Breaking; ಚುನಾವಣೆ ಸನಿಹದಲ್ಲೇ ಸಿಎಂ ತವರು ಜಿಲ್ಲೆ ಎಸ್ಪಿ ಬದಲಾವಣೆ
ಬೆಂಗಳೂರು, ಜನವರಿ 12; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿ ಎಸ್ಪಿ ಬದಲಾವಣೆ ಮಾಡಲಾಗಿದೆ.
ಗುರುವಾರ ಕರ್ನಾಟಕ ಸರ್ಕಾರ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ ಅಧಿಕಾರಿಗಳಿಗೂ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಹನುಮಂತರಾಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಡಾ. ಶಿವಕುಮಾರ್ (2016 ಬ್ಯಾಚ್) ಹೊಸ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.

ಡಾ. ಶಿವಕುಮಾರ್ ಪೊಲೀಸ್ ಗುಪ್ತದಳದ ಎಸ್ಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿ ಎಸ್ಪಿಯಾಗಿ ನೇಮಿಸಲಾಗಿದೆ.
ಹಾವೇರಿ ಎಸ್ಪಿ ಹನುಮಂತರಾಯರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪೊಲೀಸ್ ಗುಪ್ತದಳದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
* ಡಾ. ವೈ. ಎಸ್. ರವಿ ಕುಮಾರ್ ಡಿಐಜಿ & ಆಯುಕ್ತರು ಕಲಬುರಗಿ ನಗರ ವರ್ಗಾವಣೆ. ಡಿಐಜಿ ಡಿಸಿಆರ್ ಇಯಾಗಿ ನೇಮಕ
* ಡಾ. ದಿವ್ಯಾ ವಿ. ಗೋಪಿನಾಥ್ ಎಸ್‌ಪಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ನಿರ್ದೇಶಕರಾಗಿ ನೇಮಕ
* ಚೇತನ್ ಆರ್. ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ನೇಮಕ
* ನಾರಾಯಣ ಎಂ. ಗುಪ್ತದಳದ ಎಸ್ಪಿ ಕೋಲಾರದ ಎಸ್ಪಿಯಾಗಿ ನೇಮಕ
* ಕೋಲಾರ ಎಸ್ಪಿ ಡಿ. ದೇವರಾಜ ವರ್ಗಾವಣೆ
* ಹಾವೇರಿ ಜಿಲ್ಲಾ ಎಸ್ಪಿ ಹನುಮಂತರಾಯ ವರ್ಗಾವಣೆ
* ಡಾ. ಶಿವಕುಮಾರ್ ಹಾವೇರಿ ಎಸ್ಪಿಯಾಗಿ ನೇಮಕ












Click it and Unblock the Notifications