ಮದುವೆ ವಿಷಯದಲ್ಲಿ ತಮಿಳುನಾಡಿಗಿಂತ "ಕರ್ನಾಟಕ ಮಾಡೆಲ್" ಬೆಸ್ಟ್!
ತಮಿಳುನಾಡಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲೇ ಹೆಚ್ಚು ಅಂತರ್ಜಾತಿ ವಿವಾಹಗಳು ನಡೆಯುತ್ತಿವೆ ಎನ್ನುವ ಅಧ್ಯಯನ ವರದಿಯೊಂದು ಬಿಡುಗಡೆಯಾಗಿದೆ. ಈ ವರದಿ ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದೆ. ಇನ್ನು ಅಂತರ್‌ಜಾತಿ (ಒಂದು ಜಾತಿಯವರು ಮತ್ತೊಂದು ಜಾತಿಯವರನ್ನು ವಿವಾಹವಾಗುವುದು)ವಿವಾಹದ ಪ್ರಮಾಣದಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕ ದ್ವಿತೀಯ ಸ್ಥಾನದಲ್ಲಿ ಇದ್ದರೆ, ಭಾರತದ ಮಟ್ಟದಲ್ಲಿ ಟಾಪ್ 10 ಒಳಗೆ ಇದೆ. ಕರ್ನಾಟಕ ಅಂತರ್ಜಾತಿ ವಿವಾಹಕ್ಕೆ 12ನೇ ಶತಮಾನದಲ್ಲೇ ಸಾಕ್ಷಿಯಾಗಿದೆ. ಅನುಭವ ಮಂಟಪದ ಕಾಲದಲ್ಲೇ ನಮ್ಮ ಕರ್ನಾಟಕ ಅಂತರ್ಜಾತಿ ವಿವಾಹಕ್ಕೆ ತೆರೆದುಕೊಂಡಿತ್ತು. ಆದರೆ, ಅದು ದುರಂತ ಅಂತ್ಯ ಕಂಡಿತ್ತು.
ಅಂತರ್ಜಾತಿ ವಿವಾಹದ ವಿಚಾರದಲ್ಲಿ ನಾವು ತಮಿಳುನಾಡಿಗಿಂತ ಹಾಗೂ ದೇಶದ ಸರಾಸರಿಗಿಂತ ಹೆಚ್ಚಾಗಿ ಇದ್ದೇವೆ. ಭಾರತ ಮಾನವ (India Human Development Survey) ಅಭಿವೃದ್ಧಿ ಸಮೀಕ್ಷೆಯಲ್ಲಿ ದೇಶದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಅಂತರ್ಜಾತಿ ವಿವಾಹ ನಡೆಯುತ್ತಿದೆ ಎನ್ನುವುದನ್ನು ಉಲ್ಲೇಖಿಸಲಾಗಿದೆ. ಕರ್ನಾಟಕದಲ್ಲಿ 16.5 ರಷ್ಟು ಅಂತರ್ಜಾತಿ ವಿವಾಹ ನಡೆಯುತ್ತಿದ್ದರೆ, ತಮಿಳುನಾಡಿನಲ್ಲಿ ಕೇವಲ 2.6 ಪ್ರತಿಶತದಷ್ಟು ಮಾತ್ರ ಅಂತರ್ಜಾತಿ ವಿವಾಹ ನಡೆಯುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ಅಂತರ್ಜಾತಿ ವಿವಾಹ ದೇಶದಲ್ಲಿ ಸರಾಸರಿ ಪ್ರಮಾಣ ಶೇ 9.9 ಪ್ರತಿಶತ ಇದೆ. ಆದರೆ, ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹ ಪ್ರಮಾಣ ಶೇ 16.5 ಪ್ರತಿಶತ ನಡೆಯುತ್ತಿದ್ದು, ದೇಶದ ಸರಾಸರಿಗಿಂತ ಹೆಚ್ಚಾಗಿದೆ ಎಂದು ಕೆಲವು ಕನ್ನಡಿಗರು ಟ್ವೀಟ್ ಮಾಡಿದ್ದಾರೆ. ನಮ್ಮಲ್ಲಿ ಪ್ರಗತಿಪರರು ತಮಿಳು ಸಿನಿಮಾಗಳನ್ನು ನೋಡಿ ಅಲ್ಲಿ ಜನ ನಮಗಿಂತ ಮುಂದಿದ್ದಾರೆ. ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ ಎನ್ನುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ನಾವು ತಮಿಳುನಾಡಿಗಿಂತ ಸಾಕಷ್ಟು ಮುಂದಿದ್ದೇವೆ. ಅಂತರ್ಜಾತಿ ವಿವಾಹದ ವಿಷಯವನ್ನೇ ತೆಗೆದುಕೊಂಡರೆ ನಾವು ಅವರಿಗಿಂತ ಐದರಿಂದ ಆರುಪಟ್ಟು ಮುಂದಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಕೆಲವರು ತಮಿಳುನಾಡಿನಲ್ಲಿ ಜಾತಿ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣಗಳು ಹೆಚ್ಚಾಗಿವೆ ಎಂದು ಕೇಳಲ್ಪಟ್ಟಿದ್ದೇವೆ. ಆದರೆ, ಆ ಬಗ್ಗೆ ನಿಖರ ಮಾಹಿತಿ ಅಥವಾ ಅಂಕಿ - ಅಂಶ ಬಿಡುಗಡೆಯಾಗಬೇಕು ಎಂದಿದ್ದಾರೆ. ಅಂತರ್ಜಾತಿ ವಿವಾಹ ತಮಿಳುನಾಡಿನಲ್ಲಿ ಕಡಿಮೆ ಆಗುವುದಕ್ಕೆ ಅಲ್ಲಿ ಅಂತರ್ಜಾತಿ ವಿವಾಹವಾಗುವವರಿಗೆ ಪೂಕರ ವಾತಾವರಣ ಇಲ್ಲದೆ ಇರುವುದು ಸಹ ಕಾರಣವಾಗಿರಬಹುದು ಎಂದು ಕೆಲವು ಕನ್ನಡಿಗರು ಕಾಮೆಂಟ್ ಮಾಡಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಪ್ರಮಾಣ
ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಅಂತರ್ಜಾತಿ ವಿವಾಹ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ತೀರ ಭಿನ್ನವಾಗಿದೆ. ಅಂತರ್ಜಾತಿ ವಿವಾಹದ ಪ್ರಮಾಣದಲ್ಲಿ ದಕ್ಷಿಣ ಭಾರತದಲ್ಲೇ ಕೇರಳ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ 21.3 ಪ್ರತಿಶತ ಅಂತರ್ಜಾತಿ ವಿವಾಹ ನಡೆಯುತ್ತಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದ್ದು, ಇಲ್ಲಿ 16.5 ಪ್ರತಿಶತ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 7.6 ಪ್ರತಿಶತ ಹಾಗೂ ತಮಿಳುನಾಡಿನಲ್ಲಿ ಕೇವಲ 2.6 ಪ್ರತಿಶತ ಮಾತ್ರ ಅಂತರ್ಜಾತಿ ವಿವಾಹ ನಡೆಯುತ್ತಿದೆ. ಇನ್ನು ದೇಶದಲ್ಲಿ ಗೋವಾ, ಪಂಜಾಬ್ ಹಾಗೂ ಮೇಘಾಲಯದಲ್ಲಿ ದೇಶದಲ್ಲೇ ಹೆಚ್ಚು ಅಂತರ್ಜಾತಿ ವಿವಾಹಗಳು ನಡೆಯುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
I have compiled a new Map based on the IHDS-2 Data. The Results are quite different. The method the IHDS survey used was to ask married women whether their husband is of the same caste. Around 40,000+ Married Women were asked this question. pic.twitter.com/QUqMQsHmtQ
— Adityan Rajesh (@thatrocketgeek) September 8, 2023
ಟ್ವೀಟ್ ಮಾಹಿತಿ ಹಂಚಿಕೊಂಡಿರುವ ಆದಿತ್ಯನ್ ರಾಜೇಶ್
ಆದಿತ್ಯನ್ ರಾಜೇಶ್ ಎನ್ನುವವರು ದೇಶದಲ್ಲಿ ನಡೆಯುತ್ತಿರುವ ಅಂತರ್ಜಾತಿ ವಿವಾಹ ಪ್ರಮಾಣ ಹಾಗೂ ಅಂಕಿ - ಅಂಶಗಳನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
IHDS-2 ಡೇಟಾವನ್ನು ಆಧರಿಸಿ ನಕ್ಷೆಯನ್ನು (ಮ್ಯಾಪ್) ಮಾಡಿದ್ದಾರೆ. ಉದ್ದೇಶಿತ ಅಂತರ್ಜಾತಿ ವಿವಾಹ ಸಮೀಕ್ಷೆಗಾಗಿ ಬರೋಬ್ಬರಿ 40,000 ವಿವಾಹಿತ ಮಹಿಳೆಯರಿಗೆ ಪ್ರಶ್ನೆ ಕೇಳಿ ಮಾಹಿತಿ ಸಂಗ್ರಹ ಮಾಡಲಾಗಿದೆ. ನೀವು ಮತ್ತು ನಿಮ್ಮ ಪತಿ ಒಂದೇ ಜಾತಿಗೆ ಸೇರಿದವರೇ ಎನ್ನುವ ಪ್ರಶ್ನೆಯನ್ನು ಕೇಳುವ ಮೂಲಕ ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ಆದಿತ್ಯನ್ ಎನ್ನುವವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. India Human Development Survey ವರದಿಯ ಆಧಾರದ ಮೇಲೆ ಯಾವ ರಾಜ್ಯದಲ್ಲಿ ಎಷ್ಟು ಅಂತರ್ಜಾತಿ ವಿವಾಹ ನಡೆಯುತ್ತಿದೆ ಎನ್ನುವುದು ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.
-
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ












Click it and Unblock the Notifications