Instagram Love Story: ಇನ್ಸ್ಟಾಗ್ರಾಮ್‌ನಲ್ಲಿ ಲವ್: ನೇರವಾಗಿ ನೋಡಿದಾಗ ಯುವಕನಿಗೆ ಡಬಲ್ ಶಾಕ್!
Instagram Love Story: ಸೋಷಿಯಲ್ ಮೀಡಿಯಾದಲ್ಲಿ ಚಿತ್ರವಿಚಿತ್ರಗಳು ನಡೆಯುತ್ತಲ್ಲೇ ಇರುತ್ತವೆ. ಲಿಂಕ್ - ಕಮೆಂಟ್ ರೀಲ್ಸ್‌ಗಳಲ್ಲಿ ಜನ ಮೆಸೇಜ್ ಮಾಡಿಕೊಂಡು ಮಾತನಾಡುವ ಜಮಾನ. ಪ್ರೇಮ ಕತೆಗಳಿಗಂತೂ ಇಲ್ಲಿ ಬರವೇ ಇಲ್ಲ. ಆದರೆ ಮೋಸ ಹೋದವರೇ ಹೆಚ್ಚು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯನ್ನು ನೋಡಿ ಮೋಸ ಹೋಗಿರುವ ಯುವಕನ್ನು ನೋಡಿ ಜನ ಅಯ್ಯೋ ಪಾಪ ಅಂತಿದ್ದಾರೆ. ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಯುವತಿಯೊಬ್ಬಳ್ಳನು ಪ್ರೀತಿಸಿ ಮೋಸ ಹೋಗಿದ್ದಾನೆ. ಆದರೆ ಇವನ ಪ್ರೇಮಕತೆಗೆ ಜನ ನಗುತ್ತಿರುವುದೇ ಹೆಚ್ಚು.
ಸೋಷಿಯಲ್ ಮೀಡಿಯಾ ಹೆಚ್ಚು ಪ್ರಸಿದ್ಧಿ ಆದ ಮೇಲೆ ಯಾರು ಯಾರಿಗಾದರೂ ವಿಡಿಯೋ - ಮೆಸೇಜ್ ಕಳುಹಿಸಬಹುದು ಎನ್ನುವಂತೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲೇ ನೋಡಿ ಲವ್ ಮಾಡಿ ಮದುವೆಯನ್ನೂ ಆಗಿರುವವರು ತುಂಬಾ ಜನ ಇದ್ದಾರೆ. ಅದರಲ್ಲೂ ಒಂದು ರಾಂಗ್ ನಂಬರ್‌ನಿಂದಲೇ ಮದುವೆಯಾದವರೂ ನಮ್ಮ ದೇಶದಲ್ಲಿ ಇದ್ದಾರೆ. ಆದರೆ ಕಿಲಾಡಿ ಆಂಟಿ ಮಾಡಿರುವ ಆಟಕ್ಕೆ ಯುವಕನೊಬ್ಬ ಬಕ್ರ ಆಗಿದ್ದಾನೆ. ಯುವಕನ ಪರಿಸ್ಥಿತಿ ನೋಡಿ ನಗಬೇಕೋ ಅಥವಾ ಅಳಬೇಕೋ ಅಂತ ತಿಳಿಯದೆ ಜನ ಗೊಂದಲಕ್ಕೆ ಒಳಗಾಗಿದ್ದಾರೆ.

ಕೋಲಾರದ ಯುವಕನೊಬ್ಬ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಯುವತಿಯೊಂದಿಗೆ ಪ್ರೇಮದಲ್ಲಿ ಬಿದ್ದಿದ್ದಾನೆ. ಆದರೆ, ಆಕೆ ಯುವತಿ ಅಲ್ಲ ಆಂಟಿ ಅಂತ ತಿಳಿಯುವುದಕ್ಕೆ ಅವನಿಗೆ ತುಂಬಾ ದಿನಗಳೇ ಆಗಿವೆ. ಆತ ನೇರವಾಗಿ ನೋಡಿದ ಮೇಲೆ ಮೂರ್ಛೆ ಹೋಗುವುದೊಂದೇ ಬಾಕಿ ಮದುವೆಯಾಗೋಣ ಬಾ ಎನ್ನುತ್ತಿದ್ದಂತೆಯೇ ಯುವತಿ ನಂಬರ್ ಬ್ಲಾಕ್ ಮಾಡಿದ್ದಾರೆ. ಆದರೆ ಆಕೆ ಆಂಟಿಯೂ ಅಲ್ಲ ಮೂರು ಜನ ಮಕ್ಕಳ ತಾಯಿ ಅಂತ ಗೊತ್ತಾದ ಮೇಲೆ ಯುವಕ ಶಾಕ್ ಆಗಿದ್ದಾನೆ. ಇನ್ಸ್ಟಾಗ್ರಾಮ್‌ನಲ್ಲಿ ಒಂದು ಯುವತಿಯೊಂದಿಗೆ ಯುವಕನಿಗೆ ಲವ್ ಆಗಿದ್ದು. ಇಬ್ಬರೂ ಮೆಸೇಜ್ ಮಾಡಿಕೊಂಡು ಮಾತನಾಡಿದ್ದಾರೆ.
ಹುಡುಗಿಯನ್ನು ಹುಡುಕಿಕೊಂಡು ಕೋಲಾರದಿಂದ ಮಂಗಳೂರಿಗೆ ಯುವಕ ನವನೀತ್ ಹೋದ ಮೇಲೆಯೇ ಗೊತ್ತಾಗಿದೆ. ಆಕೆ ಯುವತಿಯಲ್ಲ ಗೃಹಿಣಿ ಎಂದು ಅದೂ ಅಲ್ಲದೇ ಆಕೆಗೆ ಮೂರು ಜನ ಮಕ್ಕಳಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಯುವಕ ಪೊಲೀಸ್ ಮೊರೆ ಹೋಗಿದ್ದಾನೆ. ಅಲ್ಲದೇ ಮೂರು ಮಕ್ಕಳಿದ್ದರೂ ಸರಿ ನಾನು ಆಕೆಯನ್ನೇ ಮದುವೆಯಾಗುತ್ತೇನೆ ಎನ್ನುತ್ತಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಸಕೆರೆ ಗ್ರಾಮದ ಶಿಲ್ಪ (ಹೆಸರು ಬದಲಾಯಿಸಲಾಗಿದೆ) ಪರಿಚಯವಾಗಿದೆ. ಈ ಪರಿಚಯ ಪ್ರೇಮವಾಗಿ ಬದಲಾಗಿದೆ. ಮದುವೆಯಾಗುವುದಾಗಿ ನಂಬಿಸಿರುವ ಆಂಟಿ ಆತನಿಂದ ಹಣವನ್ನೂ ತೆಗೆದುಕೊಂಡಿದ್ದಾಳೆ. ಆ ಮೇಲೆ ಯುವಕನ ನಂಬರ್ ಬ್ಲಾಕ್ ಮಾಡಿದ್ದಾಳೆ.












Click it and Unblock the Notifications