ಕಾಂಗ್ರೆಸ್ ನಾಯಕರು ಐಟಿ ಟಾರ್ಗೆಟ್; ಯಾರು, ಏನಂದರು?
ಬೆಂಗಳೂರು, ಅಕ್ಟೋಬರ್ 15 : ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಈ ದಾಳಿಯ ಬಳಿಕ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆ ಕಾರ್ಯ ವೈಖರಿ ಬಗ್ಗೆ ರಾಜ್ಯ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಆರಂಭವಾಗಿದೆ.
Recommended Video
ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ಮಂಗಳವಾರ ಪರಮೇಶ್ವರ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಡಿ. ಕೆ. ಶಿವಕುಮಾರ್ ಬಳಿಕ ಪರಮೇಶ್ವರ ಅವರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಲಾಗಿತ್ತಿದೆ.
ಡಾ. ಜಿ. ಪರಮೇಶ್ವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವಿನ ಬಳಿಕ ಪ್ರತಿಪಕ್ಷ ನಾಯಕರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಈ ಆರೋಪಗಳನ್ನು ತಳ್ಳಿ ಹಾಕುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಆಯ್ದ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಿರುವುದು ಅನುಮಾನ ಮೂಡಿಸಿದೆ" ಎಂದು ಹೇಳಿದ್ದಾರೆ. ಐಟಿ ದಾಳಿ ಬಗ್ಗೆ ಯಾರು, ಏನು ಹೇಳಿದರು? ಇಲ್ಲಿದೆ ಮಾಹಿತಿ.

ಆಯ್ದ ವ್ಯಕ್ತಿಗಳ ಮೇಲೆ ದಾಳಿಯಾಗುತ್ತಿದೆ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಮೂಲಕ ದೇಶದಲ್ಲಿ ಆಯ್ದ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣವನ್ನು ಮಾಡುತ್ತಿದೆ. ವಿರೋಧಿಗಳನ್ನು ಅವರ ಸುಪರ್ದಿಗೆ ತೆಗೆದುಕೊಳ್ಳಲು ಈ ರೀತಿ ಕೆಲಸವಾಗುತ್ತಿದೆ" ಎಂದು ದೂರಿದರು.

ರಾಜಕೀಯ ಎನ್ನುವುದು ಸರಿಯಲ್ಲ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಈ ಕುರಿತು ಮಾಹಿತಿ ನೀಡಿದ್ದು, "ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳ ನಾಯಕರ ಮೇಲೆ ಐಟಿ ದಾಳಿಯಾಗಿದೆ. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ನಡೆದ ದಾಳಿಗಳು ರಾಜಕೀಯವಾ?. ಈ ದಾಳಿಗಳನ್ನು ರಾಜಕೀಯ ದಾಳಿಗಳು ಎನ್ನುವುದು ಸರಿಯಲ್ಲ" ಎಂದರು.

ರಾಜಕೀಯ ಮಾಡುವುದು ಬೇಡ
"ಐಟಿ ದಾಳಿ ಮತ್ತು ಜಿ. ಪರಮೇಶ್ವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ವಿಷಯವನ್ನು ರಾಜಕೀಯಗೊಳಿಸುವುದು ಬೇಡ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಮ್ಮ ಮೇಲೂ ಐಟಿ ರೈಡ್ ಆಗಬಹುದು
ಮಧುಗಿರಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಕೆ. ಎನ್. ರಾಜಣ್ಣ, "ನಾಳೆ, ನಾಡಿದ್ದೂ ನಮ್ಮ ಮೇಲೂ ಐಟಿ ರೈಡ್ ಮಾಡಬಹುದು. ಐಟಿ ರೈಡ್ ಆಗಲಿದೆ ಎಂದು ಕೊಂಡಿದ್ದೇನೆ. ಅದಕ್ಕೆಲ್ಲಾ ತಯಾರಾಗಿದ್ದೇವೆ. ನಮಗೂ ಎಲ್ಲಾ ಕಡೆ ಇಂಟಲಿಜನ್ಸ್ ಇದೆ. ಮಾಹಿತಿ ಬರುತ್ತೆ" ಎಂದು ಹೇಳಿದರು.

ಕೊಲೆ ಮಾಡುವ ಉದ್ದೇಶವಿಲ್ಲ
ಕೋಲಾರ ಕ್ಷೇತ್ರದ ಬಿಜೆಪಿ ಸಂಸದ ಮುನಿಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, "ಐಟಿ, ಇಡಿ ಕೊಲೆ ಮಾಡುವ ಉದ್ದೇಶದಿಂದ ದಾಳಿ ಮಾಡುವುದಿಲ್ಲ. ದಾಳಿಗಳಿಂದ ಕೇವಲ ಬಿಜೆಪಿ ಮೇಲೆ ಎಲ್ಲರೂ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಐಟಿ ದಾಳಿಯಾಗಿದೆ" ಎಂದರು.












Click it and Unblock the Notifications