ಪ್ರಜ್ವಲ್‌ ಕಾಮಕಾಂಡ ಕೇಳಿ ಬೆಚ್ಚಿಬಿದ್ದ ವಿದೇಶಿ ಮಾಧ್ಯಮಗಳು: ಜಗತ್ತಿನ ಅತೀ ದೊಡ್ಡ ಲೈಂಗಿಕ ಅಪರಾಧದ ಕುರಿತು ಎಡೆಬಿಡದೇ ಚರ್ಚೆ!

ಪ್ರಜ್ವಲ್ ರೇವಣ್ಣ ಮಾಡಿಕೊಂಡ ಎಡವಟ್ಟಿಗೆ ಇದೀಗ ಕರ್ನಾಟಕದ ಮಾನ ಜಗತ್ತಿನ ಮೂಲೆ ಮೂಲೆಯಲ್ಲೂ ಹರಾಜು ಆಗುತ್ತಿದೆ. ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕುರಿತು ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರ ಆಗುತ್ತಿದೆ. ಮತ್ತೊಂದು ಕಡೆ ಈ ಬಗ್ಗೆ ತೀವ್ರ ಆಕ್ರೋಶ ಕೂಡ ಮೊಳಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಜನ ಛೀ ಛೀ ಅಂತಿದ್ದಾರೆ. ವಿಡಿಯೋ ನೋಡಲು ಮುಂದೆ ಓದಿ.

ಹಾಸನದಲ್ಲಿ ರೋಡ್ ರೋಡ್‌ನಲ್ಲಿ ಸಿಗುತ್ತಿರುವ, ಪಾರ್ಕ್ & ಕ್ರೀಡಾಂಗಣದಲ್ಲಿ ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದ ಪೆನ್‌ಡ್ರೈವ್ ಒಳಗೆ, ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಖಾಸಗಿ ವಿಡಿಯೋ ಇವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪಗಳು ದೊಡ್ಡದಾಗಿ ಕಾಡ್ಗಿಚ್ಚು ಹೊತ್ತಿಸಿವೆ. ಇದೇ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೂಡ ಘಟನೆ ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚನೆ ಮಾಡಿ ತನಿಖೆಗೆ ಕೂಡ ಆದೇಶ ನೀಡಿದೆ. ಹೀಗಿದ್ದಾಗಲೇ ವಿದೇಶದಲ್ಲಿ ಕೂಡ, ಪ್ರಜ್ವಲ್ ಹೆಸರು ಪ್ರಜ್ವಲಿಸುತ್ತಿದ್ದು. ಅಶ್ಲೀಲ ವಿಡಿಯೋ ವೈರಲ್ ಕೇಸ್ ಬಗ್ಗೆ ವಿದೇಶಿ ಮಾಧ್ಯಮಗಳು ಚರ್ಚೆ ಮಾಡುತ್ತಿವೆ, ಆ ವಿಡಿಯೋ ನೋಡಲು ಮುಂದೆ ಓದಿ.

International Medeas Are Discussing About Prajwal Revanna Case

ವಿದೇಶದಲ್ಲೂ ಪ್ರಜ್ವಲಿಸಿದ ಪ್ರಜ್ವಲ್ ವಿಚಾರ

ಸಿಂಗಪುರದ ಪ್ರಮುಖ ಮಾಧ್ಯಮ ಒಂದು ಈ ಬಗ್ಗೆ ವರದಿ ಪ್ರಕಟಿಸಿದ್ದು, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಿಂದ ಈ ಕೃತ್ಯ ನಡೆದಿರುವ ಬಗ್ಗೆ ಚರ್ಚೆ ಮಾಡಿದೆ. ಅಲ್ಲದೆ ಇದೇ ಘಟನೆ ಆಧಾರವಾಗಿ ಇಟ್ಟುಕೊಂಡು ವಿರೋಧ ಪಕ್ಷಗಳು ಈಗ ಬಿಜೆಪಿ & ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ. ಮತ್ತೊಂದು ಕಡೆ ದಿನದಿಂದ ದಿನಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ದೊಡ್ಡ ಮಟ್ಟಕ್ಕೆ ಹೋಗುತ್ತಿದ್ದು, ಆದಷ್ಟು ಬೇಗ ವಿಚಾರಣೆ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ. ಈಗಾಗಲೇ ದೇಶಾದ್ಯಂತ ಈ ವಿಚಾರ ಸಂಚಲನ ಸೃಷ್ಟಿಸಿದ್ದು, ಈಗ ವಿದೇಶದಲ್ಲೂ ಸದ್ದು ಮಾಡುತ್ತಿದೆ.

ವಿದೇಶಕ್ಕೆ ಹೋಗಿರುವ ಪ್ರಜ್ವಲ್ ರೇವಣ್ಣ?

ಇದೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಸಂಸದ ಪ್ರಜ್ವಲ್ ರೇವಣ್ಣ ಈಗ ಭಾರತವನ್ನು ಬಿಟ್ಟು ಹೊರದೇಶಕ್ಕೆ ಹೋಗಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಜರ್ಮನಿಗೆ ಹೋಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಜ್ವಲ್ ಬಂಧನದ ತನಕವೂ ಯಾವುದೂ ಫೈನಲ್ ಆಗಲ್ಲ. ಹೀಗಾಗಿ ಪ್ರಜ್ವಲ್ ಅರೆಸ್ಟ್ ಆಗಬೇಕು, ಅವರನ್ನು ವಿಚಾರಣೆ ಮಾಡಬೇಕು ಎಂಬ ಒತ್ತಾಯ ಜನರಿಂದ ಕೇಳಿಬರುತ್ತಿದೆ. ಹೀಗಾಗಿ ಈ ಪ್ರಕರಣ ರಾಜಕೀಯ ತಿರುವು ಕೂಡ ಪಡೆಯುತ್ತಿದೆ.

ಒಟ್ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಅಶ್ಲಿಲ ವಿಡಿಯೋ ವೈರಲ್ ಆರೋಪ ಸದ್ಯಕ್ಕೆ ಸೈಲೆಂಟ್ ಆಗುವ ಯಾವುದೇ ಲಕ್ಷಣಗಳೂ ಕಂಡುಬರುತ್ತಿಲ್ಲ. ಹೀಗಾಗಿ ಇದೆಲ್ಲವೂ, ಎಲ್ಲಿಗೆ ಬಂದು ನಿಲ್ಲಲಿದೆ? ಮುಂದೆ ಈ ವಿಚಾರದ ಬಗ್ಗೆ ಏನೆಲ್ಲಾ ಚರ್ಚೆ ನಡೆಯಲಿದೆ? ಈ ಘಟನೆ ದೇಶದ ರಾಜಕೀಯದಲ್ಲಿ ಏನೆಲ್ಲಾ ಪರಿಣಾಮ ಬೀರಬಹುದು? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+