ಕೋವಿಡ್ ಪರೀಕ್ಷೆಗೆ ಮಾದರಿ ಕೊಟ್ಟಿದ್ದರೂ ಐಸೋಲೇಷನ್ ಕಡ್ಡಾಯ

ಬೆಂಗಳೂರು, ಜುಲೈ 13 : ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗೆ ಮಾದರಿ ಕೊಟ್ಟಿರುವ ಜನರು ಸಹ ಐಸೋಲೇಷನ್‌ನಲ್ಲಿ ಇರುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಹೇಳಿದೆ. ಉಲ್ಲಂಘನೆ ಮಾಡಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಆರೋಗ್ಯ ಇಲಾಖೆ ಸೋವಾರ ಈ ಕುರಿತು ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗೆ ಮಾದರಿ ಕೊಟ್ಟಿದ್ದಲ್ಲಿ ಫಲಿತಾಂಶ ಬರುವವರೆಗೂ ಆ ವ್ಯಕ್ತಿಗಳು ಐಸೋಲೇಷನ್‌ನಲ್ಲಿರುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಒಂದು ವೇಳೆ ಮಾದರಿ ಕೊಟ್ಟಿರುವ ವ್ಯಕ್ತಿ ಫಲಿತಾಂಶ ಬರುವುದಕ್ಕೂ ಮೊದಲು ಸಾರ್ವಜನಿಕ ಸ್ಥಳದಲ್ಲಿ ಸಂಚಾರ ನಡೆಸುವುದು, ಕಚೇರಿಗೆ ಹೋಗುವುದು, ಅನಗತ್ಯವಾಗಿ ತಿರುಗಾಡುವುದನ್ನು ಮಾಡುವಂತಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

Isolation Mandatory For Who Provided Sample For COVID Test

ಮಾದರಿ ಕೊಟ್ಟು ಫಲಿತಾಂಶ ಬರುವುದಕ್ಕೂ ಮೊದಲು ವ್ಯಕ್ತಿ ಐಸೋಲೇಷನ್ ನಿಮಯಗಳನ್ನು ಮೀರಿ ಸಂಚಾರ ನಡೆಸಿದರೆ ಸಾಂಕ್ರಾಮಿಕ ರೋಗಗಳ ಕಾಯಿದೆ 1897ರ ಅನ್ವಯ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನಯ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಕರ್ನಾಟಕ ಸರ್ಕಾರ ಸೋಂಕು ಹರಡುವಿಕೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಂಗಳವಾರ ರಾತ್ರಿ 8 ಗಂಟೆಯಿಂದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+