ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಾಜಿನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗಂಗಾಧರ್ ಮೂರ್ತಿಯವರ ವಿಶೇಷ ಸಂದರ್ಶನ

100 ವರ್ಷದ ಮೊದಲು ರಾಜಾಜಿನಗರ ಕ್ಷೇತ್ರ ಹೇಗಿತ್ತೋ, ಈಗಲೂ ಹಾಗೇ ಇದೆ. ಏನು ಬದಲಾವಣೆಗಳು ಆಗಿಲ್ಲ. ಶಾಸಕರಾದ ಸುರೇಶ್ ಕುಮಾರ್ ಅವರಿಗೆ ಸಾಕಷ್ಟು ಅವಕಾಶವನ್ನ ಜನರು ನೀಡಿದ್ರೂ ಸಹ ಅದನ್ನ ಸುರೇಶ್ ಕುಮಾರ್ ಅವರು ಉಪಯೋಗಿಸಿಕೊಳ್ಳಲಿಲ್ಲ ಎಂದು ಶಾಸಕ ಸುರೇಶ್ ಕುಮಾರ್ ಕಾರ್ಯವ

|
Google Oneindia Kannada News

ಬೆಂಗಳೂರು,ಜನವರಿ26: ಕಾಂಗ್ರೆಸ್ ಹಾಗೂ ಬಿಜೆಪಿಗೆ ಪಕ್ಷಗಳಿಗೆ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡಲು ಬೇರೆ ವಿಷಯಗಳೇ ಇಲ್ಲ. ಹೀಗಾಗಿ ಕೊನೆಯ ಅಸ್ತ್ರವಾಗಿ ಅಪ್ಪ, ಮಕ್ಕಳ ಪಕ್ಷ ಅಂತ ಟೀಕೆ ಮಾಡುತ್ತಾರೆ ಎಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗಂಗಾಧರ ಮೂರ್ತಿ ಹೇಳಿದ್ದಾರೆ.

100 ವರ್ಷದ ಮೊದಲು ರಾಜಾಜಿನಗರ ಕ್ಷೇತ್ರ ಹೇಗಿತ್ತೋ, ಈಗಲೂ ಹಾಗೇ ಇದೆ. ಏನು ಬದಲಾವಣೆಗಳು ಆಗಿಲ್ಲ. ಶಾಸಕರಾದ ಸುರೇಶ್ ಕುಮಾರ್ ಅವರಿಗೆ ಸಾಕಷ್ಟು ಅವಕಾಶವನ್ನ ಜನರು ನೀಡಿದ್ರೂ ಸಹ ಅದನ್ನ ಸುರೇಶ್ ಕುಮಾರ್ ಅವರು ಉಪಯೋಗಿಸಿಕೊಳ್ಳಲಿಲ್ಲ ಎಂದು ಶಾಸಕ ಸುರೇಶ್ ಕುಮಾರ್ ಕಾರ್ಯವೈಖರಿ ಬಗ್ಗೆ 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಸಂದರ್ಶನದ ಹಲವು ವಿಚಾರಗಳು ಇಲ್ಲಿದೆ.

1. ರಾಜಾಜಿನಗರದಲ್ಲಿ ಕ್ಷೇತ್ರದಲ್ಲಿ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಯಾವ ರೀತಿಯಲ್ಲಿ ತಯಾರಿ ನಡೆಸುತ್ತಿದ್ದೀರಾ. ?

ಕಳೆದ 30 ವರ್ಷಗಳಿಂದಲೂ ಸಹ ಬೂತ್ ಮಟ್ಟದ ಕಾರ್ಯಕರ್ತನಾಗಿ ಕೆಲಸ ಆರಂಭಿಸಿದ್ದೇನೆ. ರಾಜಾಜಿ ನಗರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಸ್ತೆಗಳು ಸರಿಯಾಗಿಲ್ಲ. 100 ವರ್ಷದ ಮೊದಲು ರಾಜಾಜಿನಗರ ಕ್ಷೇತ್ರ ಹೇಗಿತ್ತೋ, ಈಗಲೂ ಹಾಗೇ ಇದೆ. ಏನು ಬದಲಾವಣೆಗಳು ಆಗಿಲ್ಲ.

ಶಾಸಕರು ಇಲ್ಲದೇಯೋ ಅಧಿಕಾರಿಗಳಿಂದ ಏನು ಕೆಲಸ ಆಗುತ್ತಿತ್ತೋ ಅಷ್ಟು ಕೆಲಸ ಆಗಿದೆ. ಶಾಸಕರಿಂದ ಏನು ಆಗಿಲ್ಲ. ರಾಜಾಜಿನಗರ ಕ್ಷೇತ್ರಕ್ಕೆ ನೆನಪಿನಲ್ಲಿ ಉಳಿಯುವಂತಹ ಕೆಲಸಗಳು ಏನು ಆಗಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗ್ಬೇಕು ಅಂದ್ರೆ ನಮ್ಮಂತವರಿಗೆ ಜನ ಅವಕಾಶವನ್ನ ಮಾಡಿಕೊಡಬೇಕು.

ಸುರೇಶ್ ಕುಮಾರ್ ಅವರಿಗೆ ಸಾಕಷ್ಟು ಅವಕಾಶವನ್ನ ನೀಡಿದ್ರೂ ಸಹ ಅದನ್ನ ಸುರೇಶ್ ಕುಮಾರ್ ಉಪಯೋಗಿಸಿಕೊಳ್ಳಲಿಲ್ಲ ಎಂದು ಶಾಸಕ ಸುರೇಶ್ ಕುಮಾರ್ ಕಾರ್ಯವೈಖರಿ ವಿರುದ್ದ ಅಸಮಾಧಾನ ಹೊರಹಾಕಿದರು.

Interview With Rajajinagar Constituency JDS Candidate Gangadhara Murthy

2. ಜೆಡಿಎಸ್ ಅಂದ್ರೆ ಅಪ್ಪ, ಮಕ್ಕಳ ಪಕ್ಷ ಎನ್ನುವುದು ಬಿಜೆಪಿಯ ಟೀಕೆ.?

ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರಾದೇಶಿ ಪಕ್ಷವಾದ ಜೆಡಿಎಸ್ ಪಕ್ಷವನ್ನ ಟೀಕೆ ಮಾಡಲು ಬೇರೆ ವಿಷಯಗಳೇ ಇಲ್ಲ. ದೇವೇಗೌಡರ ವಿರುದ್ಧವಾಗಿ ಮಾತನಾಡಲು ಒಂದು ವಿಷಯವೂ ಇಲ್ಲ, ಎರಡು ಬಾರಿ ಮುಖ್ಯಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿಯವರನ್ನ ಟೀಕೆ ಮಾಡಲು ಯಾವುದೇ ಅಸ್ತ್ರ ಇಲ್ಲ.

ಹೀಗಾಗಿ ಕೊನೆಯ ಅಸ್ತ್ರವಾಗಿ ಅಪ್ಪ, ಮಕ್ಕಳ ಪಕ್ಷ ಅಂತ ಟೀಕೆ ಮಾಡುತ್ತಾರೆ. ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅಷ್ಟೇ ಆಗಿದ್ರೆ ಕಳೆದ 60 ವರ್ಷಗಳಿಂದ ರಾಜಕಾರಣವನ್ನ ದೇವೇಗೌಡರು ಮಾಡಿದ್ದಾರೆ. ಎಷ್ಟೋ ಜನ ಈ ಪಕ್ಷದಿಂದ ಬೆಳೆದು, ಅಧಿಕಾರವನ್ನ ಅನುಭವಿಸಿ, ಬೇರೆ ಪಕ್ಷಕ್ಕೆ ಹೋಗಿದ್ದಾರೆ.

ಹಾಗಾದ್ರೆ ಅವರೇಲ್ಲಾ ಬೆಳೆಯಲೇ ಇಲ್ವಾ.? ದೇವೇಗೌಡರ ಕೈ ಕೆಳಗಡೆ ಕುಟುಂಬದಿಂದ ಇಬ್ಬರು ಅಥವಾ ಮೂವರು ಬಿಟ್ರೆ ಅತ್ತಿಹೆಚ್ಚಾಗಿ ಬೆಳೆದಿರುವುದು ಬೇರೆ ಬೇರೆ ನಾಯಕರೇ. ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದಲ್ಲಿ ಇದ್ದವರೇ. ಬಿಜೆಪಿಗೆ ಏನು ಟೀಕೆ ಮಾಡಲು ಸಿಗದೇ ಇದ್ದಾಗ ಕೊನೆಯ ಅಸ್ತ್ರವಾಗಿ ಅಪ್ಪ, ಮಕ್ಕಳ ಪಕ್ಷ ಅಂತ ಟೀಕೆ ಮಾಡುತ್ತಾರೆ. ಆದರೆ ಅದು ಸತ್ಯವಲ್ಲ.

3. ಚುನಾವಣೆ ಹೊತ್ತಲಿ ಜೆಡಿಎಸ್ ನ ಸಾಕಷ್ಟು ಜನರು ಪಕ್ಷ ಬಿಡಲು ಕಾರಣವೇನು.?

ಕಾಂಗ್ರೆಸ್ ಪಾರ್ಟಿ ದುಡಿಸಿಕೊಳ್ಳುತ್ತದೆ, ಹಾಗೇ ಪಕ್ಕಕ್ಕೆ ತಳುತ್ತದೆ. ವೈ ಎಸ್ ವಿ ದತ್ತ ರವರು ದೇವೇಗೌಡರಿಗೆ ಇಂತಹ ಇಳಿ ವಯಸ್ಸಿನಲ್ಲಿ ಕೈ ಕೊಟ್ಟಿದ್ದು, ಪಾರ್ಟಿ ಬಿಟ್ಟು ಹೋಗಿದ್ದು ನೋವಿನ ಸಂಗತಿ. ನಮಗೆ ದ್ರೋಹ ಮಾಡಿದ್ದಾರೆ ಎಂದು ನಾನು ಹೇಳಲ್ಲ.

ದೇವೇಗೌಡರಿಗೆ ದ್ರೋಹ ಮಾಡಿ ಹೋಗಿದ್ದಾರೆ. ದೇವೇಗೌಡರು ವೈ ಎಸ್ ವಿ ದತ್ತ ವರನ್ನ ಎಂಎಲ್ ಎ ಮಾಡಿದ್ರೂ, ಎಂ ಎಲ್ ಸಿ ಮಾಡಿದ್ರೂ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ರೂ , ದೇವೇಗೌಡರಿಗೊಸ್ಕರನಾದ್ರೂ ಪಾರ್ಟಿಯಲ್ಲಿ ಇರ್ಬೇಕಿತ್ತು. ಅವರು ಪಾರ್ಟಿ ಬಿಟ್ಟಿದ್ದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಇಲ್ಲ.

4. ರಾಜಾಜಿನಗರದಲ್ಲಿ ಪ್ರಬಲ ಆಕಾಂಕ್ಷಿಗಳಿದ್ದಾರೆ, ಇವರ ಜೊತೆಗೆ ಸ್ಪರ್ಧೆಗೆ ಯಾವ ರೀತಿಯ ತಯಾರಿ ನಡೆಸಿದ್ದೀರಾ. ?

ರಾಜಾಜಿನಗರದ ಸ್ಥಳೀಯ ನಾನು. ಕಾಂಗ್ರೆಸ್ ನಲ್ಲಿ ಪದ್ಮಾವತಿಯನ್ನ ಬಿಟ್ಟು ಇನ್ನೂ ಎಲ್ಲಾರೂ ಸ್ಥಳೀಯರಲ್ಲ. ನಾನು ಸ್ಥಳೀಯನಾಗಿರುವುದರಿಂದ ನನಗೆ ಹೆಚ್ಚಿನ ಆದ್ಯತೆ ಸಿಗುತ್ತೆ ಎನ್ನುವ ಭಾವನೆ ಎಂದರು.

Interview With Rajajinagar Constituency JDS Candidate Gangadhara Murthy

5. ಬೆಂಗಳೂರು ನಗರ ಭಾಗದಲ್ಲಿ ಜೆಡಿಎಸ್ ಮತಗಳು ಕಡಿಮೆ ಪ್ರಮಾಣದಲ್ಲಿದೆ. ಯಾವ ಅಭಿವೃದ್ದಿ ಕೆಲಸಗಳನ್ನ ಮುಂದಿಟ್ಟು ಜನರ ಬಳಿ ಹೋಗುತ್ತಿರಾ. ?

ಜೆಡಿಎಸ್ ಮತಗಳು ಕಡಿಮೆ ಅಂತ ಇಲ್ಲ. ಅಧಿಕಾರ ಅನುಭವಿಸಿದ ನಾಯಕರುಗಳು ಪಾರ್ಟಿ ಬಿಟ್ಟು ಹೋಗಿದ್ದಾರೆ. ಅವರು ಪಾರ್ಟಿ ಬಿಟ್ಟು ಹೋಗಿದ್ದಾರೆ ಹೊರೆತು ಕಾರ್ಯಕರ್ತರು ಪಾರ್ಟಿ ಬಿಟ್ಟು ಹೋಗಿಲ್ಲ. ವೋಟರ್ಸ್ ಗೆ ರೀಚ್ ಆಗುವಂತಹ ನಾಯಕರು ಬೇಕಿತ್ತು. ಹಾಗಾಗಿ ನಮ್ಮಂತವರಿಗೆ ಅವಕಾಶ ಸಿಕ್ಕಿದೆ.

6. ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಪಂಚರತ್ನ ರಥಯಾತ್ರೆ ಯಾವಾಗ. ?

ಗ್ರಾಮೀಣ ಭಾಗದಲ್ಲಿ ಈಗಾಗಲೇ ಪಂಚರತ್ನ ರಥಯಾತ್ರೆ ನಡೆಯುತ್ತಿದೆ. ಬೆಂಗಳೂರು ಭಾಗದಲ್ಲಿ ಈಗಾಗಲೇ ಜನತಾ ಮಿತ್ರ ಎಂಬ ಕಾರ್ಯಕ್ರಮ ಆಗಿದೆ. ಅದು ಬೆಂಗಳೂರಿನ ಜನರ ಸಮಸ್ಯೆಗೆ ಹೇಗೆ ಸ್ಪಂದಿಸಬೇಕು ಹಾಗೂ ಜನರ ಬೇಡಿಕೆಗಳೇನು ಎಂಬುದನ್ನ ಜನರಿಂದ ನಾವು ಪಡೆದುಕೊಂಡಿದ್ದೇವೆ.

ಮುಂದಿನ ಪ್ರಣಾಳಿಕೆಯಲ್ಲಿ ನಾವು ಬಿಡುಗಡೆ ಮಾಡುತ್ತೇವೆ. ಅದರ ಜೊತೆಗೆ ಬೆಂಗಳೂರಿನಲ್ಲಿ ಪಂಚರತ್ನರಥಯಾತ್ರೆಯನ್ನ ಶೀಘ್ರದಲ್ಲಿ ಮಾಡುತ್ತೇವೆ.

7. ಮಿಷನ್ 123 ಸ್ಥಾನ ಗೆಲ್ಲಲು ಜೆಡಿಎಸ್ ಪಕ್ಷದಿಂದ ಯಾವವ ರೀತಿಯಲ್ಲಿ ತಯಾರಿಯಾಗಿದೆ. ?

ನಾವು ಘೋಷಣೆ ಮಾಡಿರುವ ಪಂಚರತ್ನರಥಯಾತ್ರೆ ಕಾರ್ಯಕ್ರಮ ಕರ್ನಾಟಕದ ಅಭಿವೃದ್ದಿಗಾಗಿ ಮಾಡಿರುವ ಕಾರ್ಯಕ್ರಮ. ಈ ಕಾರ್ಯಕ್ರಮವನ್ನ ಐದು ವರ್ಷದಲ್ಲಿ ಪೂರೈಸಿದ್ರೆ ಕರ್ನಾಟಕದ ಜನತೆ ಸುಭಿಕ್ಷಾವಾಗಿ ಇರುತ್ತಾರೆ. ಪಂಚರತ್ನರಥಯಾತ್ರೆಯಿಂದ ಜನಾಭಿಪ್ರಾಯ ಬದವಲಾಗಿದೆ.

ಬಿಜೆಪಿಯಿಂದ ಜನ ಸಂಕಲ್ಪಯಾತ್ರೆ, ಕಾಂಗ್ರೆಸ್ ನಿಂದ ಪ್ರಜಾಧ್ವನಿಯಾತ್ರೆ ಮಾಡುತ್ತಿದ್ದಾರೆ. ಆ ಕಾರ್ಯಕ್ರಮಗಳಿಗೆ ತಂದ ಜನ ಇದ್ದಾರೆ, ಬಂದ ಜನ ಇಲ್ಲ. ತಂದ ಜನ ಅಂದ್ರೆ ಹಣ,ಬಸ್ , ಊಟ ತಿಂಡಿ ಎಲ್ಲಾ ಕೊಟ್ಟು ತಂದಿರುವಂತದ್ದು, ಜನರನ್ನ ಕರೆಸಿ ಭಾಷಣ ಮಾಡ್ತಾ ಇಲ್ಲ ನಾವು ಜನರ ಮನೆ ಬಾಗಿಲಿಗೆ ಹೋಗುತ್ತಿದ್ದೇವೆ. ಜನ ಈ ಬಾರೀ ಖಂಡಿತ ನಮ್ಮನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ.

Interview With Rajajinagar Constituency JDS Candidate Gangadhara Murthy

8. ಕುಮಾರಸ್ವಾಮಿ ಎಲ್ಲೇ ಹೋದ್ರು ಜನ ಸೇರ್ತಾರೆ ಆದ್ರೆ ಮತ ಹಾಕಲ್ಲ ಎಂಬುದು ಬಿಜೆಪಿ ಟೀಕೆ. ?

ತಂದ ಜನರ ಮುಂದೆ ಭಾಷಣ ಮಾಡಿದ್ರೆ ಅದು ಅಷ್ಟಾಗಿ ಪರಿಣಾಮ ಬೀರಲ್ಲ. ಈ ಬಾರಿ ನಮ್ಮದು ತಂದ ಜನ ಅಲ್ಲ, ಬಂದ ಜನ. ನಮಗೆ ಸಂಪೂರ್ಣ ಕಬಹುಮತ ಕೊಟ್ರೆ ನನ್ನ ಕಾರ್ಯಕ್ರಮಗಳನ್ನ ತರ್ತಿನಿ. ಕರ್ನಾಟಕ ಜನತೆಗೆ ಯಾವ ಮುಖ್ಯಮಂತ್ರಿ ಇದ್ರೆ ಭೇಟಿಗೆ ಅವಕಾಶ ಸಿಗುತ್ತೇ ಹೇಳಿ.

ಕುಮಾರಸ್ವಾಮಿ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತಾರೆ. ಸಮ್ಮಿಶ್ರ ಸರ್ಕಾರ ಅವದಿಯಲ್ಲಿ ರೈತರ ಸಾಲಮನ್ನಾ ಮಾಡಿದ್ರೂ. ಹೀಗಾಗಿ ಜನರಿಗೆ ಒಂದು ಭರವಸೆ ಇದೆ ಜನರಿಗೆ ಕುಮಾರಸ್ವಾಮಿ ಮಾತು ಕೊಟ್ಟಿದ್ದನ್ನ ಉಳಿಸಿಕೊಂಡು ಹೋಗುತ್ತಾರೆ ಅಂತ. ಹಾಗಾಗಿ ಭರವಸೆ ಇದೆ.

9. ದೇವೇಗೌಡನ್ನ ಹೊರತು ಪಡಿಸಿದ್ರೆ ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಮಾತ್ರ ಪ್ರಭಾವಿ ನಾಯಕರಾಗಿ ಕಾಣುತ್ತಾರೆ ಅವರನ್ನ ಬಿಟ್ಟು ಯಾಕೆ ಯಾರು ನಾಯಕರಾಗಿ ಗುರುತಿಸಿಕೊಳ್ಳುತ್ತಿಲ್ಲ.

ನನಗೆ ಅವಕಾಶ ಸಿಕ್ಕಿದೆ ಅಂದ್ರೆ, ನನ್ನ ಗುರುತಿಸಿಯೇ ಅಲ್ವಾ ಟಿಕೆಟ್ ನೀಡಿರೋದು. 20 ಜನ ನಾಯಕರಿರುವ ಕಡೆ ಒಗ್ಗಟ್ಟು ಇಲ್ಲ. ಕಿತ್ತಾಟಗಳು ಹೆಚ್ಚಾಗಿವೆ. ಕರ್ನಾಟಕದಲ್ಲಿ ಇದುವರೆಗೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮೇಲೆ ಯಾವುದೇ ಭ್ರಷ್ಟಚಾರದ ಆರೋಪಗಳಿಲ್ಲ.

ಜೆಡಿಎಸ್ ನಲ್ಲಿ ನಾಯಕರೇ ಇಲ್ಲ ಅಂತ ಹೇಳ್ತಾರೆ ಅಲ್ವಾ. ನಾಯಕರಿಲ್ಲ ಅಂತ ಯಾಕೆ ನಮ್ಮ ಪಕ್ಷದವರನ್ನ ಕರೆದುಕೊಂಡು ಹೋಗುತ್ತಿದ್ದಾರೆ. ? ಅವರೇಲ್ಲಾ ನಮ್ಮಲ್ಲಿ ಬೆಳೆದವರು ತಾನೇ, ಅವರನ್ನ ನಾಯಕರು ಅಂತನೇ ಕರೆದುಕೊಂಡು ಹೋಗುತ್ತಿದ್ದಾರೆ. ವೈ ಎಸ್ ವಿ ದತ್ತ ಒಬ್ಬ ಲೀಡರ್ ಅದಕ್ಕಾಗಿ ಅವರನ್ನ ಕರೆದುಕೊಂಡು ಹೋಗುತ್ತಿದ್ದಾರೆ. ಎಲ್ಲಾ ಪಾರ್ಟಿಯಲ್ಲೂ ಅಪ್ಪ, ಮಕ್ಕಳಿದ್ದಾರೆ.

10. ನಮ್ಮ ನೆರೆಹೊರೆ ರಾಜ್ಯದಲ್ಲಿ ಜೆಡಿಎಸ್ ಪ್ರಬಲವಾಗಿ ಬೆಳೆಯುತ್ತಿದೆ ಜೊತೆಗೆ ಅಧಿಕಾರವನ್ನ ನಡೆಸುತ್ತಿವೇ ಆದ್ರೆ ಕರ್ನಾಟಕದಲ್ಲಿ ಯಾಕೆ ಜೆಡಿಎಸ್ ಪಕ್ಷ ಪ್ರಬಲವಾಗಿ ಬೆಳೆಯುತ್ತಿಲ್ಲ.

ಇಡೀ ದೇಶದಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನ ಮುಗಿಸಿದ ಕೀರ್ತಿ ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಲ್ಲುತ್ತದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳು ಉಳಿಯಲು ಕಾರಣ ಅಂದ್ರೆ ಅಲ್ಲಿ ಭಾಷಾಭಿಮಾನ ಹೆಚ್ಚಾಗಿದೆ. ನಮ್ಮಲ್ಲಿ ಕಾಂಗ್ರೆಸ್, ಬಿಜೆಪಿ ಯವರು ಮಾಡಿರುವ ದ್ರೋಹ ಜನರಿಗೆ ಈಗ ಗೊತ್ತಾಗುತ್ತಿದೆ.

ಏನಾದ್ರೂ ಪರಿಹಾರ ಸಿಗ್ಬೇಕು ಅಂದ್ರೆ ಅದು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎಂದು ಜನರಿಗೆ ಈಗ ಗೊತ್ತಾಗಿದೆ. ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳನ್ನ ಜನರು ತಿರಸ್ಕರ ಮಾಡುತ್ತಾರೆ.

Interview With Rajajinagar Constituency JDS Candidate Gangadhara Murthy

11. ಈ ಬಾರೀ ಚುನಾವಣಾ ಫಲಿತಾಂಶ ಅತಂತ್ರ ಆದ್ರೆ ಜೆಡಿಎಸ್ ಯಾವ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತದೆ.

ಇವತ್ತಿನ ಪಂಚರತ್ನ ರಥಯಾತ್ರೆ ನೋಡಿದಾಗ ಅಂತಹ ಪರಿಸ್ಥಿತಿ ಬರಲ್ಲ. ಒಂದು ವೇಳೆ ಬಂದ್ರೆ ವಿರೋಧ ಪಕ್ಷದಲ್ಲಿ ಕೂರುತ್ತೇನೆ ಯಾವುದೇ ಪಕ್ಷದ ಜೊತೆಗೆ ಅಧಿಕಾರ ಮಾಡಲ್ಲ ಅಂತ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಇದುವರೆಗೂ ಈ ಬಗ್ಗೆ ಹೇಳಿಲ್ಲ. ಆದ್ರೆ ನಾವು ಹೇಳಿದ್ದೇವೆ.

12. ಜೆಡಿಎಸ್ ಪಕ್ಷ ಜಾತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೆ ಹಾಗಾಗಿ ರಾಜ್ಯದಲ್ಲಿ ಪ್ರಬಲವಾಗಿ ಬೆಳೆಯಲು ಆಗಲಿಲ್ಲ ಎನ್ನುವ ಆರೋಪ ಇದೆ.

ಚುನಾವಣೆ ಇಲ್ಲದೇ ಜಾತಿ ಇಲ್ಲ, ಜಾತಿ ಇಲ್ಲದೇ ಚುನಾವಣೆ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ. ಒಂದು ವೇಳೆ ದೇವೇಗೌಡರು ಒಕ್ಕಲಿಗರಿಗಷ್ಷೇ ನಾಯಕರಾಗಿದ್ರೆ. ಮಹಾನಾಯಕರ್ಯಾರು ಬೇರೆ ಪಕ್ಷಕ್ಕೆ ಹೋಗಿ ಅಧಿಕಾರ ಅನುಭವಿಸುತ್ತಿದ್ದಾರೆ ಅವರ್ಯಾರು ನಾಯಕರೇ ಆಗ್ತಾ ಇರ್ಲಿಲ್ಲ .

ಇದೆಲ್ಲಾ ಸುಳ್ಳು. ಸತ್ಯವನ್ನ ಮುಚ್ಚಿಡಲು ಈ ರೀತಿಯಾದ ಸುಳ್ಳನ್ನ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಈ ಪಕ್ಷದಲ್ಲಿ 46 ವರ್ಷದಲ್ಲಿ ಉಪಮುಖ್ಯಮಂತ್ರಿಯಾಗಿದ್ರೂ. ಕಾಂಗ್ರೆಸ್ ನಲ್ಲಿ ಬಿಜೆಪಿಯಲ್ಲಿ ಯಾರಾದ್ರೂ ಆ ವಯಸ್ಸಿನಲ್ಲಿ ಉಪಮುಖ್ಯಮಂತ್ರಿಯಾಗಿದ್ರಾ . ?

13. ಬೆಂಗಳೂರು ಭಾಗದ ಸಮಸ್ಯೆಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಯಶಸ್ವಿಯಾಗಿದಿಯಾ. ?

ಖಂಡಿತವಾಗಿಯೂ ಯಶಸ್ವಿಯಾಗಿಲ್ಲ. ಇವತ್ತಿನವರೆಗೂ ಮೇಕೆದಾಟು ಫೈನ್ ಮೂ ಆಗಿಲ್ಲ. 8 ವರ್ಷ ಬಿಜೆಪಿ ಸರ್ಕಾರ ಇದ್ರೂ ಏನು ಆಗಿಲ್ಲ. ಬಿಜೆಪಿ ಸರ್ಕಾರ ಪ್ರತಿಮೆಗಳನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಬೆಂಗಳೂರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.

ಬಿಜೆಪಿ ಲೂಟಿ ಮಾಡಲು ಬಂದು ಕೂತಿದೆ, ಅಭಿವೃದ್ದಿ ಮಾಡಲಪು ಅಲ್ಲ. ಜನರು ಸಹ ಅರಿತುಕೊಳ್ಳಬೇಕು. ಬಿಜೆಪಿ ಹಿಂದೂತ್ವ, ಕೋಮುವದಿಯಲ್ಲಿ ಬ್ಯಿಸಿಯಾಗಿದೆ ಹೊರೆತು ಅಭಿವೃದ್ದಿ ಮಾಡುತ್ತಿಲ್ಲ. ನಳಿನ್ ಕುಮಾರ್ ಕಟೀಲ್ ಹೇಳ್ತಾರೆ ಅಭಿವೃದ್ದಿ ವಿಚಾರವನ್ನ ಬಿಟ್ಟು ಹಿಜಾಬ್, ಲವ್ ಜಿಹಾದ್ ಬಗ್ಗೆ ಮಾತ್ನಾಡಿ ಎಂದಿದ್ದಾರೆ. ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಕೊಡುಗೆ ಶೂನ್ಯವಾಗಿದೆ ಎಂದು ಹೇಳಿದರು.

14. ಅಭಿವೃದ್ದಿ ವಿಚಾರ ಬಂದಾಗ ವಿರೋಧ ಪಕ್ಷಗಳಿಗೆ ಟೀಕೆ ಮಾಡುವುದೇ ಚಟವಾಗಿದೆ ಎಂದು ಬಿಜೆಪಿ ಆರೋಪ ಮಾಡುವುದು ಯಾಕೆ.?

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಎಷ್ಟು ಹಗರಣಗಳು ಬೆಳಕಿಗೆ ಬಂತು, ಆದರೇ ಯಾವುದಕ್ಕೂ ತಾರ್ಕಿಕ ಅಂತ್ಯ ಎಂಬುದು ಸಿಗ್ಲಿಲ್ಲ. ಹಲವಾರು ಹಗರಣಗಳ ಮೂಲಕ ದುಡ್ಡಡು ಮಾಡುಲು ರೆಡಿಯಾಗಿದ್ದಾರೆ ಹೊರೆತು ಯಾವುದೇ ಅಭಿವೃದ್ದಿ ಕಾರ್ಯಗಳು ಅವರಿಗೆ ಬೇಕಾಗಿಲ್ಲ. ಬೆಂಗಳೂರನ್ನ ಹೆಚ್ಚಾಗಿ ಕಡೆಗಣನೆ ಮಾಡಿದ್ದು ಬಿಜೆಪಿ ಸರ್ಕಾರ.

15. 40% ಕಮಿಷನ್ ಆರೋಪ ಸತ್ಯಕ್ಕೆ ದೂರುವಾದದ್ದು ಎಂದು ಬಿಜೆಪಿ ತಳ್ಳಿಹಾಕಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು..?

ಈ ಸರ್ಕಾರ ಬಂದಿದ್ದೆ ಅಕ್ರಮ ದಾರಿಯಲ್ಲಿ. ಸಾವಿರಾರು ಕೋಟಿ ರೂಪಾಯಿಗಳನ್ನ ಖರ್ಚು ಮಾಡಿ ಶಾಸಕರನ್ನ ಖರೀದಿ ಮಾಡಿ,ಮಂತ್ರಿ ಮಾಡಿದ್ದಾರೆ. ಇದಕ್ಕೆಲ್ಲಾ ಖರ್ಚು ಮಾಡಿದ ಹಣವನ್ನ ತಿರಿಸಬೇಕು ಅದಕ್ಕಾಗಿ ಈ ರೀತಿಯಾಗುತ್ತಿದೆ. ಎಲ್ಲಾ ಸರ್ಕಾರದಲ್ಲೂ ಪರ್ಸಟೆಜ್ ಇದೆ ಆದ್ರೆ 40 % ಕಮಿಷನ್ ಇರುವುದು ಬಿಜೆಪಿಯಲ್ಲಿ ಎಂದು ಹೇಳಿದರು.

English summary
karnataka Assembly elections 2023; JDS Candidate Gangadhar Murthy Says Credit of Finishing All Regional Parties Goes To BJP and Congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X