಸರ್ಕಾರ ಏನು ಮಾಡಿದೆ? ಮುಂದುವರೆಸಿಕೊಂಡು ಹೋಗಿದೆಯೋ ಇಲ್ಲವೋ ತಿಳಿಯದು ಎಂದು ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+